ಇಂದು ಕೂಡ ಚಿರತೆಗಾಗಿ ಮುಂದುವರೆದ ಹುಡುಕಾಟ: ಬೆಳಗಾವಿಯ 22 ಸರ್ಕಾರಿ, ಖಾಸಗಿ ಶಾಲೆಗೆ ರಜೆ ಘೋಷಣೆ

ಚಿರತೆ ಸೆರೆಯಾಗದ ಕಾರಣ ಇಂದು ಮತ್ತೆ ಹತ್ತು ಗಂಟೆಯಿಂದ ಚಿರತೆ ಸೆರೆ ಕಾರ್ಯಾಚರಣೆ ಆರಂಭಗೊಳ್ಳಲಿದೆ. 21 ದಿನ ಕಳೆದ್ರೂ ಸಿಗದ ಚಿರತೆ, ಭಯ ಭೀತಿಯಲ್ಲಿ ನಗರದ ಜನರು ಓಡಾಡುವಂತ್ತಾಗಿದೆ.  

ಇಂದು ಕೂಡ ಚಿರತೆಗಾಗಿ ಮುಂದುವರೆದ ಹುಡುಕಾಟ: ಬೆಳಗಾವಿಯ 22 ಸರ್ಕಾರಿ, ಖಾಸಗಿ ಶಾಲೆಗೆ ರಜೆ ಘೋಷಣೆ
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ (ಸಂಗ್ರಹ ಚಿತ್ರ)
Edited By:

Updated on: Aug 25, 2022 | 9:53 AM

ಬೆಳಗಾವಿ: ಜಿಲ್ಲೆಯಲ್ಲಿ ಗಾಲ್ಫ್ ಮೈದಾನದಲ್ಲಿ ಚಿರತೆ (Leopard) ಪ್ರತ್ಯಕ್ಷ ಹಿನ್ನೆಲೆ ಇಂದು ಕೂಡ ಚಿರತೆ ಕಾಣಿಸಿಕೊಂಡ ಪ್ರದೇಶದ ಸುತ್ತಮುತ್ತ ಶಾಲೆಗಳಿಗೆ ರಜೆ ಮುಂದುವರಿಕೆ‌ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದ ಸರ್ಕಾರಿ,‌ ಖಾಸಗಿ ಸೇರಿ 22 ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಆನ್ ಲೈನ್​ನಲ್ಲೇ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ. ಗಾಲ್ಫ್ ಮೈದಾನದಲ್ಲಿ ಆನೆಗಳಿಂದ ಎರಡನೇ ದಿನವೂ ಆಪರೇಷನ್ ಚಿರತೆ ನಡೆಯಲಿದೆ. ಸಕ್ರೆಬೈಲ್​ದಿಂದ ಆಗಮಿಸಿರುವ ಆಲೆ, ಅರ್ಜುನ ಆನೆಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ನಿನ್ನೆ ಆನೆಗಳ ಎರಡು ಟೀಮ್ 250ಎಕರೆ, ಏಳು ಕಿಮೀ ನಷ್ಟು ಸುತ್ತು ಹಾಕಿ ಚಿರತೆ ಹುಡುಕಿದ್ದವು. ಚಿರತೆ ಸೆರೆಯಾಗದ ಕಾರಣ ಇಂದು ಮತ್ತೆ ಹತ್ತು ಗಂಟೆಯಿಂದ ಚಿರತೆ ಸೆರೆ ಕಾರ್ಯಾಚರಣೆ ಆರಂಭಗೊಳ್ಳಲಿದೆ. 21 ದಿನ ಕಳೆದ್ರೂ ಸಿಗದ ಚಿರತೆ, ಭಯ ಭೀತಿಯಲ್ಲಿ ನಗರದ ಜನರು ಓಡಾಡುವಂತ್ತಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಚಿರತೆ ಸೆರೆಗೆ ಆಪರೇಷನ್ ಗಜಪಡೆ; ಇಂದೂ ಸಿಗದ ಚಿರತೆ

18 ದಿನಗಳಿಂದ ಕಾಡುತ್ತಿದ್ದ ಚಿರತೆ ಹಿಡಿಯಲು ಆಪರೇಷನ್ ಗಜಪಡೆ

ಬೆಳಗ್ಗೆ 6.30ರ ಸುಮಾರಿಗೆ ಬೆಳಗಾವಿ ಹಿಂಡಲಗಾ ಗ್ರಾಮದ ಕ್ಯಾಂಪ್ ಪ್ರದೇಶದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದನ್ನ ನೋಡಿದ್ದ ಖಾಸಗಿ ಬಸ್ ಚಾಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಡಿಸಿ ನಿತೇಶ್ ಪಾಟೀಲ್ ನಗರ ಹಾಗೂ ಗ್ರಾಮೀಣ ಭಾಗದ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದರು. ಇತ್ತ ಚಿರತೆ ಹಿಡ್ಯೋಕೆ ಅರಣ್ಯ ಇಲಾಖೆಯ 20 ಸಿಬ್ಬಂದಿ ಫೀಲ್ಡಿಗಿಳದಿದ್ದಾರೆ. ಆದರೆ ಸರಿಯಾದ ಪ್ಲ್ಯಾನ್ ಮಾಡದ ಕಾರಣ ಅಧಿಕಾರಿಗಳ ಕಣ್ಮುಂದೆಯೇ ಗಾಲ್ಫ್ ಮೈದಾನದತ್ತ ಎಸ್ಕೇಪ್ ಆಗಿತ್ತು. ಸ್ಥಳಕ್ಕೆ ಬಂದ ಶಾಸಕ ಅನಿಲ್ ಬೆನಕೆ ಸಿಬ್ಬಂದಿ ಬೇಜವಾಬ್ದಾರಿಗೆ ಅಸಮಧಾನ ಹೊರ ಹಾಕಿದ್ರು.

ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು 2 ಗಂಟೆಗಳು ಹುಡುಕಾಡಿದ್ರೂ 200 ಎಕರೆ ಅರಣ್ಯ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿಲ್ಲ. ಕೊನೆಗೆ ಹುಕ್ಕೇರಿಯಿಂದ ಹಂದಿ ಹಿಡಿಯುವ ಕೆಲ ಯುವಕರ ಜತೆಗೆ 20 ನಾಯಿಗಳನ್ನ ಕರೆಸಿ ಮತ್ತೆ ಆಪರೇಷನ್ ಶುರು ಮಾಡಿದ್ರು. ಡ್ರೋನ್ ಹಾರಿಸಿದ್ರೂ ಚಿರತೆಯ ಸುಳಿವೇ ಸಿಗ್ಲಿಲ್ಲ. ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಡಿಸಿ, ಎಸ್‌ಪಿ ಸೇರಿದಂತೆ ಕೆಲ ಸಿಬ್ಬಂದಿ ಜತೆ ಸಭೆ ಮಾಡಿ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದ್ರು. ಸದ್ಯ ನಾಳೆ ಬೆಳಗ್ಗೆ ಇಬ್ಬರು ಶೂಟರ್ಸ್, 120ಅರಣ್ಯ ಇಲಾಖೆ ಸಿಬ್ಬಂದಿ, 80ಪೊಲೀಸ್ ಸಿಬ್ಬಂದಿಯನ್ನ ಬೇಟೆಗಿಳಿಸೋ ಪ್ಲ್ಯಾನ್ ಮಾಡಿದ್ದಾರೆ. ಹಾಗೇ ಸಕ್ರೇಬೈಲ್​ನಿಂದ ಸಾಕಾನೆಗಳನ್ನ ಕರೆಸೋಕೂ ತಯಾರಿ ನಡೆದಿದೆ. ಚಿರತೆ ಸಿಗದಿದ್ದಕ್ಕೆ ಇಂದು ಕೂಡ ಬೆಳಗಾವಿ ನಗರದ 22ಶಾಲೆಗಳಿಗೆ ರಜೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Web contact

TV9 Kannada

Read More
Follow Us