ಚಾಕಲೇಟ್ ಕವರ್ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ನಾಲ್ವರು ಅರೆಸ್ಟ್!
ಬಂಧಿತರು ಕೋಡ್ ವರ್ಡ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಬೇಕಾದವರಿಂದ ಮೊದಲೇ ಆನ್ಲೈನ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು.
ದೇವನಹಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ (Students) ಡ್ರಗ್ಸ್ (Drugs) ಮಾರುತ್ತಿದ್ದ ಆರೋಪಿಗಳನ್ನ ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆನ್ಲೈನ್ನಲ್ಲೇ ವಿದೇಶದಿಂದ ಡ್ರಗ್ಸ್ ಖರೀದಿಸುತ್ತಿದ್ದರು. ಆರೋಪಿಗಳಾದ ಮೊಹಮ್ಮದ್ ಹರ್ಸಲಾಂ, ಮೊಹಮ್ಮದ್ ನದೀಂ, ಸಚಿಂದರ್ನ್, ಮೋಸಿನ್ ಅರೆಸ್ಟ್ ಆಗಿದ್ದಾರೆ. ಪೊಲೀಸರು ಬಂಧಿತರಿಂದ 8 ಗ್ರಾಂ ಎಂಡಿಎಂಎ ಮಾತ್ರೆ, ನಾಲ್ಕು ಮೊಬೈಲ್ಗಳು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 6 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ಬಂಧಿತರು ಕೋಡ್ ವರ್ಡ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಬೇಕಾದವರಿಂದ ಮೊದಲೇ ಆನ್ಲೈನ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಹಣ ಬಂದ ಬಳಿಕ ನಂತರ ರಸ್ತೆ ಬದಿಯಲ್ಲಿ ಡ್ರಗ್ಸ್ ಖದೀಮರು ಹಾಕುತ್ತಿದ್ದರು. ಚಾಕಲೇಟ್ ಪ್ಯಾಕೆಟ್ನಲ್ಲಿ ಹಾಕಿ ಹಣ ನೀಡಿದವರಿಗೆ ವಾಟ್ಸಾಪ್ನಲ್ಲಿ ಪೊಟೋ ಮತ್ತು ಲೊಕೇಷನ್ ಕಳಿಸುತ್ತಿದ್ದರು.
ಇದನ್ನೂ ಓದಿ: ನೂಪುರ್ ಹತ್ಯೆಗೈದವರಿಗೆ ಬಹುಮಾನ ಘೋಷಿಸಿದ್ದ ಅಜ್ಮೇರ್ ಧಾರ್ಮಿಕ ಮುಖಂಡನ ಬಂಧನ
ಹಲವು ದಿನಗಳಿಂದ ಇದೇ ರೀತಿ ಮಾಡಿ ಆರೋಪಿಗಳು ಹಣಗಳಿಸುತ್ತಿದ್ದಾರೆ. ಕೆಆರ್ ಪುರಂ, ಆವಲಹಳ್ಳಿ ಮತ್ತು ಹೊಸಕೋಟೆ ಸುತ್ತಮುತ್ತಲಿನ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳೇ ಇವರ ಟಾರ್ಗೆಟ್. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಡ್ರಗ್ಸ್ ಮತ್ತು ಡ್ರಗ್ಸ್ ಕಳಿಸುತ್ತಿದ್ದ ವಿದೇಶಿ ಪ್ರಜೆಯ ಬಂಧನಕ್ಕೆ ಶೋಧ ನಡೆಯುತ್ತಿದೆ.
ಎಣ್ಣೆ ಕಳ್ಳರ ಬಂಧನ: ದಾವಣಗೆರೆ: ಮದ್ಯಪಾನ ಕದಿಯುತ್ತಿದ್ದ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.35 ಲಕ್ಷ ರೂ. ಹಾಗೂ ಏಳು ಲಕ್ಷ ಬೆಲೆ ಬಾಳುವ ಬುಲೆರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಹರಿಹರ ಹಾಗೂ ದಾವಣಗೆರೆ ನಗರದ ವೈನ್ ಶಾಪ್ಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಈಗಾಗಲೇ ಐದು ವೈನ್ ಶಾಪ್ಗಳಲ್ಲಿ ಕಳ್ಳತನ ಎಸಗಿದ್ದಾರೆ.
Published On - 10:15 am, Wed, 6 July 22