ಬೆಂಗಳೂರು: ಒಂದೇ ತಿಂಗಳಲ್ಲಿ 49 ಡ್ರಗ್ಸ್​ ಕೇಸ್​ ದಾಖಲು, 3 ಕೋಟಿ ರೂ. ಅಧಿಕ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು ನಗರದಲ್ಲಿ ಡ್ರಗ್ಸ್​ ಹಾವಳಿ ಮಿತಿ ಮೀರಿದೆ. ಬೆಂಗಳೂರಿನಲ್ಲಿ ಡ್ರಗ್ಸ್​ ಮಾಫಿಯಾವನ್ನು ಮಟ್ಟ ಹಾಕಲು ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ಬೆಂಗಳೂರು ಪೊಲೀಸರು ಎನ್​ಡಿಪಿಎಸ್​ ಅಡಿಯಲ್ಲಿ 49 ಪ್ರಕರಣ ದಾಖಲಿಸಿಕೊಂಡಿದ್ದಾರೆ. 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಒಂದೇ ತಿಂಗಳಲ್ಲಿ 49 ಡ್ರಗ್ಸ್​ ಕೇಸ್​ ದಾಖಲು, 3 ಕೋಟಿ ರೂ. ಅಧಿಕ ಮೌಲ್ಯದ ಮಾದಕ ವಸ್ತು ವಶ
ಸಾಂದರ್ಭಿಕ ಚಿತ್ರ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on: Oct 08, 2024 | 2:07 PM

ಬೆಂಗಳೂರು, ಅಕ್ಟೋಬರ್​ 08: ಎನ್​ಡಿಪಿಎಸ್​ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್​ಸ್ಟಾನ್ಸ್ ಆಕ್ಟ್​) ಅಡಿಯಲ್ಲಿ ಬೆಂಗಳೂರಿನಲ್ಲಿ (Bengaluru) ಒಂದೇ ತಿಂಗಳಲ್ಲಿ 49 ಪ್ರಕರಣಗಳು ದಾಖಲಾಗಿದ್ದು, 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್​ (Drugs) ಅನ್ನು ಪೊಲೀಸರು (Police) ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರು ವಿದೇಶಿ ಪ್ರಜೆಗಳು ಸೇರಿ 67 ಮಂದಿ ಡ್ರಗ್​ ಪೆಡ್ಲರ್​​ಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಒಟ್ಟು 171 ಕೆಜಿ 985 ಗ್ರಾಂ ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ ಎಂಡಿಎಂಎ, 998 ಎಕ್ಸ್ಟೆಸಿ ಮಾತ್ರೆಗಳು ಮತ್ತು 1089 ಎಲ್​ಎಸ್​ಡಿ ಸ್ಟ್ರಿಪ್ಸ್​ಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ.

ಡ್ರಗ್ಸ್​ ಕೇಸ್​ನಲ್ಲಿ​ ಸ್ನೇಹಿತರು ಅರೆಸ್ಟ್

ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಸ್ನೇಹಿತರನ್ನು ಸಿಸಿಬಿ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯರಪ್ಪನಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದರು. ಆಫ್ರಿಕಾ ಮೂಲದ ಮೈಕಲ್ ಓಕೆಲಿ ಮತ್ತು ಬೆಂಗಳೂರಿನ ಸಹನಾ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿತ್ತು.

ಆರೋಪಿ ಮೈಕೆಲ್​ 2018ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು, ಕೆ.ಆರ್​​.ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದನು. ಸಹನಾ ಮತ್ತು ಮೈಕಲ್​ ಸ್ನೇಹಿತರಾಗಿದ್ದು, ಒಟ್ಟಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು. ​​ಮೈಕಲ್ ಮತ್ತು ಸಹನಾ ಒಟ್ಟಿಗೆ ಕೆಆರ್​ಪುರಂನಿಂದ ಯರಪ್ಪನಹಳ್ಳಿ ಗ್ರಾಮಕ್ಕೆ ಶಿಫ್ಟ್​​ ಆಗಿದ್ದರು. ಇಲ್ಲಿ, ಒಂದೇ ಮನೆಯಲ್ಲಿ ವಾಸವಾಗಿದ್ದ ಮೈಕಲ್ ಮತ್ತು ಸಹನಾ, ಇಲ್ಲಿಂದಲೇ ಡ್ರಗ್ಸ್​ ಸರಬರಾಜು ಮಾಡಲು ಆರಂಭಿಸಿದ್ದರು.

ಇದನ್ನೂ ಓದಿ: ಅತಿದೊಡ್ಡ ಡ್ರಗ್ಸ್​ ಜಾಲ ಪತ್ತೆ; 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ​ವಶ

ಸಿಸಿಬಿ ಪೊಲೀಸರು ಜುಲೈನಲ್ಲಿ ಓರ್ವ ಡ್ರಗ್ಸ್​ ಪೆಡ್ಲರ್​ನನ್ನು​ ಬಂಧಿಸಿದ್ದರು. ಈತ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಮೈಕಲ್​ನ ಬಂಧನಕ್ಕೆ ಬಲೆಬೀಸಿದ್ದರು. ಆರೋಪಿ ಮೈಕಲ್ ಯರಪ್ಪನಹಳ್ಳಿ ಗ್ರಾಮದಲ್ಲಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ನಂತರ ಆತನ ಮನೆ ಮೇಲೆ ದಾಳಿ ಮಾಡಿ, ಬಂಧಿಸಿದ್ದರು. ಬಂಧಿತರಿಂದ ಒಂದು ಕೆಜಿಗೂ ಅಧಿಕ ಎಂಡಿಎಂಎ, ಮೂರು ಮೊಬೈಲ್​​​​​, ಎರಡು ಎಲೆಕ್ಟ್ರಾನಿಕ್​ ತೂಕದ ಯಂತ್ರವನ್ನು ಸಿಸಿಬಿ ಪೊಲೀಸರುಸ ವಶಕ್ಕೆ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ