ಕನ್ನಡಿಗರ ಹೋರಾಟಕ್ಕೆ ಬೆದರಿದ್ರಾ ಮಹಾ ಸಚಿವರು? ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ಕ್ಯಾನ್ಸಲ್
karnataka Maharashtra Border Dispute: ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ಕ್ಯಾನ್ಸಲ್ ಆಗಿದೆ ಎಂದು ಸ್ವತಃ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಟಿವಿ9ಗೆ ತಿಳಿಸಿದ್ದಾರೆ.
ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ(Maharashtra Karnataka Border Row) ಸುಪ್ರೀಂ ಕೋರ್ಟ್ನಲ್ಲಿರುವಾಗಲೇ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಬುರಾಜ್ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಬೆಳಗಾವಿಗೆ ಆಗಮಿಸಿಯೇ ತೀರುತ್ತೇವೆ ಎಂದಿದ್ದರು. ಬೆಳಗಾವಿಗೆ ಬಂದು ಎಂಇಎಸ್ ಪುಂಡರ ಭೇಟಿಯಾಗಿ ನಗರದಲ್ಲಿ ಕೆಲವು ಕಡೆ ಪ್ರದಕ್ಷಿಣೆ ಹಾಕುತ್ತೇವೆ ಯಾರು ನಮ್ಮನ್ನು ತಡೆಯಲಾಗುವುದಿಲ್ಲ ಎಂದಿದ್ದರು. ಆದ್ರೆ ಈಗ ತಮ್ಮ ನಿಲುವು ಬದಲಾಯಿಸಿದ್ದಾರೆ. ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ಕ್ಯಾನ್ಸಲ್ ಆಗಿದೆ.
ಕನ್ನಡಿಗರ ಹೋರಾಟಕ್ಕೆ ಬೆದರಿದ್ರಾ ಮಹಾ ಸಚಿವರು?
ಮಹಾರಾಷ್ಟ್ರ ಸಚಿವದ್ವಯರ ಬೆಳಗಾವಿ ಭೇಟಿ ಕ್ಯಾನ್ಸಲ್ ಆಗಿದೆ ಎಂದು ಸ್ವತಃ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಟಿವಿ9ಗೆ ತಿಳಿಸಿದ್ದಾರೆ. ಬೆಳಗಾವಿ ಭೇಟಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ನಾವು ಇಂದಿನ ಬೆಳಗಾವಿ ಭೇಟಿ ರದ್ದುಗೊಳಿಸಿದ್ದೇವೆ. ಮೊದಲು ಡಿ.3ರಂದು ಬೆಳಗಾವಿ ಭೇಟಿಗೆ ನಾವು ನಿರ್ಧರಿಸಿದ್ದೆವು. ಆದ್ರೆ ಕೆಲ ದಲಿತ ಸಂಘಟನೆಗಳಿಂದ ಡಿ.6ರಂದು ಬರಲು ಮನವಿ ಇತ್ತು. ಹೀಗಾಗಿ ಡಿಸೆಂಬರ್ 6ರಂದು ಬೆಳಗಾವಿಗೆ ತೆರಳಲು ನಿರ್ಧರಿಸಿದ್ದೆವು. ಇಂದು ಡಾ.ಬಿ.ಆರ್.ಅಂಬೇಡ್ಕರ್‌ರವರ ಮಹಾ ಪರಿನಿರ್ವಾಣ ದಿನ. ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಅಹಿತಕರ ಘಟನೆ ನಡೆಯಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದೆಂದು ಭೇಟಿ ಕ್ಯಾನ್ಸಲ್ ಮಾಡಿದ್ದೇವೆ. ಶ್ರದ್ಧಾಂಜಲಿ ಸಲ್ಲಿಕೆಗೆ ನಮಗೆ ಅನುಮತಿ ನೀಡಬಹುದಿತ್ತು. ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿದ್ರೆ ಒಳ್ಳೆಯದಾಗುತ್ತಿತ್ತು. ಅನುಮತಿ ನೀಡಿಲ್ಲ, ಹೀಗಾಗಿ ಬೆಳಗಾವಿ ಭೇಟಿ ಕ್ಯಾನ್ಸಲ್ ಮಾಡಿದ್ದೇವೆ ಎಂದು ಟಿವಿ9ಗೆ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: Karnataka-Maharashtra Border Dispute: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ರಾಜ್ಯಕ್ಕೆ ಬರಲು ಬಿಡಲ್ಲ: ಆರ್. ಅಶೋಕ
ಮಹಾ ಸಚಿವರು ಬೆಳಗಾವಿಗೆ ಆಗಮಿಸದಂತೆ ಸಿಎಂ ಬೊಮ್ಮಾಯಿ, ರಾಜ್ಯ ಸಚಿವರು ವಾರ್ನ್ ಮಾಡಿದ್ದರು. ಇದಾದ ಬಳಿಕವೂ ಬೆಳಗಾವಿಗೆ ಬಂದೆ ಬರುತ್ತೇವೆ ಎಂದಿದ್ದ ಮಹಾ ಸಚಿವರಿಗೆ ಬೆಳಗಾವಿ ಡಿಸಿ ನಿರ್ಬಂಧ ಹೇರಿದ್ದರು. ಇನ್ನೊಂದು ಕಡೆ ಬೆಂಗಳೂರಿನಿಂದ ಕರವೇ ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಹೋರಾಟಗಾರರು ಬೆಳಗಾವಿಯತ್ತ ಹೊರಟಿದ್ದಾರೆ. ಇದರ ನಡುವೆ ಈಗ ಮಹಾ ಸಚಿವರು ತಮ್ಮ ಬೆಳಗಾವಿ ಭೇಟಿಯನ್ನು ರದ್ದು ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:06 am, Tue, 6 December 22