AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿಸಿ ಅತ್ಯಾಚಾರ ಎಸಗಿ, ಬೇರೆ ಮದುವೆ ಆಗಲು ಹೊರಟ ಯುವಕ; ನ್ಯಾಯಕ್ಕಾಗಿ ಸಂತ್ರಸ್ತೆ ಅಳಲು

ಯುವತಿ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದೇ ವಸತಿ ನಿಲಯ ಬಾಡಿಗೆ ನೀಡಿದ್ದ ಕಟ್ಟಡ ಮಾಲೀಕನ ಪುತ್ರನ ವಿರುದ್ಧ ಇದೀಗ ಮೋಸ ಮಾಡಿರುವ ಆರೋಪ ಮಾಡಿದ್ದಾರೆ.

ನಂಬಿಸಿ ಅತ್ಯಾಚಾರ ಎಸಗಿ, ಬೇರೆ ಮದುವೆ ಆಗಲು ಹೊರಟ ಯುವಕ; ನ್ಯಾಯಕ್ಕಾಗಿ ಸಂತ್ರಸ್ತೆ ಅಳಲು
ನಂಬಿಸಿ ಅತ್ಯಾಚಾರ ಎಸಗಿ, ಬೇರೆ ಮದುವೆ ಆಗಲು ಹೊರಟ ಯುವಕ; ನ್ಯಾಯಕ್ಕಾಗಿ ಸಂತ್ರಸ್ತೆ ಅಳಲು
TV9 Web
| Edited By: |

Updated on: Feb 21, 2022 | 1:20 PM

Share

ಬೆಳಗಾವಿ: ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಮೋಸ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇನ್ನೂ ಮೋಸ ಮಾಡಿದ ಯುವಕ ಇಂದು ಬೇರೆ ಯುವತಿ ಜೊತೆಗೆ ಮದುವೆ ಆಗುತ್ತಿದ್ದಾನೆ. ನ್ಯಾಯಕ್ಕಾಗಿ ನೊಂದ ಯುವತಿ ಬೆಳಗಾವಿ ಎಸ್.ಪಿ ಮೊರೆ ಹೋಗಿದ್ದಾರೆ. ಗೋಕಾಕ್‌ ನಗರದ ಆದರ್ಶ ಮಾಲದಿನ್ನಿ ವಿರುದ್ಧ ನೊಂದ ಯುವತಿ ಆರೋಪ ಮಾಡಿದ್ದಾರೆ.

ಯುವತಿ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದೇ ವಸತಿ ನಿಲಯ ಬಾಡಿಗೆ ನೀಡಿದ್ದ ಕಟ್ಟಡ ಮಾಲೀಕನ ಪುತ್ರನ ವಿರುದ್ಧ ಇದೀಗ ಮೋಸ ಮಾಡಿರುವ ಆರೋಪ ಮಾಡಿದ್ದಾರೆ. 2016ರ ಡಿಸೆಂಬರ್ 5ರಂದು ಯುವತಿಯನ್ನ ಮನೆಗೆ ಕರೆದು ಬಳಿಕ ಅತ್ಯಾಚಾರ ಎಸಗಿದ್ದನಂತೆ. ಅತ್ಯಾಚಾರ ಎಸಗುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಈ ವಿಷಯ ಬಹಿರಂಗ ಪಡಿಸಿದರೆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಂತೆ ಮದುವೆ ಆಗುವುದಾಗಿ ಮತ್ತೆ ಯುವತಿಯನ್ನ ನಂಬಿಸಿದ್ದಾನೆ. ಹೀಗೆ ನಂಬಿಸಿ ಅತ್ಯಾಚಾರ ಎಸಗಿ ಮೋಸ ಮಾಡಿರುವ ಯುವಕ ಇಂದು ಬೇರೆ ಯುವತಿ ಜೊತೆಗೆ ಮದುವೆ ಆಗುತ್ತಿರುವುದಾಗಿ ಯುವತಿ ಅಳಲು ತೋಡಿಕೊಂಡಿದ್ದಾರೆ.

ಈ ವಿಷಯವನ್ನ ಯುವತಿ, ಯುವಕನ ತಂದೆ ತಾಯಿ ಗಮನಕ್ಕೆ ತಂದಿದ್ದಾರೆ. ಆಗ ಯುವತಿಗೆ ಹಣದ ಆಮಿಷ ತೋರಿಸಿರುವ ಯುವಕನ ಪೋಷಕರು ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿದ್ದಾರೆ. ಇಂದು ಗೋಕಾಕ್‌ನಲ್ಲಿ ಬೇರೆ ಯುವತಿ ಜೊತೆಗೆ ಯುವಕ ಮದುವೆಯಾಗುತ್ತಿದ್ದು ನ್ಯಾಯ ದೊರಕಿಸಿಕೊಡುವಂತೆ ಮ‌ನವಿ ಮಾಡಿದ್ದಾರೆ‌. ವಕೀಲ ಎಂ.ಟಿ.ಪಾಟೀಲ್ ಮೂಲಕ ಎಸ್‌ಪಿ ಕಚೇರಿಗೆ ತೆರಳಿ ಯುವತಿ ದೂರು ನೀಡಿದ್ದಾರೆ. ನಿನ್ನೆ ಸಂಜೆ ಯುವತಿ ಎಸ್‌ಪಿ ಅವರಿಗೆ ಮನವಿ ಮಾಡಿಕೊಂಡಿದ್ದು ಇಂದು ಮದುವೆಯನ್ನ ತಡೆದು ತಮಗೆ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡಿದ್ದಾರೆ. ಆದ್ರೇ ಯುವತಿಗೆ ಅನ್ಯಾಯವಾದ ಬಗ್ಗೆ ಎಲ್ಲಿಯೂ ದೂರು ನೀಡಿಲ್ಲ.

ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ

ಇದನ್ನೂ ಓದಿ: Deepak Chahar Injury: ಭಾರತಕ್ಕೆ ದೊಡ್ಡ ಶಾಕ್: ರೋಹಿತ್​​ನ ನಂಬಿಕಸ್ಥ ಪ್ಲೇಯರ್ ಶ್ರೀಲಂಕಾ ಸರಣಿಯಿಂದ ಔಟ್?

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ