ಪ್ರಧಾನಿ ಮಾರ್ಗದಲ್ಲಿ ಸ್ಫೋಟಕ ಪತ್ತೆ: ಹಳೆಯ ಜಿಲೆಟಿನ್ ಕಡ್ಡಿಗಳ ಹಿಂದೆ ಇರುವ ಜಾಲ ಯಾವುದು? ಎಫ್‌ಎಸ್‌ಎಲ್ ವರದಿ ನೀಡಿದ ಆತಂಕದ ಮಾಹಿತಿ
ಬೆಂಗಳೂರಿನ ಹಲಸೂರು ಠಾಣೆ ವ್ಯಾಪ್ತಿಯ ಮರ್ಸಿ ಟೌನ್‌ನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು 62 ವರ್ಷದ ಲೂಥ್ ನಾಥನ್ ಮೃತಪಟ್ಟಿದ್ದಾರೆ. ಮನೆಯೊಳಗೆ ಚಾರ್ಜ್‌ಗೆ ಹಾಕಿದ್ದ ಬೈಕ್‌ನ ಬ್ಯಾಟರಿ ತಡರಾತ್ರಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಗಂಭೀರವಾಗಿ ಗಾಯಗೊಂಡ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷ ಅಥವಾ ಓವರ್ ಚಾರ್ಜಿಂಗ್ ಸ್ಫೋಟಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು, ಮೇ.12: ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಪ್ರಾಥಮಿಕ ವರದಿ ನೀಡಿದ್ದಾರೆ. ತನಿಖೆಯ ವೇಳೆ ಕೃತ್ಯಕ್ಕೆ ಬಳಸಲಾದ ವಸ್ತುಗಳ ಬಗ್ಗೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಸುಮಾರು 3 ವರ್ಷಗಳ ಹಿಂದೆ ತಯಾರಾದವುಗಳಾಗಿವೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸದ ಕಾರಣ, ಪತ್ತೆಯಾದ ಸಂದರ್ಭದಲ್ಲಿ ಅವು ಸ್ಫೋಟಗೊಳ್ಳುವ ಸ್ಥಿತಿಯಲ್ಲಿರಲಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಜಿಲೆಟಿನ್ ಜೊತೆಗಿದ್ದ ವೈರ್ ಮತ್ತು ಎಲೆಕ್ಟ್ರಿಕ್ ವಸ್ತುಗಳು ಸುಮಾರು 1 ವರ್ಷದ ಹಿಂದೆ ತಯಾರಾಗಿರುವ ಸಾಧ್ಯತೆಯಿದೆ. ಗಡಿಯಾರಕ್ಕೆ ಬಳಸುವ ವೈರ್ ಮತ್ತು ಶೆಲ್ (ಬ್ಯಾಟರಿ) ಗಳನ್ನು ಒಂದು ಬಾಕ್ಸ್‌ನಲ್ಲಿ ವ್ಯವಸ್ಥಿತವಾಗಿ ಇರಿಸಲಾಗಿತ್ತು.
ಈ ವಸ್ತುಗಳನ್ನು ಸೂಕ್ತ ತಾಂತ್ರಿಕ ಜ್ಞಾನದೊಂದಿಗೆ ಜೋಡಣೆ ಮಾಡಿದ್ದರೆ, ಭಾರಿ ಪ್ರಮಾಣದಲ್ಲಿ ಸ್ಫೋಟಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದವು. ಆದರೆ ಮೇಲ್ನೋಟಕ್ಕೆ ಇವು ಅಸಮರ್ಪಕವಾಗಿ ಇರಿಸಲ್ಪಟ್ಟಿದ್ದವು. ಜನರಲ್ಲಿ ಮತ್ತು ಭದ್ರತಾ ಸಂಸ್ಥೆಗಳಲ್ಲಿ ಭಯ ಹಾಗೂ ಆತಂಕ ಸೃಷ್ಟಿಸುವ ಉದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ಬಲವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೀಡಿದ ‘ಮಿತವ್ಯಯ ಮಂತ್ರ’ದ ಹಿಂದಿನ ಲೆಕ್ಕಾಚಾರವೇನು? 23 ಲಕ್ಷ ಕೋಟಿ ರೂ. ಉಳಿತಾಯಕ್ಕೆ ಸಜ್ಜಾಗುತ್ತಿದೆ ಭಾರತ!
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕರ್ನಾಟಕ ಗೃಹ ಸಚಿವರು ಮತ್ತು ಪೊಲೀಸರು, ಈಗಾಗಲೇ ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು, ಆಗ್ನೇಯ ವಿಭಾಗದ ಪೊಲೀಸರು ಹಾಗೂ ಸಿಸಿಬಿ (CCB) ಸೇರಿದಂತೆ ಆರು ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ. ಅಲ್ಲದೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ಈ ತನಿಖೆಯಲ್ಲಿ ಕೈಜೋಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



