ರೈತ ಪರ ಕಾಳಜಿಗೂ ಬರ… ಬರಗಾಲದ ಕುರಿತು ಚರ್ಚಿಸಲು ಬೆಳಗಾವಿ ಜಿಲ್ಲೆಯಲ್ಲಿ 18 ಶಾಸಕರ ಪೈಕಿ 3 ಮಂದಿ ಮಾತ್ರ ಸಭೆಗೆ ಹಾಜರು!

ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 15 ತಾಲೂಕುಗಳನ್ನ ಈಗಾಗಲೇ ಸರ್ಕಾರ ಬರ ಪೀಡಿತ ತಾಲೂಕು ಅಂತಾ ಘೋಷಣೆ ಮಾಡಿದ್ದು, ಕೇಂದ್ರದ ಅಧ್ಯಯನ ತಂಡ ಬಂದು ಭೇಟಿ ನೀಡಿ ಹೋಗಿದೆ. ಇದೀಗ ಜಿಲ್ಲಾ ಮಟ್ಟದಲ್ಲಿ ಬರ ನಿರ್ವಹಣೆ ಮಾಡುವ ಕುರಿತು ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆದಿದ್ದು ದುರಂತ ಅಂದ್ರೇ ಕೇವಲ ಮೂರು ಶಾಸಕರು ಹಾಜರಾಗಿದ್ದು ಜನರ ಬಗ್ಗೆ ಅವರಿಗಿರುವ ’ಕಾಳಜಿಯನ್ನು’ ಎತ್ತಿ ತೋರಿಸಿದೆ.

ರೈತ ಪರ ಕಾಳಜಿಗೂ ಬರ... ಬರಗಾಲದ ಕುರಿತು ಚರ್ಚಿಸಲು ಬೆಳಗಾವಿ ಜಿಲ್ಲೆಯಲ್ಲಿ 18 ಶಾಸಕರ ಪೈಕಿ 3 ಮಂದಿ ಮಾತ್ರ ಸಭೆಗೆ ಹಾಜರು!
ಬರಗಾಲದ ಕುರಿತು ಚರ್ಚಿಸಲು ಬೆಳಗಾವಿ ಜಿಲ್ಲೆಯಲ್ಲಿ 18 ಶಾಸಕರ ಪೈಕಿ 3 ಮಂದಿ ಮಾತ್ರ ಸಭೆಗೆ ಹಾಜರು!
Follow us
Sahadev Mane
| Updated By: ಸಾಧು ಶ್ರೀನಾಥ್​

Updated on:Nov 18, 2023 | 1:16 PM

ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 15 ತಾಲೂಕುಗಳನ್ನ ಈಗಾಗಲೇ ಸರ್ಕಾರ ಬರ ಪೀಡಿತ ತಾಲೂಕು ಅಂತಾ ಘೋಷಣೆ ಮಾಡಿದ್ದು, ಕೇಂದ್ರದ ಅಧ್ಯಯನ ತಂಡ ಬಂದು ಭೇಟಿ ನೀಡಿ ಹೋಗಿದೆ. ಇದೀಗ ಜಿಲ್ಲಾ ಮಟ್ಟದಲ್ಲಿ ಬರ (drought) ನಿರ್ವಹಣೆ ಮಾಡುವ ಕುರಿತು ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆದಿದ್ದು ದುರಂತ ಅಂದ್ರೇ ಕೇವಲ ಮೂರು ಶಾಸಕರು ಹಾಜರಾಗಿದ್ದು ಜನರ ಬಗ್ಗೆ ಅವರಿಗಿರುವ ’ಕಾಳಜಿಯನ್ನು’ ಎತ್ತಿ ತೋರಿಸಿದೆ. ಇತ್ತ ಸಭೆಗೆ ಬಂದ ಅಧಿಕಾರಿಗಳು ಮಾಡಿದ್ದೇನೂ? ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ? ನೀರಿನ ಮತ್ತು ಮೇವಿನ ವ್ಯವಸ್ಥೆ ಕುರಿತು ಸಚಿವರು ಹೇಳಿದ್ದೇನೂ? ಶಾಸಕರ ಗೈರಿಗೆ ಕಾರಣ ಎನೂ ಅಂತೀರಾ ಈ ಸ್ಟೋರಿ ನೋಡಿ. ಅಧಿಕಾರಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ, ಬೆಳಗಾವಿ ಜಿಲ್ಲೆಯ 18 ಶಾಸಕರ ಪೈಕಿ 15 ಜನ ಶಾಸಕರು ಗೈರು, ಮೊಬೈಲ್ ನಲ್ಲಿ ಬಿಜಿಯಾಗಿರುವ ಅಧಿಕಾರಿಗಳು, ಸಭೆ ನಡೆದ ಒಂದೇ ಗಂಟೆಯಲ್ಲಿ ಮುಕ್ತಾಯ, ಬೇಕಾಬಿಟ್ಟಿ ಸಭೆ ಮಾಡಿ ಹೊರ ಬಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ! ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ನಿನ್ನೆ ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha).

ಹೌದು ಸಿಎಂ ಸೂಚನೆ ಮೇರೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬರ ನಿರ್ವಹಣೆ ಸಭೆಯನ್ನ ಸುವರ್ಣ ವಿಧಾನಸೌಧದಲ್ಲಿ ಕರೆದಿದ್ದರು. 12 ಗಂಟೆಗೆ ಆರಂಭವಾದ ಸಭೆಗೆ ಸತೀಶ್ ಸೇರಿದಂತೆ ಮೂರು ಜನ ಶಾಸಕರು ಓರ್ವ ರಾಜ್ಯಸಭಾ ಸದಸ್ಯ ಹಾಜರಾಗಿದ್ದರು. ಜಿಲ್ಲೆಯಲ್ಲಿ 18 ಜನ ಶಾಸಕರಿದ್ದು ಈ ಪೈಕಿ 11ಜನ ಕಾಂಗ್ರೆಸ್ ಶಾಸಕರಿದ್ದಾರೆ. ಇದರಲ್ಲಿ 15 ಜನ ಶಾಸಕರು ಅದರಲ್ಲಿ ಬಿಜೆಪಿಯ ಎಲ್ಲ ಶಾಸಕರು, ಮೂರು ಜನ ಎಂಎಲ್ಸಿಗಳು ಗೈರಾಗಿದ್ದರು. ಬರ ನಿರ್ವಹಣೆ ಸಭೆಯಲ್ಲಿ ಶಾಸಕರು ಗೈರಾಗಿದ್ದು ಜನರ ಬಗ್ಗೆ, ರೈತರ ಬಗ್ಗೆ ಎಷ್ಟರ ಮಟ್ಟಿಗೆ ಅವರಿಗಳಿಗೆ ಕಾಳಜಿ ಇದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಯಿತು. ಇತ್ತ ಸಿಎಂ ಸೂಚನೆ ಮೇರೆಗೆ ಸಭೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಕೇವಲ ಒಂದೇ ಗಂಟೆಯಲ್ಲಿ ಸಭೆಯನ್ನ ಮುಗಿಸಿದ್ದು ಬೇಕಾಬಿಟ್ಟಿ ಸಭೆ ಮಾಡಿ ಹೊರ ಬಂದಿದ್ದು ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಶಾಸಕರು ಕೂಡ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಸಭೆಗೆ ಗೈರಾದ ಇತರ ಶಾಸಕರು: ಆಸೀಫ್ ಸೇಟ್ (ಬೆಳಗಾವಿ ಉತ್ತರ), ಅಭಯ ಪಾಟೀಲ (ಬೆಳಗಾವಿ ದಕ್ಷಿಣ), ವಿಠಲ ಹಲಗೇಕರ (ಖಾನಾಪುರ), ಮಹಾಂತೇಶ ಕೌಜಲಗಿ (ಬೈಲಹೊಂಗಲ), ಅಶೋಕ ಪಟ್ಟಣ (ರಾಮದುರ್ಗ), ಬಾಬಾಸಾಹೇಬ ಪಾಟೀಲ (ಕಿತ್ತೂರು), ರಮೇಶ ಜಾರಕಿಹೊಳಿ ( ಗೋಕಾಕ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ನಿಖಿಲ್ ಕತ್ತಿ (ಹುಕ್ಕೇರಿ), ಗಣೇಶ ಹುಕ್ಕೇರಿ (ಚಿಕ್ಕೋಡಿ), ರಾಜು ಕಾಗೆ (ಕಾಗವಾಡ), ಲಕ್ಷ್ಮಣ ಸವದಿ (ಅಥಣಿ), ಶಶಿಕಲಾ ಜೊಲ್ಲೆ (ನಿಪಾಣಿ), ಮತ್ತು ದುರ್ಯೋಧನ ಐಹೊಳೆ (ರಾಯಬಾಗ).

ಇನ್ನು ಸಭೆಗೆ ಹಾಜರಾಗಿದ್ದ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೂ ಕೂಡ ಸಭೆಯ ಗಂಭೀರತೆ ಗೊತ್ತಾಗಲೇ ಇಲ್ಲಾ. ಬಹುತೇಕ ಅಧಿಕಾರಿಗಳು ಮೊಬೈಲ್ ನಲ್ಲಿ ವಾಟ್ಸಪ್, ಗ್ಯಾಲರಿ, ಗೂಗಲ್ ನಲ್ಲಿ ನೋಡ್ತಾ ಬಿಜಿಯಾಗಿದ್ದರು. ಬರ ಮೀಟಿಂಗ್ ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೇವು ಬ್ಯಾಂಕ್ ತೆಗೆಯುವ ಕುರಿತು ಚರ್ಚೆ ಆಯಿತು. ಇತ್ತ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಆದ್ರೇ ಟೆಂಡರ್ ಕರೆದು ಟ್ಯಾಂಕರ್ ಮೂಲಕ ನೀರು ಸಪ್ಲೈ ಮಾಡುವಂತೆ ಜಿಲ್ಲಾಧಿಕಾರಿಕಾರಿಗಳಿಗೆ ಸಚಿವ ಸತೀಶ್ ಸೂಚನೆ ನೀಡಿದರು.

ಇದನ್ನೂ ಓದಿ:  ವಿಜಯೇಂದ್ರ ಕೈಕೆಳಗೆ ನಾವು ಹೇಗೆ ಕೆಲಸ ಮಾಡುವುದು; ರಮೇಶ್ ಜಾರಕಿಹೊಳಿ ಪ್ರಶ್ನೆ

ಇದೇ ವೇಳೆ ಉದ್ಯೋಗ ಖಾತ್ರಿ ಯೋಜನೆಯನ್ನ ಬರೀ ಅದೇ ಗ್ರಾಮದಲ್ಲಿ ಮಾಡಿಸಿದ್ದ ಕೆಲಸವನ್ನೇ ಮಾಡಿಸಬೇಡಿ, ಕಾಲುವೆ ಹೂಳೆತ್ತುವುದು, ರೈತರ ಜಮೀನಿಗೆ ಸಂಪರ್ಕಿಸುವ ರಸ್ತೆ ಮಾಡುವ ಕೆಲಸವನ್ನ ಮಾಡಿಸಿ ಅಂತಾ ಸೂಚನೆ ನೀಡಿದರು. ಜಲಜೀವನ್ ಮಿಷನ್ ಯೋಜನೆಯನ್ನೂ ಕಂಪ್ಲೀಟ್ ಮಾಡುವಂತೆ ಕೂಡ ಸೂಚನೆ ನೀಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 800 ಮೆಗಾ ವ್ಯಾಟ್ ವಿದ್ಯುತ್ ಅವಶ್ಯಕತೆ ಇದ್ದು ಎಲ್ಲವೂ ಪೂರೈಕೆ ಆಗಿದ್ದು ಏಳು ಗಂಟೆ ರೈತರಿಗೆ ವಿದ್ಯುತ್ ನೀಡುತ್ತಿದ್ದೇವೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ 3 ಲಕ್ಷ 65ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, 410 ಕೋಟಿ ಹಾನಿಯಾಗಿದ್ದು ಕೇಂದ್ರ ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದರು. ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡದೇ ಆದಷ್ಟು ಬೇಗ ಕೇಂದ್ರ ಸರ್ಕಾರ ಪರಿಹಾರ ನೀಡಿದ್ರೇ ಅನುಕೂಲ ಆಗುತ್ತೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಭೀಕರ ಬರ ಕಾಡುತ್ತಿದ್ದು ಸಾಕಷ್ಟು ಕಡೆಗಳಲ್ಲಿ ಜಾನುವಾರುಗಳಿಗೆ ನೀರು ಸಿಗ್ತಿಲ್ಲ, ಮೇವು ಸಿಗ್ತಿಲ್ಲ ಅನ್ನೋ ಮಾತು ರೈತರದ್ದು. ಬೆಳಗಾವಿ ಜಿಲ್ಲೆ ಈ ವರ್ಷ ಶೇ.61 ರಷ್ಟು ಮಳೆ ಕೊರತೆ ಎದುರಿಸುತ್ತಿದೆ. ಸದ್ಯ ಎನೂ ಆಗೇ ಇಲ್ಲಾ ಅಂತಾ ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದು ಇತ್ತ ಶಾಸಕರು ಕೂಡ ಬರ ಮೀಟಿಂಗ್ ಗೈರಾಗಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ರೈತರು, ಜನರು ಬೀದಿಗಿಳಿಯುವ ಮುನ್ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬರಗಾಲ ನಿರ್ವಹಣೆಯಲ್ಲಿ ಭಾಗಿಯಾಗಿ ಎಲ್ಲರನ್ನ ಬದುಕಿಸುವ ಕೆಲಸ ಮಾಡ್ತಾರಾ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:14 pm, Sat, 18 November 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್