ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

ನಿವೃತ್ತ ಇಸ್ರೋ ನೌಕರ ತಮ್ಮ ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಆವಲಹಳ್ಳಿಯಲ್ಲಿ ನಡೆದಿದೆ. ಪ್ರಾಥಮಿಕ ವಿಚಾರಣೆ ವೇಳೆ ಪತ್ನಿಯನ್ನ ಕೊಲೆ ಮಾಡಿದ್ದೇಕೆ ಎಂದು ಭಯಾಕನ ಸತ್ಯ ಬಯಲಾಗಿದೆ. ಆಲವಲಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಘಟನೆಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ
ಮೃತ ಪತ್ನಿ, ಆರೋಪಿ ಪತಿ
Edited By:

Updated on: Feb 18, 2026 | 3:17 PM

ಬೆಂಗಳೂರು, ಫೆಬ್ರವರಿ 18: ಇಸ್ರೋ ಸಂಸ್ಥೆ ನಿವೃತ್ತ ನೌಕರನಿಂದ ಉಸಿರುಗಟ್ಟಿಸಿ ಪತ್ನಿಯ ಕೊಲೆ (murder) ಮಾಡಿರುವಂತಹ ಘಟನೆ ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನಡೆದಿದೆ. ಪತ್ನಿ (wife) ಸಧ್ಯಾರ ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್​​ರಿಂದ ಕೊಲೆ ಮಾಡಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆಲವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ನಾಗಲೇಶ್ವರ ರಾವ್​​, ಇಸ್ರೋ ಸಂಸ್ಥೆಯ ನಿವೃತ್ತ ನೌಕರರು. ಪತ್ನಿ ಸಧ್ಯಾ ಅವರೊಂದಿಗೆ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನೆಲೆಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ, ಯಾರೂ ಸಂಬಂಧಿಕರು ಇಲ್ಲ ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನ ಕೊಲೆ ಮಾಡಿದೆ ಎನ್ನುತ್ತಿರುವ ನಾಗಲೇಶ್ವರ ರಾವ್, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ.​​​ ಇನ್ನು ದಂಪತಿಯ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ: ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ

ಮತ್ತೊಂದು ಪ್ರಕರಣದಲ್ಲಿ ಕೂಡ ಪತಿ ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ದೇವಿಕಾ(50) ಹತ್ಯೆಗೈದ ಪತಿ ಕುಮಾರ್. ಸದ್ಯ ಕೊಲೆ ಆರೋಪಿ ಕುಮಾರ್​ನನ್ನು ಬಂಧಿಸಿದ ಪೊಲೀಸರು, ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ

ಇತ್ತೀಚೆಗೆ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ ಅನುಮಾನ ಹೊಂದಿದ್ದ ಆರೋಪಿ ಪತಿ ಕುಮಾರ್, ನಿನ್ನೆ ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ದೇವಿಕಾರನ್ನು ಕೊಲೆ ಮಾಡಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಕೂಡಲೇ ಆರೋಪಿ ಕುಮಾರ್​ನನ್ನ ಮಕ್ಕಳು ತಡೆದಿದ್ದಾರೆ.

ಗ್ರಾಮ ದೇವತೆ ಹಬ್ಬದಲ್ಲಿ ಅವಘಢ: ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ಸಾವು

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದಲ್ಲಿ ಅವಘಡ ಸಂಭವಿಸಿದ್ದು, ಬಂಡಿ ಓಡಿಸುವಾಗ ಆಯತಪ್ಪಿ ಕೆಳಗೆ ಬಿದ್ದು ಪ್ರವೀಣ್(22) ಸಾವನ್ನಪ್ಪಿದ್ದಾರೆ. ಗ್ರಾಮ ದೇವತೆ ಬಂಡರಸಮ್ಮ ಹಬ್ಬದ ಬಂಡಿ ಉತ್ಸವದಲ್ಲಿ ಘಟನೆ ನಡೆದಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.