ಅಂಕಲ್- ಆಂಟಿ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್: ಒಬ್ಬನಿಗಾಗಿ ಇಬ್ಬರ ಮಹಿಳೆಯರ ಹೊಡೆದಾಟ
ಬೆಳಗಾವಿಯಲ್ಲಿ ಅಂಕಲ್, ಆಂಟಿ ಲವ್ ಸ್ಟೋರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈಗಾಗಲೇ ಇಬ್ಬರು ಮಾಡಿದ ಕೆಲಸಕ್ಕೆ ಅನೇಕರು ಕಷ್ಟ ಅನುಭವಿಸುಂತೆ ಆಗಿದೆ. ಈ ನಡುವೆ ಏಂಜಾಯ್ ಮೂಡ್ ನಲ್ಲಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ನಡು ಬೀದಿಯಲ್ಲಿ ಹೊಡೆದಾಟ ನಡೆದಿದ್ದು, ನೋಡುಗರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ? ಈ ಸ್ಟೋರಿ ನೋಡಿ.

ಬೆಳಗಾವಿ, (ಫೆಬ್ರವರಿ 14): ಬೆಳಗಾವಿಯ ಅಂಕಲ್, ಆಂಟಿ ಲವ್ ಸ್ಟೋರಿಗೆ ಹೊಸ ತಿರುವು ಸಿಕ್ಕಿದೆ. ನಡು ರಸ್ತೆಯಲ್ಲಿ ಮಹಿಳೆಯರಿಬ್ಬರ ಫೈಟಿಂಗ್. ಒಬ್ಬರನ್ನು ಒಬ್ಬರು ಜಡೆ ಹಿಡಿದು, ಜಗ್ಗಾಟ ಮಾಡಿ ಹೊಡೆದಾಡಿಕೊಂಡಿದ್ದಾರೆ. ಬೆಳಗಾವಿಯ ಕೃಷ್ಣ ದೇವರಾಯ ವೃತ್ತದ ಬಳಿ ಈ ಘಟನೆ ನಡೆದಿದೆ. ಇಟ್ಟುಕೊಂಡಾಕೆಯ ಜಡೆ ಜಗ್ಗಿದ್ದಕ್ಕೆ ಹೆಂಡತಿ ಮೇಲೆ ಗಂಡನ ರೋಷಾವೇಶ ನೋಡಿದ ಸಾರ್ವಜನರಿಗೆ ಗಾಬರಿಯಾಗಿದ್ದಾರೆ. ಹೊಡೆದಾಡಿಕೊಂಡುವರು ಮಾಸಾಬಿ ಹಾಗೂ ವಾಣಿಶ್ರೀ. ಇಬ್ಬರು ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ನಿವಾಸಿಗಳು. ವಾಣಿಶ್ರೀ ಗಂಡ ಬಸವರಾಜ್ ಎನ್ನುವಾತನ ಜೊತೆ ಮಾಸಾಬಿ ಅನೈತಿಕ ಸಂಬಂಧ ಹೊಂದಿದ್ದು, ಮನೆ ಬಿಟ್ಟು ಓಡಿಹೋಗಿದ್ದರು. ಆದ್ರೆ, ಅಚಾನಕ್ ಆಗಿ ಇಬ್ಬರು ಒಟ್ಟಿಗೆ ಇರುವುದು ವಾಣಿಶ್ರೀ ಕಣ್ಣಿಗೆ ಬಿದ್ದಿದ್ದು, ಆಗ ವಾಣಿಶ್ರೀ, ಮಾಸಾಬಿ ಜೊತೆ ಜಗಳಕ್ಕೆ ಇಳಿದಿದ್ದಾಳೆ. ಹೀಗೆ ಈ ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಕೂದಲು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.
ವಾಣಿಶ್ರೀ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು ಎಂಟು ವರ್ಷದ ಹಿಂದೆ ಬಸವರಾಜ್ ಎಂಬಾತನನ್ನ ಮದುವೆಯಾಗಿದ್ದು ಮೂರು ಮಕ್ಕಳು ಕೂಡ ಇವೆ. ಆದ್ರೇ ಇಲ್ಲಿ ವಾಣಿಶ್ರೀ ಹಾಗೂ ಮಾಸಾಬಿ ಹೀಗೆ ಹೊಡೆದಾಟ ಮಾಡಲು ಕಾರಣವೇ ಅನೈತಿಕ ಸಂಬಂಧ. ಮಾಸಾಬಿ ಇದೇ ವರ್ಷದ ಜನವರಿ 1ರಂದು ಮಾರಿಹಾಳ ಗ್ರಾಮದ ಬಸವರಾಜ್ ಸೀತಿಮನಿ ಎಂಬಾತನ ಜೊತೆಗೆ ಓಡಿ ಹೋಗಿದ್ದಳು. ಹೀಗೆ ಹೋಡಿ ಹೋಗುವ ಸಂದರ್ಭದಲ್ಲಿ ಮನೆಯ ಆಸ್ತಿ ದಾಖಲೆ, ಒಡವೆ ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದಳು. ಈ ಬಗ್ಗೆ ಮಾಸಾಬಿ ಪತಿ ಆಸೀಫ್ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಮೊದಲು ನಾಪತ್ತೆ ಹಾಗೂ ಬಳಿಕ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದರು. ಬಳಿಕ ಇವರನ್ನು ಕರೆತಂದು ವಿಚಾರಣೆ ಮಾಡಿದ ಪೊಲೀಸರು, ಇಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ಹೋಗಿದ್ದೇವೆ ಎಂದು ಹೇಳಿದ್ದರು. ಬಳಿಕ ಪೊಲೀಸರು ಇಬ್ಬರನ್ನು ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ: 18 ವರ್ಷದ ಹುಡುಗಿ ಜೊತೆ 50 ರ ವ್ಯಕ್ತಿಯ ಲವ್ವಿ ಡವ್ವಿ, ಅಜ್ಜಿ ಮನೆಯಲ್ಲಿದ್ದ ಹುಡುಗಿ ನಾಪತ್ತೆ
ಇನ್ನೂ ಪೊಲೀಸ್ ಕೇಸ್ ಬಳಿಕ ಬಸವರಾಜ್ ಸೀತಿಮನಿ ತನ್ನ ಇಬ್ಬರು ಮಕ್ಕಳನ್ನು ಸಹ ಮನೆಯಿಂದ ಕರೆದುಕೊಂಡು ಹೋಗಿ ಮಾಸಾಬಿ ಜೊತೆಗೆ ವಾಸವಿದ್ದಾನೆ. ತನಗೆ ನ್ಯಾಯ ಬೇಕು ಎಂದು ಕೆಲ ದಿನಗಳ ಹಿಂದೆ ವಾಣಿಶ್ರೀ ಕೂಡ ಮಾರಿಹಾಳ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಳು. ಇದಾದ ಬಳಿಕ ಊರು ಬಿಟ್ಟ ಗಂಡನನ್ನ ಹುಡುಕಾಟದಲ್ಲಿ ಹೆಂಡತಿ ಇದ್ದಳು. ಪತಿ ಪರಸ್ತ್ರೀ ಸಂಘದಿಂದ ಪತ್ನಿ ವಾಣಿಶ್ರೀ ಈಗ ಕಂಗಾಲ್ ಆಗಿ ಹೋಗಿದ್ದಳು. ಮನೆಯ ನಿರ್ವಹಣೆ ಸೇರಿ ಯಾವುದಕ್ಕೂ ಹಣ ಇಲ್ಲದೇ ಪರದಾಟ ಮಾಡುತ್ತಿದ್ದಾಳೆ. ಜೊತೆಗೆ ಮಕ್ಕಳು ಸಹ ಬಳಿಯಲ್ಲಿ ಇಲ್ಲ.
ಈ ನಡುವೆ ಮಸಾಬಾ ಹಾಗೂ ಪತಿ ಬಸವರಾಜ್ ಸೀತಿಮನಿ ಊರು ಬಿಟ್ಟವರು ಬೆಳಗಾವಿ ನಗರಕ್ಕೆ ಬಂದು ಇಲ್ಲೇ ಬಾಡಿಗೆ ಮನೆ ಮಾಡಿಕೊಂಡು ಜಾಲಿಯಾಗಿ ಓಡಾಡುತ್ತಿದ್ದರು. ಗಂಡನ ಹುಡಕಾಟದಲ್ಲಿದ್ದ ವಾಣಿಶ್ರೀಗೆ ಅಕಸ್ಮಾತ್ ಆಗಿ ನಿನ್ನೆ ಕೃಷ್ಣದೇವರಾಯ ವೃತ್ತದ ಬಳಿಯಲ್ಲಿ ಇಬ್ಬರು ಜಾಲಿಯಾಗಿ ಓಡಾಡುವುದನ್ನು ನೋಡಿದ್ದಾಳೆ, ಆಗ ವಾಣಿಶ್ರೀಗೆ ಇನ್ನಿಲ್ಲ ಸಿಟ್ಟು ಬಂದಿದೆ. ಮಾಸಾಬಿ ಜೊತೆಗೆ ಜಗಳಕ್ಕೆ ಇಳಿದಿದ್ದಾಳೆ. ಹೀಗೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ಇಬ್ಬರು ನಡು ರಸ್ತೆಯಲ್ಲಿ ಜಡೆ ಹಿಡಿದು ಹೊಡೆದಾಡಲು ಆರಂಭ ಮಾಡಿದ್ದಾರೆ. ಈ ದೃಶ್ಯಗಳನ್ನ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಅಲ್ಲೇ ಇದ್ದ ಕೆಲ ಸ್ಥಳಿಯರು ಜಗಳ ಬಿಡಿಸಿ, ಮನೆಗೆ ವಾಪಸ್ ಕಳುಹಿಸಿದ್ದಾರೆ.
ಒಟ್ಟಾರೆಯಾಗಿ ಮಾರಿಹಾಳ ಅಂಕಲ್- ಆಂಟಿ ಲವ್ ಸ್ಟೋರಿ ಪ್ರಕರಣ ದಿನಕ್ಕೆ ಒಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇವರ ಈ ಲವ್ ಸ್ಟೋರಿಯಿಂದ ಸದ್ಯ ಎರಡು ಕುಟುಂಬಗಳ ನೆಮ್ಮದಿ ಹಾಳಾಗಿದೆ. ಈ ನಡುವೆ ಬಸವರಾಜ್ ಸೀತಿಮನಿ ಪರಸ್ತ್ರೀ ಜೊತೆಗೆ ಓಡಾಡುವುದನ್ನ ಸಹಿಸಿಕೊಳ್ಳಲು ಆಗದೇ ಹೆಂಡತಿ ಜಗಳಕ್ಕಿಳಿದ್ರೇ ಆಕೆಯ ಮೇಲೆಯೆ ಗಂಡ ಹಲ್ಲೆ ಮಾಡಿದ್ದು ದಿಕ್ಕೆ ತೋಚದ ಸ್ಥಿತಿಯಲ್ಲಿ ಹೆಂಡತಿ ಇದ್ದಾಳೆ. ಇವರ ಹಾದಿ ಬೀದಿ ರಂಪಾಟ ಯಾವಾಗ ಮುಗಿಯುತ್ತೆ ಅನ್ನೋದೇ ಕುಟುಂಬಸ್ಥರಿಗೆ ಚಿಂತೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ