ಬೆಂಗಳೂರು: ಶೂ ಲೇಸ್ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವು
ಜೈಲಿನ ಶೌಚಾಲಯದಲ್ಲಿ ಶೂ ಲೇಸ್ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುನಿಲ್ ಮೃತ ರೌಡಿ ಶೀಟರ್.
ಬೆಂಗಳೂರು: ಜೈಲಿನ ಶೌಚಾಲಯದಲ್ಲಿ ಶೂ ಲೇಸ್ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್(Rowdy Sheeter) ಸಾವನ್ನಪ್ಪಿರುವ ಘಟನೆ ನಡೆದಿದೆ. ಸುನೀಲ್ ಮೃತ ರೌಡಿ ಶೀಟರ್. ಇತನ ಸಾವು ಇದೀಗ ಹಲವಾರು ಮೂಡಿಸಿದೆ. ಹೌದು ಶೂ ಲೇಸ್ನಿಂದ ನೇಣು ಬಿಗಿದುಕೊಂಡು ಸಾವನಪ್ಪಿದ ರೀತಿಯಲ್ಲಿ ಆತನ ಶವ ಪತ್ತೆಯಾಗಿದೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದ ಆತ. ಇನ್ನು ಹತ್ತು ದಿನಗಳಲ್ಲಿ ಅಂದರೆ ಜೂನ್.2 ಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಬೇಕಿದ್ದ. ಇನ್ನು ಈ ರೌಡಿಶೀಟರ್ ಸುನೀಲ್ ‘ಕಗ್ಗಲಿಪುರದಲ್ಲಿ ವಿನೋದ್ ಎಂಬಾತನನ್ನ ಕೊಲೆ ಮಾಡಿ ಜೈಲು ಸೇರಿದ್ದ.
ಕೆಲ ದಿನಗಳ ಹಿಂದೆ ನನ್ನನ್ನ ಕೊಲೆ ಮಾಡಲು ಸ್ಕೆಚ್; ಬಾತ್ರೂಮ್ನಲ್ಲಿ ನನ್ನ ಶವ ಸೀಗಬಹುದು ಹೇಳಿದ್ದ ಸುನೀಲ್
ಹೌದು ಕೊಲೆ ಮಾಡಿ ಜೈಲು ಸೇರಿದ್ದ ಸುನೀಲ್ ‘ಕೆಲ ದಿನಗಳ ಹಿಂದೆ ತನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಅಥವಾ ಬಾತ್ರೂಮ್ನಲ್ಲಿ ನಾನೇ ನೇಣುಹಾಕಿಕೊಂಡ ರೀತಿ ನಿಮಗೆ ಸಿಗಬಹುದು ಎಂದು ಸಹ ಹೆಳಿಕೊಂಡಿದ್ದ. ಈ ಹಿಂದೆ ಕೊಲೆಯಾಗಿದ್ದ ವಿನೋದ್ ಮಾಜಿ ಕಾರ್ಪೊರೇಟರ್ ಓರ್ವರ ಅಣ್ಣನ ಮಗನಾಗಿದ್ದ. ಇವೆಲ್ಲವನ್ನೂ ನೋಡುತ್ತಿದ್ದರೆ. ರೌಡಿಶೀಟರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಶುರು ಮಾಡಿದ್ದಾರೆ. ಆ ಬಳಿಕವೇ ಸಾವಿಗೆ ನಿಜವಾದ ಕಾರಣ ತಿಳಿದು ಬರಬೇಕಿದೆ.
ಇದನ್ನೂ ಓದಿ:10 ವರ್ಷ ಬಾಲಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತಾಯಿ, ರೌಡಿ ಶೀಟರ್ ಹಾಗೂ ಆತನ ಪ್ರೇಯಸಿಯನ್ನು ಬಂಧಿಸಿದ ಪೊಲೀಸರು
ಮೈಸೂರು ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ರಿಲೀಸ್
ಮೈಸೂರು: ಜಿಲ್ಲೆಯ ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಸನ್ನಡತೆ ಆಧಾರದ ಮೇಲೆ ಅರ್ಹ ಜೀವಾವಧಿ ಬಂಧಿಗಳ ಅವಧಿ ಪೂರ್ವ ಬಿಡುಗಡೆ ಮಾಡಲಾಗುತ್ತಿದೆ. ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 23 ಪುರುಷ, ಮಹಿಳೆ ಸೇರಿ ಒಟ್ಟು 24 ಕೈದಿಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹಾಗೂ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸುಮಾರು 14 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಸೋಮವಾರ ರಿಲೀಸ್ ಮಾಡಲಾಗಿದೆ. ಕಾರಾಗೃಹದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ದಿನೇಶ್ ಸಮ್ಮುಖದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೈದಿಗಳಿಗೆ ದಿನೇಶ್ ಅವರು, ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ