ಕೊರೊನಾ ನಡುವೆಯೇ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಜ್ಜು!

ಕೊರೊನಾ ನಡುವೆಯೇ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಜ್ಜು!

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಕೌಂಟ್​ಡೌನ್ ಶುರುವಾಗಿದೆ. ಆದ್ರೆ ಕೊರೊನಾ ಹಾವಳಿ ನಡುವೆ ಹಬ್ಬ ಮಾಡೋದೇ ಕಷ್ಟವಾಗಿದೆ. ಸಿಂಪಲ್ಲಾಗಿ ಲಕ್ಷ್ಮೀ ಪ್ರತಿಷ್ಟಾಪನೆ ಮಾಡ್ತೀವಿ ಅನ್ನೋರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಹಬ್ಬದ ತಯಾರಿಯಲ್ಲಿರೋ ಸಿಟಿಮಂದಿಗೆ ಡಬಲ್ ರೇಟ್​ಗೆ ಹೂ ಹಣ್ಣು ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರಲ್ಲಿ ಖರೀದಿಯ ಭರಾಟೆ ಜೋರು! ಬೆಂಗಳೂರಲ್ಲಿ ಕೊರೊನಾ ಅಬ್ಬರ ಊಹೆಗೂ ನಿಲುಕುತ್ತಿಲ್ಲ. ಹೆಮ್ಮಾರಿ ಅಟ್ಟಹಾಸದ ನಡುವೆಯೂ ಸಿಟಿ ಮಂದಿ ವರಮಹಾಲಕ್ಷ್ಮೀ ಹಬ್ಬ ಮಾಡೋಕೆ ರೆಡಿಯಾಗಿದ್ದಾರೆ. ಹೀಗಾಗಿ ನಿನ್ನೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಗಾಂಧಿ […]

Ayesha Banu

| Edited By: sadhu srinath

Jul 30, 2020 | 12:48 PM

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಕೌಂಟ್​ಡೌನ್ ಶುರುವಾಗಿದೆ. ಆದ್ರೆ ಕೊರೊನಾ ಹಾವಳಿ ನಡುವೆ ಹಬ್ಬ ಮಾಡೋದೇ ಕಷ್ಟವಾಗಿದೆ. ಸಿಂಪಲ್ಲಾಗಿ ಲಕ್ಷ್ಮೀ ಪ್ರತಿಷ್ಟಾಪನೆ ಮಾಡ್ತೀವಿ ಅನ್ನೋರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಹಬ್ಬದ ತಯಾರಿಯಲ್ಲಿರೋ ಸಿಟಿಮಂದಿಗೆ ಡಬಲ್ ರೇಟ್​ಗೆ ಹೂ ಹಣ್ಣು ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಬೆಂಗಳೂರಲ್ಲಿ ಖರೀದಿಯ ಭರಾಟೆ ಜೋರು! ಬೆಂಗಳೂರಲ್ಲಿ ಕೊರೊನಾ ಅಬ್ಬರ ಊಹೆಗೂ ನಿಲುಕುತ್ತಿಲ್ಲ. ಹೆಮ್ಮಾರಿ ಅಟ್ಟಹಾಸದ ನಡುವೆಯೂ ಸಿಟಿ ಮಂದಿ ವರಮಹಾಲಕ್ಷ್ಮೀ ಹಬ್ಬ ಮಾಡೋಕೆ ರೆಡಿಯಾಗಿದ್ದಾರೆ. ಹೀಗಾಗಿ ನಿನ್ನೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಗಾಂಧಿ ಬಜಾರ್​ನಲ್ಲಂತೂ ಕಲರ್ ಕಲರ್ ಹೂವಿನ ಹಾರಗಳು, ವೆರೈಟಿ ವೆರೈಟಿ ಹಣ್ಣುಗಳು ಲಕ್ಷ್ಮೀಯನ್ನ ಅಲಂಕರಿಸೋಕೆ ಕಾತರದಿಂದ ಕಾಯ್ತಿವೆ.

ಆದ್ರೆ ರೇಟ್ ಕೇಳಿದ್ರೆನೇ ತಲೆ ತಿರುಗ್ತಿದೆ. ಕೊರೊನಾ ಭೀತಿಯಿಂದ ಹೂ ಹಣ್ಣಿನ ರಫ್ತಿನಲ್ಲಿ ಇಳಿಕೆಯಾಗಿದೆ. ರೈತರು ನೇರವಾಗಿ ಮಾರ್ಕೆಟ್​ಗೆ ಬಂದು ವ್ಯಾಪಾರ ಮಾಡೋದನ್ನ ನಿಲ್ಲಿಸಿದ್ದಾರೆ. ಅದ್ರಲ್ಲೂ ಕೆ.ಆರ್ ಮಾರ್ಕೆಟ್ ಬಂದ್ ಆಗಿದ್ದು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹೂ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.

ಹೂ/ಹಣ್ಣಿನದರ(ಕೆಜಿಗೆ) ಒಂದು ಕೆಜಿ ಮಲ್ಲಿಗೆ ಹೂವಿನ ರೇಟ್ 600 ರೂಪಾಯಿಯಾದ್ರೆ, ಕನಕಾಂಬರ 3 ಸಾವಿರ ಇದೆ. ಕೆಜಿ ಸೇವಂತಿಗೆ 300 ರೂಪಾಯಿಗೆ ಸಿಕ್ತಿದ್ರೆ. ಬಿಡಿ ಹೂವಿನ ಬೆಲೆ 350ರಿಂದ 400 ರೂಪಾಯಿಯಿದೆ. ಲಕ್ಷ್ಮೀಗೆ ಪ್ರಿಯವಾದ ತಾವರೆ ಹೂವು ಒಂದಕ್ಕೆ 50 ರೂಪಾಯಿ ಇದೆ. ಅದೇ ರೀತಿ ಹಣ್ಣುಗಳ ಬೆಲೆ ನೋಡೋದಾದ್ರೆ, ಕೆಜಿ ಌಪಲ್ ದರ 260 ರೂಪಾಯಿಯಿದ್ರೆ, ದಾಳಿಂಬೆ 160 ರೂಪಾಯಿಗೆ ಸಿಕ್ತಿದೆ. ಜೊತೆಗೆ ಸಪೋಟ/ದ್ರಾಕ್ಷಿ ರೇಟ್ ಕೆಜಿಗೆ 100 ರೂಪಾಯಿಯಾಗಿದೆ.

ಒಟ್ನಲ್ಲಿ ಕೊರೊನಾ ರಣಕೇಕೆ ನಡುವೆ ಸಿಂಪಲ್ಲಾಗಿ ಹಬ್ಬ ಮಾಡಿ ಫ್ಯಾಮಿಲಿ ಜೊತೆ ಖುಷಿಯಾಗಿರಿ. ಆದ್ರೆ ಖುಷಿಯಲ್ಲಿ ಮಾಸ್ಕ್ ಧರಿಸೋದು, ದೈಹಿಕ ಅಂತರ ಕಾಪಾಡೋದು ಮಾತ್ರ ಮರೀಬೇಡಿ.

Follow us on

Related Stories

Most Read Stories

Click on your DTH Provider to Add TV9 Kannada