ಬೆಂಗಳೂರು: ಇನ್ಸ್ಟಾಗ್ರಾಮ್​ನಲ್ಲಿ ಯುವತಿಗೆ ಮೆಸೇಜ್; ಆಟೋ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ

ಇನ್ಸ್ಟಾಗ್ರಾಮ್​ನಲ್ಲಿ ಆಟೋ ಚಾಲಕ ನವೀನ್ ಎಂಬಾತ ಯುವತಿಗೆ ಮೆಸೇಜ್ ಮಾಡಿದ್ದ, ಇದೇ ವಿಚಾರಕ್ಕೆ ಯುವತಿ ಪ್ರಿಯಕರ ಪ್ರಜ್ವಲ್ ಮತ್ತು ತಂಡ, ರಾಜಿ ಮಾಡಿಕೊಳ್ಳುವ ಎಂದು ಕರೆದು, ನವೀನ್ ಹಾಗೂ ಸ್ನೇಹಿತ ಹರೀಶ್ ಮೇಲೆ ಮರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಬೆಂಗಳೂರು: ಇನ್ಸ್ಟಾಗ್ರಾಮ್​ನಲ್ಲಿ ಯುವತಿಗೆ ಮೆಸೇಜ್; ಆಟೋ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ಸ್ಟಾಗ್ರಾಮ್​ನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್​ನಲ್ಲಿ ಆಟೋ ಚಾಲಕ ನವೀನ್ ಎಂಬಾತ ಯುವತಿಗೆ ಮೆಸೇಜ್ ಮಾಡಿದ್ದ, ಇದೇ ವಿಚಾರಕ್ಕೆ ಯುವತಿ ಪ್ರಿಯಕರ ಪ್ರಜ್ವಲ್ ಮತ್ತು ತಂಡ, ರಾಜಿ ಮಾಡಿಕೊಳ್ಳುವ ಎಂದು ಕರೆದು, ನವೀನ್ ಹಾಗೂ ಸ್ನೇಹಿತ ಹರೀಶ್ ಮೇಲೆ ಮರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ತನ್ನ ಹುಡುಗಿಗೆ ಮೆಸೇಜ್ ಮಾಡಿದ್ದಾನೆಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಲೆ ಮತ್ತು ಹೊಟ್ಟೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸೆಪ್ಟೆಂಬರ್ 24 ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಸದ್ಯ ಹಲ್ಲೆ ಮಾಡಿದ ತಂಡವನ್ನು ಪೊಲೀಸರು  ಬಂಧಿಸಿದ್ದಾರೆ.

ಪ್ರಜ್ವಲ್‌ ಅಲಿಯಾಸ್ ಕಪ್ಪೆ, ಕಿರಣ ಅಲಿಯಾಸ್ ವಾಲೆ, ಮನೋಜ್, ಮೂರ್ತಿ, ಸಂದೀಪ ಬಂಧಿತ ಆರೋಪಿಗಳು. ಇನ್ನು ನಾಲ್ವರು ತಲೆಮರೆಸಿಕೊಂಡಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಯುವಕನ ಮೇಲೆ ಹಲ್ಲೆ
ಪ್ರೀತಿಸಿ ಮದುವೆಯಾಗಿದ್ದ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಡಿಎ ತಾಂಡಾದಲ್ಲಿ ನಡೆದಿದೆ. ಪವಿತ್ರಾ ಬಾಯಿಯನ್ನು ಮದುವೆಯಾಗಿದ್ದ ಸರ್ಜುನ್ ನಾಯ್ಕ್ ಮೇಲೆ ಯುವತಿ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಪವಿತ್ರಾ ಬಾಯಿ ತಂದೆ ವೆಂಕಟೇಶ್ ನಾಯ್ಕ್, ದೊಡ್ಡಪ್ಪ ರಂಗನಾಯ್ಕ್, ಅಣ್ಣ ತಿಪ್ಪೇಶ್ ನಾಯ್ಕ್, ಅಕ್ಕ ಕಲಾವತಿ, ಅಣ್ಣ ರಾಮಾನಾಯ್ಕ್ ತಮ್ಮ ನವೀನ್ ನಾಯ್ಕ್‌ನಿಂದ ಹಲ್ಲೆ ಆರೋಪ ಕೇಳಿ ಬಂದಿದೆ.

8 ತಿಂಗಳ ಹಿಂದೆ ಪವಿತ್ರಾ ಮತ್ತು ಸರ್ಜನ್ ಮನೆಯವರ ವಿರೋಧದ ನಡುವೆ ಓಡಿ ಹೋಗಿ ವಿವಾಹವಾಗಿದ್ದರು. ಇದಕ್ಕೆ ಕೋಪಗೊಂಡಿದ್ದ ಪವಿತ್ರಾ ಬಾಯಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಶಿರಾ ಆಸ್ಪತ್ರೆಯಲ್ಲಿ ಸರ್ಜುನ್ ನಾಯ್ಕ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಆರೋಪದ ಮೇಲೆ 8 ಜನರ ವಿರುದ್ಧ ದೂರು ನೀಡಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಗಾಂಜಾ ಸೇದಲು ಬೆಂಕಿ ಪೊಟ್ಟಣ ನೀಡದಿದ್ದಕ್ಕೆ ಹಲ್ಲೆ; ಕುರಿಗಾಹಿಗಳನ್ನು ಮನಬಂದಂತೆ ಥಳಿಸಿದ ಪುಂಡರು

ಮದ್ಯ ಸೇವಿಸಿ ರಸ್ತೆಯಲ್ಲಿ ಮೋಜು ಮಸ್ತಿ; ಪ್ರಶ್ನೆ ಮಾಡಿದ ಭದ್ರಾ ವನ್ಯಜೀವಿ ವಿಭಾಗದ ಸಿಬ್ಬಂದಿಗಳ ಮೇಲೆ ಹಲ್ಲೆ

Read Full Article

Click on your DTH Provider to Add TV9 Kannada