ನೆಲಮಂಗಲದಲ್ಲಿ ಡಾಬಾ ಮೇಲೆ ದಾಳಿ ಪ್ರಕರಣ; ದಾಳಿಗೊಳಗಾದ ಯುವಕ ಚಿಕಿತ್ಸೆ ಫಲಿಸದೆ ಸಾವು
ಡಿಸೆಂಬರ್ 24ರಂದು ರಾತ್ರಿ 10.30ಕ್ಕೆ ಡಾಬಾ ಕ್ಲೋಸ್ ಮಾಡಿದ್ದರು. ರಾತ್ರಿ 12 ಗಂಟೆ ಸಮಯದಲ್ಲಿ ಇಬ್ಬರು ಒಂದೇ ರೂಮ್ನಲ್ಲಿದ್ದರು. 12.40ಕ್ಕೆ ಹೊರಗಡೆಯಿಂದ ಜೋರಾಗಿ ಶಬ್ಧ ಮತ್ತು ಬೆಳಕು ಕಾಣಿಸಿದೆ.
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ದೊಡ್ಡಬ್ಯಾಲಕೆರೆಯ ಡಾಬಾ ಮೇಲೆ ಅಪರಿಚಿತರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದಾಳಿಗೊಳಗಾದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹಾಸನ ಮೂಲದ ಕೆಲಸಗಾರ ಮನೋಜ್ (29)ಮೃತ ದುರ್ದೈವಿ. ದೊಡ್ಡಬ್ಯಾಲಕೆರೆ ಗ್ರಾಮದ ಯೂ ಟರ್ನ್ ಎಂಬ ಡಾಬಾ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದರು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಡಿಸೆಂಬರ್ 24ರಂದು ರಾತ್ರಿ 10.30ಕ್ಕೆ ಡಾಬಾ ಕ್ಲೋಸ್ ಮಾಡಿದ್ದರು. ರಾತ್ರಿ 12 ಗಂಟೆ ಸಮಯದಲ್ಲಿ ಇಬ್ಬರು ಒಂದೇ ರೂಮ್ನಲ್ಲಿದ್ದರು. 12.40ಕ್ಕೆ ಹೊರಗಡೆಯಿಂದ ಜೋರಾಗಿ ಶಬ್ಧ ಮತ್ತು ಬೆಳಕು ಕಾಣಿಸಿದೆ. ಶಾರ್ಟ್ ಸರ್ಕೂಟ್ ಆಗಿರಬಹುದುದೆಂದು ತಿಳಿದು ಹೊರಗಡೆ ಬಂದಾಗ ಬೆಂಕಿ ಹೊತ್ತಿಕೊಂಡಿದೆ. ನಂತರ ಬಾಗಿಲನ್ನು ತೆರೆದಾಗ ವ್ಯಕ್ತಿಯೊಬ್ಬ ಏಕಾಏಕಿ ಪೆಟ್ರೋಲ್ ಎರಚಿದ್ದಾರೆ ಅಂತ ಹೇಳಲಾಗುತ್ತಿದೆ.
ಗಾಯಗೊಂಡಿದ್ದ ಯುವಕ ಮನೋಜ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಯುವಕ ಉಸಿರು ಚೆಲ್ಲಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಇದನ್ನೂ ಓದಿ
Shiva Rajkumar: ಜಗಮೆಚ್ಚಿದ ‘ಭಜರಂಗಿ 2’; ಕನ್ನಡ ಚಿತ್ರಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಶಿವಣ್ಣ ನಟನೆಯ ಚಿತ್ರ
‘ವಾಣಿಜ್ಯನಗರಿ ಹುಬ್ಬಳ್ಳಿ ಗಾರ್ಬೇಜ್ ಸಿಟಿಯಾಗಿದೆ’ ಪಾಲಿಕೆಯ ಆವರಣದಲ್ಲಿ ಕಸ ಸುರಿದು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ