ಅತ್ತ 5 ಹುಲಿಗಳು ಸಾವು… ಇತ್ತ ಬೆಂಗಳೂರಿನಲ್ಲಿ ನರಳಿ ನರಳಿ ಸತ್ತ ಐದು ನಾಯಿಗಳು
ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಐದು ಬೀದಿ ನಾಯಿಗಳು ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿವೆ. ಗುರುವಾರ ರಾತ್ರಿ ಆರು ಬೀದಿ ನಾಯಿಗಳು ರಕ್ತ ವಾಂತಿ ಮಾಡಿದ್ದು, ಐದು ನಾಯಿಗಳು ಮೃತಪಟ್ಟಿವೆ. ಬಿಬಿಎಂಪಿಯು ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಜೂನ್ 27: ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಮೇಲಿಂದ ಮೇಲೆ ವರದಿಯಾಗುತ್ತಿತ್ತು. ಆದರೆ ಇದೀಗ, ಬೆಂಗಳೂರಿನಲ್ಲಿ ಕೆ.ಆರ್.ಪುರಂನ (KR Puram) ಭಟ್ಟರಹಳ್ಳಿಯಲ್ಲಿ ಐದು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಡೆದಿದೆ. ಗುರುವಾರ (ಜೂ.26) ರಾತ್ರಿ ಆರು ಬೀದಿನಾಯಿಗಳು ರಕ್ತವಾಂತಿ ಮಾಡಿಕೊಂಡಿದ್ದವು. ಈ ಆರು ನಾಯಿಗಳ ಪೈಕಿ ಐದು ನಾಯಿಗಳು ಮೃತಪಟ್ಟಿವೆ. ಐದು ಬೀದಿ ನಾಯಿಗಳು ಒದ್ದಾಡಿ ಪ್ರಾಣಬಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಬೀದಿ ನಾಯಿಗಳ ಸಾವಿಗೆ ಕಾರಣ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನಾಯಿಗಳ ರಕ್ತದ ಮಾದರಿ ರವಾನೆ ಮಾಡಲಾಗಿದೆ. ಈ ಬೀದಿನಾಯಿಗಳಿಗೆ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆಯನ್ನು ಪೊಲೀಸರು ವ್ಯಕ್ತವಾಗಿದೆ.
ಇದನ್ನೂ ಓದಿ: ಜ್ಞಾನಭಾರತಿ ವಿವಿಯಲ್ಲಿ ಎಷ್ಟು ಮರ ಕಡಿಯಲಾಗುತ್ತಿದೆ? ಏಕೆ ಕೊಡಲಿ ಏಟು? ಕುಲಪತಿ ಸ್ಪಷ್ಟನೆ ಇಲ್ಲಿದೆ
ಬೀದಿ ನಾಯಿ ಹಾವಳಿ ತಡೆಗೆ BBMP ಮಾರ್ಗಸೂಚಿ
ಬೀದಿ ನಾಯಿಗಳ ಹಾವಳಿ ತಡೆಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬೀದಿ ನಾಯಿಗಳು ಮತ್ತು ಸಾಕು ನಾಯಿಗಳ ಕುರಿತು ಶಾಲಾ, ಕಾಲೇಜುಗಳಲ್ಲಿ ಬಿಬಿಎಂಪಿ ಜಾಗೃತಿ ಮೂಡಿಸಲು ಮುಂದಾಗಿತ್ತು.
- ಬೀದಿ ನಾಯಿಗಳ ಕಂಡಾಗ ತೊಂದರೆ ನೀಡಬಾರದು
- ನಾಯಿಗಳಿಗೆ ಯಾವುದೇ ಪ್ರಚೋದನೆ ನೀಡಬಾರದು
- ನಾಯಿಗಳಿಗೆ ತೊಂದರೆ ಕೊಟ್ಟರೆ ಮಾತ್ರ ದಾಳಿ ಮಾಡುತ್ತವೆ
- ಬೀದಿ ನಾಯಿ, ಸಾಕು ನಾಯಿ ಕಂಡಾಗ ಆರೋಗ್ಯದ ಬಗ್ಗೆ ಗಮನ
- ಅನಾರೋಗ್ಯದಿಂದ ಇರುವ ನಾಯಿಗಳಿಂದ ದೂರವಿರಿ
- ನಾಯಿಗಳು ಕಚ್ಚಿದರೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು
ಕಚ್ಚುವ ನಾಯಿಗಳು ತೀಕ್ಷ್ಣವಾದ ನೋಟ, ಬಿದ್ದ ದವಡೆ ಹೊಂದಿರುತ್ತವೆ ಎಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ನಾಯಿಗಳು ಕಚ್ಚಿದರೆ ಪಶುಸಂಗೋಪನಾ ಇಲಾಖೆ ಸಂಪರ್ಕ ಮಾಡಿ ತಿಳಸಬೇಕು. ಪಶುಸಂಗೋಪನಾ ಇಲಾಖೆ ಸಂಪರ್ಕಿಸಿ ಪರಿಹಾರ ಪಡೆಯಬೇಕು. ನಾಯಿಗಳ ಮೇಲೆ ದಾಳಿಗೆ ಮುಂದಾಗಬಾರದು. ನಾಯಿಗಳಿಂದ ಅಪಾಯ ಅಂತಾ ಗೊತ್ತಾದ್ರೆ ದೂರದಿಂದ ಸಾಗುವಂತೆ ಬಿಬಿಎಂಪಿ ಸಲಹೆ ನೀಡಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Fri, 27 June 25







