BMTC ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಕೇಸ್ ಹೆಚ್ಚಳ​: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳುವುದೇನು?

ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಬಿಎಂಟಿಸಿ ಬಸ್​ ಚಾಲಕ ಮತ್ತು ನಿರ್ವಾಹಕನ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿರುವಂತಹ ಘಟನೆ ನಡೆದಿದ್ದು, ಸದ್ಯ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಕೇಸ್ ಮಾಡುವುದಕ್ಕಿಂತ ಶಿಕ್ಷೆ ಮುಖ್ಯ ಎಂದು ಹೇಳಿದ್ದಾರೆ.

BMTC ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಕೇಸ್ ಹೆಚ್ಚಳ​: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳುವುದೇನು?
BMTC ಚಾಲಕ, ನಿರ್ವಾಹಕರ ಮೇಲಿನ ಹಲ್ಲೆ ಕೇಸ್ ಹೆಚ್ಚಳ​: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳುವುದೇನು?
Edited By:

Updated on: Oct 27, 2024 | 5:44 PM

ಬೆಂಗಳೂರು, ಅಕ್ಟೋಬರ್​ 27: ಟ್ಯಾನರಿ ರಸ್ತೆಯಲ್ಲಿ ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಬಸ್ (BMTC) ಚಾಲಕ ಮತ್ತು​ ಕಂಡಕ್ಟರ್ ಮೇಲೆ ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಕೇಸ್ ಮಾಡುವುದು ಮುಖ್ಯವಲ್ಲ, ಶಿಕ್ಷೆ ಆಗಬೇಕು ಎಂದ ಸಚಿವ ರಾಮಲಿಂಗಾರೆಡ್ಡಿ

ಪ್ರಕರಣ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ರಾಮಲಿಂಗಾರೆಡ್ಡಿ, ನಿನ್ನೆ ನಡೆದಿರುವ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. BMTC ಎಂಡಿ ರಾಮಚಂದ್ರನ್, ಪೊಲೀಸ್​ ಆಯುಕ್ತರ ಭೇಟಿ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗಿಲ್ಲ ರಕ್ಷಣೆ: 2 ತಿಂಗಳಲ್ಲಿ 4 ಹಲ್ಲೆ​ ಪ್ರಕರಣ ಬೆಳಕಿಗೆ

ಡ್ರೈವರ್​, ಚಾಲಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕೇಸ್ ಮಾಡುವುದು ಮುಖ್ಯವಲ್ಲ, ಶಿಕ್ಷೆ ಆಗುವ ರೀತಿಯಲ್ಲಿ ಮಾಡಬೇಕು. ಜೈಲಿಗೆ ಹೋಗುವ ರೀತಿ ಮಾಡಬೇಕು, ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಹೇಳಿದ್ದಾರೆ.

ಮಹಿಳಾ ಪ್ರಯಾಣಿಕರು ಆಕ್ರೋಶ

ಇನ್ನು ಈ ವಿಚಾರವಾಗಿ ಬಿಎಂಟಿಸಿಯ ಮಹಿಳಾ ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದು, ಕಂಡಕ್ಟರ್, ಡ್ರೈವರ್ ಮೇಲೆ ಹಲ್ಲೆ ಮಾಡಿದವರನ್ನು ಗಲ್ಲು ಶಿಕ್ಷೆ ಹಾಕಬೇಕು. ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್​ಗಳು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾರೆ. ಅವರ ಮೇಲೆ ಹಲ್ಲೆ ಮಾಡಿದರೆ ಹೇಗೆ? ಅವರ ಕುಟುಂಬ ಏನು ಮಾಡಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್​ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ, ಎಫ್ಐಆರ್ ದಾಖಲು

ಕಂಡಕ್ಟರ್, ಡ್ರೈವರ್ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ತುಂಬಾ ಬೇಜಾರು ಆಯಿತು ವಿಡಿಯೋ ನೋಡಿ. ಅವರು ಕೆಲಸಕ್ಕೆ ಬರುವುದು ಹೊಟ್ಟೆ ಪಾಡಿಗಾಗಿ. ಹೀಗೆ ಅವರ ಮೇಲೆ ಹಲ್ಲೆ ಮಾಡಿದರೆ ಹೇಗೆ? ತುಂಬಾ ರಿಸ್ಕ್ ತಗೊಂಡು ಕೆಲಸ ಮಾಡುತ್ತಾರೆ. ಹಲ್ಲೆ ಮಾಡಿದವರನ್ನು ಒದ್ದು ಒಳಗೆ ಹಾಕಬೇಕು ಎಂದು ಮಹಿಳಾ ಪ್ರಯಾಣಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us