ಅಜ್ಜಿ ತಿಥಿ ಕಾರ್ಯಕ್ಕೆ ಹೋಗಿದ್ದವರ ಮನೆಯಲ್ಲಿ ಕಳ್ಳತನ: ಒಡವೆ ಇಲ್ಲದಕ್ಕೆ ಮದ್ವೆ ಮುಂದೂಡಿಕೆ

ಆನೇಕಲ್ ತಾಲ್ಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಅಜ್ಜಿಯ ತಿಥಿ ಕಾರ್ಯದಲ್ಲಿ ಮನೆಮಂದಿ ನಿರತರಾಗಿದ್ದಾಗ, ಕಳ್ಳರು 240 ಗ್ರಾಂ ಚಿನ್ನ ದೋಚಿದ್ದಾರೆ. ಈ ಚಿನ್ನವನ್ನು ಮಗಳ ಮದುವೆಗಾಗಿ ಖರೀದಿಸಿದ್ದ ಪ್ರೇಮಾ ಎಂಬವರಿಗೆ ಈ ಘಟನೆಯಿಂದ ತೀವ್ರ ಆಘಾತವಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಕಳ್ಳತನದ ಚಿನ್ನದ ಭಾಗವನ್ನು ವಶಪಡಿಸಿಕೊಂಡಿದ್ದಾರೆ.

ಅಜ್ಜಿ ತಿಥಿ ಕಾರ್ಯಕ್ಕೆ ಹೋಗಿದ್ದವರ ಮನೆಯಲ್ಲಿ ಕಳ್ಳತನ: ಒಡವೆ ಇಲ್ಲದಕ್ಕೆ ಮದ್ವೆ ಮುಂದೂಡಿಕೆ
ಅಜ್ಜಿ ತಿಥಿ ಕಾರ್ಯಕ್ಕೆ ಹೋಗಿದ್ದವರ ಮನೆಯಲ್ಲಿ ಕಳ್ಳತನ
Updated By: ವಿವೇಕ ಬಿರಾದಾರ

Updated on: Jun 15, 2025 | 6:19 PM

ಆನೇಕಲ್, ಜೂನ್​ 15: ಅಜ್ಜಿಯ ತಿಥಿ ಕಾರ್ಯಕ್ಕೆ ಹೋದವರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಅತ್ತ ಹಳೆ ಮನೆಯಲ್ಲಿ ಮನೆ ಮಂದಿಯಲ್ಲ ಸೇರಿ ಅಜ್ಜಿಯ ತಿಥಿ ಕಾರ್ಯ ಮಾಡುತ್ತಿದ್ದರೇ, ಇತ್ತ ಕಳ್ಳರು ಮಾತ್ರ ಹೊಸ ಮನೆಯಲ್ಲಿದ್ದ 240 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮೇ 2ನೇ ತಾರೀಖು ರಾತ್ರಿ ಪ್ರೇಮಾ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 240 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಪ್ರೇಮಾ ಅವರು ಮಗಳ ಮದುವೆಗಾಗಿ 240 ಗ್ರಾಂ ಚಿನ್ನ ಖರೀದಿಸಿದ್ದರು ಎಂದು ತಳಿದುಬಂದಿದೆ. ಸೂರ್ಯನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೂರ್ಯನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸುಧಾಕರ್ (37) ಆಜಯ್ (36), ಅರವಿಂದ್ ಬಂಧಿತರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಗಾ, 9 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ 9 ಪ್ರಕರಣಗಳಲ್ಲಿ ಒಂದು ಕೆಜಿಗೂ ಅಧಿಕ ಚಿನ್ನ ಕದ್ದಿದ್ದಾರೆ. ಆದರೆ, ಇಲ್ಲಿಯವರೆಗೆ 290 ಗ್ರಾಂ ಚಿನ್ನ ಮಾತ್ರ ರಿಕವರಿಯಾಗಿದೆ.

ಇದನ್ನೂ ಓದಿ
ಸೂಟ್​​ಕೇಸ್​ನಲ್ಲಿ ಬಾಲಕಿ ಶವ ಕೇಸ್: ತನಿಖೆಯ ರೋಚಕತೆ ಬಿಚ್ಚಿಟ್ಟ SP
ಬಾಲಕಿ ಶವ ಕೇಸ್: ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲವೆಂದು ಹತ್ಯೆ
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಸಾಂಬಾರ್ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ: ಪತ್ನಿ ಸಾವಿನಲ್ಲಿ ಅಂತ್ಯ

ಮಗಳ ಮದುವೆಗಾಗಿ ಖರೀದಿಸಿದ್ದ ಒಡವೆ ಕಳೆದುಕೊಂಡ ಪ್ರೇಮಾ ಕಣ್ಣೀರು ಹಾಕಿದ್ದು, ಒಡವೆ ಇಲ್ಲದೆ ನಿಶ್ಚಯವಾಗಿದ್ದ ಮದುವೆ ಮುಂದೂಡಿದ್ದಾರೆ. ಆದಷ್ಟು ಬೇಗ ಒಡವೆ ರಿಕವರಿ ಮಾಡಿ ಕೊಡುವಂತೆ ಪ್ರೇಮ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಲವರ್​ನ ಮದುವೆಯಾಗಲು ಮುಂದಾಗಿದ್ದ ಯುವಕನ ಕೊಲೆ

ಕದ್ದ ಬೈಕ್​ ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ

ಮಂಡ್ಯ: ಆರೋಪಿ ಮಂಡ್ಯದಲ್ಲಿ ಬೈಕ್​ ಕದ್ದು ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಆರೋಪಿ ಮಂಜುನಾಥ್ ಮಂಡ್ಯದ ಪೇಟೆ ಬೀದಿಯಲ್ಲಿ ಸತೀಶ್ ಬಾಬು ಎಂಬುವರ ಆಕ್ಟಿವಾ ಸ್ಕೂಟರ್ ಕಳ್ಳತನ ಮಾಡಿದ್ದನು. ಸ್ಕೂಟರ್​ನಲ್ಲಿ ಕೀ ಬಿಟ್ಟು ಫೋನ್​ನಲ್ಲಿ ಮಾತನಾಡುತ್ತಿದ್ದ ವೇಳೆ ಕಳ್ಳತನ ಮಾಡಿದ್ದಾನೆ. ಕದ್ದ ಬೈಕ್​ನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಮದ್ದೂರಿನ ಗೆಜ್ಜಲಗೆರೆ ಬಳಿ ಅಪಘಾತ ಸಂಭವಿಸಿದೆ.

ಗಾಯಗೊಂಡ ಮಂಜುನಾಥ್​ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರಣೆ ನಡೆಸಿದಾಗ ಕದ್ದ ಬೈಕ್ ಎಂದು ಹೇಳಿದ್ದಾನೆ. ಮಂಡ್ಯದ ಕೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Sun, 15 June 25