ಅಧಿಸೂಚನೆ ಬಳಿಕ ಗರಿಗೆದರಿದ ಕಳಸಾ ಕನಸು, ‘ಕಣಕುಂಬಿ’ಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿ: ಕೇಂದ್ರ ಸರ್ಕಾರ ಮಹದಾಯಿ ಅಧಿಸೂಚನೆ ಹೊರಡಿಸಿದ್ದೇ ತಡ. ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಗರಿಗೆದರಿ ಬಿಡ್ತು. ಬಿಜೆಪಿ ನಾಯಕರಂತೂ ಯೋಜನೆಯನ್ನೇ ಪೂರ್ಣಗೊಳಿಸಿಯೇ ಸಿದ್ಧ ಅಂತಾ ತಯಾರಾಗಿ ನಿಂತಿದ್ದಾರೆ. ಏನೇನು ಕಾನೂನು ತೊಡಕುಗಳಿವೆಯೋ ಅದ್ರ ಬಗ್ಗೆ ಸ್ಟಡಿ ಮಾಡಿ ಕಳಸಾ ಬಂಡೂರಿ ಯೋಜನೆ ಸಾಕಾರಗೊಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದ್ರಲ್ಲೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಉತ್ಸಾಹದ ಚಿಲುಮೆಯಂತಾಗಿದ್ದು, ತೊಡಕುಗಳ ನಿವಾರಣೆಗಾಗಿ ಇನ್ನಿಲ್ಲದ ವರ್ಕೌಟ್ ಶುರು ಮಾಡಿದ್ದಾರೆ. ‘ಕಣಕುಂಬಿ’ಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ: ಹೌದು.. ಮಹದಾಯಿ ಯೋಜನೆಯ ಸಿಹಿ […]
ಬೆಳಗಾವಿ: ಕೇಂದ್ರ ಸರ್ಕಾರ ಮಹದಾಯಿ ಅಧಿಸೂಚನೆ ಹೊರಡಿಸಿದ್ದೇ ತಡ. ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಗರಿಗೆದರಿ ಬಿಡ್ತು. ಬಿಜೆಪಿ ನಾಯಕರಂತೂ ಯೋಜನೆಯನ್ನೇ ಪೂರ್ಣಗೊಳಿಸಿಯೇ ಸಿದ್ಧ ಅಂತಾ ತಯಾರಾಗಿ ನಿಂತಿದ್ದಾರೆ.
ಏನೇನು ಕಾನೂನು ತೊಡಕುಗಳಿವೆಯೋ ಅದ್ರ ಬಗ್ಗೆ ಸ್ಟಡಿ ಮಾಡಿ ಕಳಸಾ ಬಂಡೂರಿ ಯೋಜನೆ ಸಾಕಾರಗೊಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದ್ರಲ್ಲೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಉತ್ಸಾಹದ ಚಿಲುಮೆಯಂತಾಗಿದ್ದು, ತೊಡಕುಗಳ ನಿವಾರಣೆಗಾಗಿ ಇನ್ನಿಲ್ಲದ ವರ್ಕೌಟ್ ಶುರು ಮಾಡಿದ್ದಾರೆ.
‘ಕಣಕುಂಬಿ’ಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ: ಹೌದು.. ಮಹದಾಯಿ ಯೋಜನೆಯ ಸಿಹಿ ಹಂಚಿಯೇ ಸಿದ್ಧ ಅಂತಾ ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದಾರೆ. ಜಲಸಂಪನ್ಮೂಲ ಸಚಿವರಾದ ಬಳಿಕ ಮೊದಲ ಬಾರಿಗೆ ಕಾಮಗಾರಿ ಸ್ಥಳ ಕಣಕುಂಬಿಗೆ ಭೇಟಿ ನೀಡಿದ್ರು. ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಹಿನ್ನೆಲೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಸಾಹುಕಾರ್, ಕೆಲ ಹೊತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ರು.
ಇದೇ ವೇಳೇ ಮಾತನಾಡಿದ ಸಚಿವ, ಕಾನೂನು ತೊಡಕುಗಳೆಲ್ಲವನ್ನು ನಿವಾರಿಸಿ ಕಾಮಗಾರಿ ಆರಂಭಿಸುತ್ತೇವೆ. ಕಳಸಾ ಬಂಡೂರಿ ನಾಲಾ ಕಾಮಗಾರಿಗೆ 1,500 ಕೋಟಿ ಅಲ್ಲ 2 ಸಾವಿರ ಕೋಟಿ ಹಣ ನೀಡಲು ಸರ್ಕಾರ ಸಿದ್ಧವಿದೆ ಅಂದ್ರು.
ಸದ್ಯ ಈ ಕಾಮಗಾರಿಗೆ 1,600 ಕೋಟಿ ಹಣ ಬೇಕಾಗುತ್ತೆ ಅಂತಾ ಅಂದಾಜಿಸಲಾಗಿದೆ. ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಇರುವ ಕಳಸಾ ನಾಲೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದ್ದು, ಈ ತಡೆಗೋಡೆ ತೆಗೆದರೆ ನೈಸರ್ಗಿಕವಾಗಿ ಹರಿಯುವ ಒಂದು ಟಿಎಂಸಿಯಷ್ಟು ನೀರು ಮಲಪ್ರಭಾ ನದಿಗೆ ಸೇರುತ್ತೆ.
ಕಳಸಾ ಹಳ್ಳಕ್ಕೆ 2 ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ರೆ, 1.72 ಟಿಎಂಸಿ ನೀರು ಮಲಪ್ರಭೆಗೆ ಸೇರಿ ಉತ್ತರ ಕರ್ನಾಟಕ ಜನರ ದಾಹ ತೀರಿಸಲಿದೆ. ಇದಕ್ಕಾಗಿ ಮಾರ್ಚ್ 5ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಹೋರಾಟಗಾರರು ಒತ್ತಾಯಿಸಿದ್ದಾರೆ.
ಒಟ್ನಲ್ಲಿ, ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರೋ ಸಮಯ ಸನ್ನಿಹಿತವಾಗಿದೆ. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ರಾಜ್ಯದ ಪರವಾಗಿಯೇ ಆದೇಶ ಬರುತ್ತೆ ಅನ್ನೋ ನಿರೀಕ್ಷೆ ಇದೆ. ಇದೇ ವಿಶ್ವಾಸದಲ್ಲಿರೋ ಜಲಸಂಪನ್ಮೂಲ ಸಚಿವರು ನಿನ್ನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.