24 ವರ್ಷಗಳ ನಂತರ ತುಂಬಿದ ಕೆರೆ: ಅದ್ದೂರಿ ತೆಪ್ಪೋತ್ಸವದೊಂದಿಗೆ ದೀಪಾವಳಿ ಆಚರಿಸಿದ ಗ್ರಾಮಸ್ಥರು

ಎರಡು ದಶಕಗಳ ಬಳಿಕ ಕೆರೆ ತುಂಬಿದ ಹಿನ್ನೆಲೆಯಲ್ಲಿ ಸುತ್ತಾಮುತ್ತಲಿನ ಗ್ರಾಮದ ಮುಖಂಡರೆಲ್ಲ ಸೇರಿ ಕೆರೆಯಲ್ಲಿ ತೆಪ್ಪೋತ್ಸವವನ್ನ ಮಾಡಿದ್ರು.

24 ವರ್ಷಗಳ ನಂತರ ತುಂಬಿದ ಕೆರೆ: ಅದ್ದೂರಿ ತೆಪ್ಪೋತ್ಸವದೊಂದಿಗೆ ದೀಪಾವಳಿ ಆಚರಿಸಿದ ಗ್ರಾಮಸ್ಥರು
ತೆಪ್ಪೋತ್ಸವ
Edited By:

Updated on: Oct 26, 2022 | 3:12 PM

ದೊಡ್ಡಬಳ್ಳಾಪುರ: ಸತತ ಎರಡು ದಶಕಗಳ ಬಳಿಕ ಬೃಹತ್ ಕೆರೆ ತುಂಬಿ ಕೋಡಿ ಹರಿದ ಕಾರಣ ಗ್ರಾಮಸ್ಥರೆಲ್ಲ ದೀಪಾವಳಿ(Deepavali 2022) ಜೊತೆಗೆ ಕೆರೆ ಹಬ್ಬವನ್ನ ಮಾಡುವ ಮೂಲಕ ಬೆಳಕಿನ ಹಬ್ಬವನ್ನ ಮತ್ತಷ್ಟು ಕಲರ್ ಫುಲ್ ಆಗಿ ಆಚರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ಮದುರೆಯ 890 ಎಕರೆಯ ವಿಶಾಲವಾದ ಬೃಹತ್ ಕೆರೆ ಕಳೆದ 24 ವರ್ಷಗಳಿಂದ ತುಂಬಿ ಕೋಡಿ ಹರಿದಿರಲಿಲ್ಲ. ಹೀಗಾಗಿ ಈ ಭಾರಿಯ ಮಳೆಗೆ ಕಳೆದೊಂದು ವಾರದಿಂದ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಚಿಕ್ಕಮದುರೆ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಈ‌ ಭಾರಿ ದೀಪಾವಳಿಯು ಬಂದಿರೂ ಕಾರಣ ಇಂದು ದೀಪಾವಳಿ ಜೊತೆಗೆ ಗ್ರಾಮಸ್ಥರು ಪೂರ್ಣ ಕುಂಭ ಮತ್ತು ದೀಪಗಳನ್ನ ತಲೆ ಮೇಲೆ ಹೊತ್ತು ತಂದು ಕೆರೆಗೆ ಬಾಗಿನ ನೀಡಿದ್ರು.

ಹೂವಿನ ಪಲ್ಲಕ್ಕಿ ಮೂಲಕ ಕೆರೆಯಲ್ಲಿ ತೆಪ್ಪೋತ್ಸವ

ಎರಡು ದಶಕಗಳ ಬಳಿಕ ಕೆರೆ ತುಂಬಿದ ಹಿನ್ನೆಲೆಯಲ್ಲಿ ಸುತ್ತಾಮುತ್ತಲಿನ ಗ್ರಾಮದ ಮುಖಂಡರೆಲ್ಲ ಸೇರಿ ಕೆರೆಯಲ್ಲಿ ತೆಪ್ಪೋತ್ಸವವನ್ನ ಮಾಡಿದ್ರು. ಆಕರ್ಷಣಿಯ ಹೂವಿನ ಪಲ್ಲಕ್ಕಿ ಮೂಲಕ ಕೆರೆಯಲ್ಲಿ ತೆಪ್ಪೋತ್ಸವ ಮಾಡಿದ್ದು ಗ್ರಾಮದ ಪುರಾಣ ಪ್ರಸಿದ್ದ ಶನಿಮಹಾತ್ಮ ಮತ್ತು ಆಂಜನೇಯ ಸ್ವಾಮಿಯ ವಿಗ್ರಹಗಳನ್ನ ತೆಪ್ಪದಲ್ಲಿಟ್ಟು ಕೆರೆಯಲ್ಲಿ ತೆಪ್ಪೋತ್ಸವ ಮಾಡಿದ್ರು. ಇನ್ನೂ ಕೆರೆಯಲ್ಲಿ ತೆಪ್ಪೋತ್ಸವ ಮಾಡ್ತಿದ್ರೆ ಇತ್ತ ಕೆರೆ ಏರಿ ಮೇಲೆ ನೂರಾರು ಜನ ನಿಂತು ನೀರಿನಿಂದ ತುಂಬಿದ ಕರೆಯನ್ನ ನೋಡುತ್ತಾ ಸೆಲ್ಫಿಗಳನ್ನ ತೆಗೆದುಕೊಂಡು ಸಂಭ್ರಮಿಸಿದ್ರು. ಇದನ್ನೂ ಓದಿ: ಮೂರೂವರೆ ವರ್ಷಗಳ ನಂತರ ಬೆಂಗಳೂರಿನ ಜೆಡಿ(ಎಸ್) ಕಚೇರಿಗೆ ಕಾಲಿಟ್ಟ ಜಿಟಿ ದೇವೇಗೌಡ!

ಶಾಸಕ ಮತ್ತು ಮುಖಂಡರಿಂದ ಟಪ್ಪಾಗುಂಚಿ ಸ್ಟೆಪ್

ಚಿಕ್ಕಮದುರೆ ಗ್ರಾಮದಿಂದ ಕೆರೆಯವರೆಗೂ ವಿವಿಧ ತಮಟೆ, ವಾದ್ಯ, ಡೊಳ್ಳು ಕುಣಿತದ ಜೊತೆಗೆ ಕಲಾತಂಡಗಳು ಬೆಳ್ಳಿ ಪಲ್ಲಕ್ಕಿತಲ್ಲಿ ಗ್ರಾಮ ದೇವರುಗಳನ್ನ ಗ್ರಾಮಸ್ಥರು ಮೆರವಣಿಗೆ ಮೂಲಕ ಕೆರೆಯ ಬಳಿಗೆ ಕರೆತಂದರು. ಈ ವೇಳೆ ಮೆರವಣಿಗೆಯ ಸಂಭ್ರಮದಲ್ಲಿ ಭಾಗವಹಿಸಿದ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ. ರಾಮಣ್ಣ, ಆರ್.ವಿ.ಗೌಡ. ಚುಂಚೇಗೌಡ ಸೇರಿದಂತೆ ಹಲವು ಮುಖಂಡರು ಮತ್ತು ಗ್ರಾಮಸ್ಥರು ತಮಟೆ ವಾದ್ಯಗಳಿಗೆ ಸ್ಟೇಪ್ ಹಾಕುವ ಮೂಲಕ ಸಂಭ್ರಮಿಸಿದ್ರು.