AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rain: ಕೋರಮಂಗಲ, ಶಾಂತಿನಗರ ಸೇರಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆ

ಕಳೆದ ಮೂರು ದಿನಗಳಿಂದ ‌ನಿರಂತರವಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ‌ಮಳೆಯಾಗುತ್ತಿದೆ. ಇಂದು ಕೂಡ ನಗರದಲ್ಲಿ ಮಳೆ ಶುರುವಾಗಿದ್ದು, ಕೋರಮಂಗಲ, ಶಾಂತಿನಗರ, ಆಡುಗೋಡಿ, ವಿಲ್ಸನ್​ ಗಾರ್ಡನ್, ಕೆ.ಆರ್.ಮಾರ್ಕೆಟ್​, ಲಾಲ್​ಬಾಗ್​ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ.

Bengaluru Rain: ಕೋರಮಂಗಲ, ಶಾಂತಿನಗರ ಸೇರಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆ
ಕೋರಮಂಗಲ, ಶಾಂತಿನಗರ ಸೇರಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:May 13, 2024 | 11:34 PM

Share

ಬೆಂಗಳೂರು, ಮೇ 13: ಕಳೆದ ಮೂರು ದಿನಗಳಿಂದ ‌ನಿರಂತರವಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ‌ಮಳೆಯಾಗುತ್ತಿದೆ (Rain). ಇಂದು ಕೂಡ ನಗರದಲ್ಲಿ ಮಳೆ ಶುರುವಾಗಿದ್ದು, ಕೋರಮಂಗಲ, ಶಾಂತಿನಗರ, ಆಡುಗೋಡಿ, ವಿಲ್ಸನ್​ ಗಾರ್ಡನ್, ಕೆ.ಆರ್.ಮಾರ್ಕೆಟ್​, ಲಾಲ್​ಬಾಗ್​, ಕಾರ್ಪೊರೇಷನ್, ಮೈಸೂರು ರಸ್ತೆ ,ಟೌನ್ ಹಾಲ್, ಮೆಜೆಸ್ಟಿಕ್​, ಜೆ.ಸಿ.ರೋಡ್​ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ವಾಹನ ಸವಾರರು ಪರದಾಡಿದ್ದಾರೆ. ನಿನ್ನೆ ತಡರಾತ್ರಿಯೂ ಜೋರು ಮಳೆ ಆಗಿತ್ತು.

ಗುಡುಗು ಸಹಿತ ಭಾರಿ ಮಳೆ: ಹಾರಿ ಹೋದ ಮನೆಗಳ ಮೇಲ್ಛಾವಣಿ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆ ಆರಂಭವಾಗಿದೆ. ಗಾಳಿ ಮಳೆಗೆ ಹತ್ತಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಕುಟುಂಬಗಳು ಬೀದಿಗೆ ಬಂದಿವೆ.  ತಗಡಿನ ಶೆಡ್​ಗಳ ಮೇಲಿನ ಸೀಟ್ ಹಾರಿ ಹೋಗಿ ಅನಾಹುತ ಸಂಭವಿಸಿದೆ.

ಇದನ್ನೂ ಓದಿ: Bengaluru Rain Today: ಬೆಂಗಳೂರಿನಲ್ಲಿ ತಡರಾತ್ರಿ ಭಾರಿ ಮಳೆ; ಇನ್ನೂ 4 ದಿನ ಮಳೆಯ ಮುನ್ಸೂಚನೆ

ಐದಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಎರಡು ಬೈಕ್​ಗಳು ಜಖಂಗೊಂಡಿವೆ. ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಮರ

ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್​ ಬಳಿ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದಿದೆ. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವಿಶ್ವಮಾನವ ರೈಲಿನ ಮೇಲೆ ಮರ ಬಿದ್ದು ರೈಲು ಮುಂಭಾಗದ ಗ್ಲಾಸ್ ಪುಡಿ ಪುಡಿ ಆಗಿದೆ. ಘಟನೆಯಲ್ಲಿ ಲೋಕೋ ಪೈಲಟ್​ಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯ ಲೆಕ್ಕಿಸದೇ ರೈಲ್ವೆ ನಿಲ್ದಾಣದವರೆಗೂ ಲೋಕೋ ಪೈಲಟ್ ರೈಲು ತಲುಪಿಸಿದ್ದಾರೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನ ವಿಜಯನಗರ ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭ

ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಹಲವಡೆ ಕಳೆದ ರಾತ್ರಿ ಮಿಂಚು, ಗುಡುಗ ಸಹಿತ ಬಾರಿ ಮಳೆಯಾಗಿತ್ತು. ಕಳೆದ ಕೆಲ ದಿನಗಳಿಂದ ಕೊಪ್ಪಳ ಜಿಲ್ಲೆ ಬಿಸಿಲಿನಿಂದ ಕಾದ ಹಂಚಿನಂತಾಗಿತ್ತು. ಆದರೆ ಕಳೆದ ರಾತ್ರಿ ಸುರಿದ ಮಳೆಗೆ ಕೊಪ್ಪಳ ಇದೀಗ ಕೂಲ್ ಕೂಲ್ ಆಗಿತ್ತು. ಇನ್ನು ರಾತ್ರಿ ಸುರಿದ ಮಳೆಯಿಂದ ಕೆಲವಡೇ ಅಸ್ತವ್ಯಸ್ಥ ಸ್ಥಿತಿ ಕೂಡಾ ನಿರ್ಮಾಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:23 pm, Mon, 13 May 24

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ