AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟವಾಡುವ ವೇಳೆ ಅವಘಡ: ​ವಿದ್ಯುತ್​​ ಶಾಕ್​​ ತಗುಲಿ ಅಕ್ಕ-ತಮ್ಮನ ಸ್ಥಿತಿ ಗಂಭೀರ

ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಅಕ್ಕ-ತಮ್ಮನಿಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ಮಾಲೀಕ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಗಾಯಾಳು ಮಕ್ಕಳ ತಂದೆ ದೂರಿನ ಅನ್ವಯ ಮನೆ ಮಾಲೀಕ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟವಾಡುವ ವೇಳೆ ಅವಘಡ: ​ವಿದ್ಯುತ್​​ ಶಾಕ್​​ ತಗುಲಿ ಅಕ್ಕ-ತಮ್ಮನ ಸ್ಥಿತಿ ಗಂಭೀರ
ಸಾನ್ವಿ ಮತ್ತು ಅಯಾನ್​​
ಮಂಜುನಾಥ ಎಚ್​. ವಿ.
| Edited By: |

Updated on:Oct 18, 2026 | 12:10 PM

Share

ಬೆಂಗಳೂರು, ಅಕ್ಟೋಬರ್​​ 18: ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್​ ತಂತಿ ತಗುಲಿ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯ ಅದ್ದೇವಿಶ್ವನಾಥಪುರದಲ್ಲಿ ನಡೆದಿದೆ. ಕೊಟ್ರೇಶಿ ಹಾಗೂ ಸುಧಾ ದಂಪತಿಯ ಮಕ್ಕಳಾದ 5 ವರ್ಷದ ಅಯಾನ್​​ , 13 ವರ್ಷದ ಸಾನ್ವಿ ಗಾಯಗೊಂಡಿರುವ ಮಕ್ಕಳಾಗಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬಳಸೋ ಮೆಟಲ್ ಮೆಸರ್​ಮೆಂಟ್​ ಟೇಪ್ ತಗುಲಿ ಅವಘಡ ನಡೆದಿದ್ದು, ಎರಡೂವರೆ ತಿಂಗಳ ಹಿಂದಷ್ಟೇ ಬಾಡಿಗೆ ಮನೆಗೆ ಕೊಟ್ರೇಶಿ-ಸುಧಾ ದಂಪತಿ ಬಂದಿದ್ದರು ಎನ್ನಲಾಗಿದೆ.

ಮನೆ ಮಾಲೀಕ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ?

ಮನೆ ಮುಂದೆ ಬಾಲಕ ಅಯಾನ್​ ಮೆಸರ್​ಮೆಂಟ್​ ಟೇಪ್ ಹಿಡಿದು ಆಟವಾಡುತ್ತಿದ್ದ. ಈ ವೇಳೆ ವಿದ್ಯುತ್ ತಂತಿ ಮೇಲೆ ಮೆಟಲ್​ ಆತ ಟೇಪ್​​ ಹಾಕಿದ್ದ. ಇದೇ ವೇಳೆ ತಮ್ಮನನ್ನು ಕರೆದೊಯ್ಯಲು ಅಕ್ಕ ಸಾನ್ವಿ ಮನೆಯಿಂದ ಹೊರ ಬಂದಿದ್ದಳು. ಹೀಗಾಗಿ ಇಬ್ಬರಿಗೂ ವಿದ್ಯುತ್ ಪ್ರವಹಿಸಿ ಗಂಭೀರ ಗಾಯವಾಗಿದೆ. ಅವಘಡದಲ್ಲಿ ಬಾಲಕಿ ಸಾನ್ವಿಯ ಬಲಗೈ ಕಟ್ಟಾಗಿದ್ದರೆ, ಬಾಲಕ ಅಯಾನ್​ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಯಿ ದಿನಸಿ ತರಲು ಮನೆಯಿಂದ ಹೊರ ಹೋಗಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ICUನಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗ್ತಿದ್ದು, ಸಾವು ಬದುಕಿನ ಮಧ್ಯೆ ಮಕ್ಕಳು ಹೋರಾಡುತ್ತಿದ್ದಾರೆ. ಮನೆ ಮಾಲೀಕ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಗಾಯಾಳು ಮಕ್ಕಳ ತಂದೆ ಕೊಟ್ರೇಶಿ ದೂರಿನ ಅನ್ವಯ ಮನೆ ಮಾಲೀಕ ಸೋಮಶೇಖರ್, ಬೆಸ್ಕಾಂ ಅಧಿಕಾರಿಗಳ ವಿರುದ್ಧ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸ್ಪಾ ಮಾಲೀಕನಿಗೆ ಬೆದರಿಕೆ ಹಾಕಿ ಹಣ ವಸೂಲಿ: ನಾಲ್ವರು ಮಹಿಳೆಯರು ಸೇರಿ ಆರು ಮಂದಿ ಅರೆಸ್ಟ್!

ಮಕ್ಕಳ ಸ್ಥಿತಿಗೆ ಹೆತ್ತವರ ಆಕ್ರಂದನ

ಬಾಡಿಗೆ ಮನೆಗೆ ಬಂದಾಗ ವಿದ್ಯುತ್​ ತಂತಿ ಹಾದು ಹೋಗಿದ್ದ ಬಗ್ಗೆ ಮಾಹಿತಿ ನೀಡಿದ್ದ ಕೊಟ್ರೇಶಿ ಬೆಸ್ಕಾಂಗೆ ಹೇಳಿ ಪ್ಲ್ಯಾಸ್ಟಿಕ್​ ಹೊದಿಕೆ ಹಾಕಿಸುವಂತೆ ಮನೆ ಮಾಲೀಕ ಸೋಮಶೇಖರ್​ಗೆ ಹೇಳಿದ್ದರು. ಆದರೂ ಯಾರೂ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಟ್ರೇಶಿ ಹಾಗೂ ಸುಧಾ ದಂಪತಿ, ವಿದ್ಯುತ್​ ತಂತಿ ಬಗ್ಗೆ ಮನೆ ಮಾಲೀಕರಿಗೆ ಹೇಳಿದ್ದೆವು. ಆದರೆ ಅವರು ನಮ್ಮ‌ಮೇಲೆಯೇ ದೌರ್ಜನ್ಯ ಮಾಡಿದ್ದರು. ಅದಾದ ವಾರದ ಬಳಿಕ ಮಕ್ಕಳಿಗೆ ಈ ರೀತಿ ಆಗಿದೆ. ದೊಡ್ಡ ಮಗಳು, ಚಿಕ್ಕ ಮಗನಿಗೆ ಗಂಭೀರ ಗಾಯವಾಗಿದೆ. ಮಗಳಿಗೆ ಬಲಗೈ ಕಟ್ ಮಾಡಿದ್ದಾರೆ, ಕಾಲು ತೆಗೆಯಬೇಕು ಅಂತಿದ್ದಾರೆ. ಮನೆ ಮಾಲೀಕರು ಮಾನವೀಯತೆ ದೃಷ್ಟಿಯಿಂದನೂ ಮಕ್ಕಳನ್ನ ಬಂದು ನೋಡಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಹಾವೇರಿಯಿಂದ ಬಂದಿದ್ದರು. ಇಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಮಕ್ಕಳ ಪರಿಸ್ಥಿತಿ ಇದ್ದೂ ಸತ್ತಂತಾಗಿದೆ. ಬಾಲಕಿ ವಿದ್ಯಾಭ್ಯಾಸದಲ್ಲಿ ಬ್ರಿಲಿಯಂಟ್ ಇದ್ದಳು. ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೊಟ್ರೇಶಿ ಸ್ನೇಹಿತರು ಆಗ್ರಹಿಸಿದ್ದಾರೆ.

‘ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡಲು ಮನವಿ’

ಆಟವಾಡುವ ವೇಳೆ ವಿದ್ಯುತ್​​ ಶಾಕ್​​ ತಗುಲಿ ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಧ್ಯಮದ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನ ಸಂಪರ್ಕ ಮಾಡಿದ್ದು, ಪರಿಹಾರ ಏನು ಕೊಡಬೇಕಿದೆ ಎಂಬುದನನ್ನ ಚರ್ಚೆ ಮಾಡಿರೋದಾಗಿ ಶಾಸಕ ಎಸ್. ಆರ್. ವಿಶ್ವನಾಥ್ ತಿಳಿಸಿದ್ದಾರೆ. ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಸಣ್ಣ ವಯಸ್ಸಿನಲ್ಲಿಯೇ ಈ ರೀತಿ ಆಗಿರೋದಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಇಂಧನ ಸಚಿವರಲ್ಲಿಯೂ ಮನವಿ ಮಾಡಲಾಗುವುದು. ಹಳ್ಳಿಗಳಲ್ಲಿ 11 ಕೆವಿ ಬಳಿ ಬಫರ್ ಝೋನ್ ಇರುತ್ತೆ. ಅಲ್ಲಿ ಕಟ್ಟಡ ಕಟ್ಟಬಾರದು ಎಂದು ಆದೇಶ ಇರತ್ತೆ. ಇಲ್ಲಿಅಧಿಕಾರಿಗಳು ಹಾಗೂ ಮನೆಯವರು ಇಬ್ಬರ ನಿರ್ಲಕ್ಷ್ಯವೂ ಇದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:55 am, Sun, 18 October 26

Follow Us
ಮಂಜುನಾಥ ಎಚ್​. ವಿ.
ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ