ಬೆಂಗಳೂರು: ವೀಸಾ ವೆರಿಫಿಕೇಶನ್ಗೆಂದು ಮನೆಗೆ ಆಗಮಿಸಿ ಸುಲಿಗೆ ಮಾಡಿದ್ದ ಗ್ಯಾಂಗ್ ಅರೆಸ್ಟ್
ಎಪ್ರಿಲ್ 10 ರಂದು ವೀಸಾ ವೆರಿಫಿಕೇಶನ್ಗೆಂದು ಮನೆಗೆ ಬಂದು, ಕೈಕಾಲು ಕಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ನ್ನ ಇದೀಗ ಕುಮಾರಸ್ವಾಮಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಎಪ್ರಿಲ್ 10 ರಂದು ವೀಸಾ ವೆರಿಫಿಕೇಶನ್(Visa Verification)ಗೆಂದು ಮನೆಗೆ ಬಂದು, ಕೈಕಾಲು ಕಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ನ್ನ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಕುಮಾರಸ್ವಾಮಿ ಲೇಔಟ್(Kumaraswamy Layout) ನ ಮುರುಳಿದರ್ ಎಂಬುವವರ ಮನೆಗೆ ವೀಸಾ ವೆರಿಫಿಕೇಶನ್ಗೆಂದು ಬಂದಿದ್ದ ಗ್ಯಾಂಗ್. ಕಾಲಿಂಗ್ ಬೆಲ್ ಮಾಡಿ ತಾವು ವೀಸಾ ವೆರಿಫಿಕೇಶನ್ಗೆ ಬಂದಿದ್ದೆವೆ ಎಂದಿದ್ದರು. ಬಳಿಕ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿ, ಆಧಾರ್ ಕಾರ್ಡ್ ತರಲು ಹೋಗುತ್ತಿದ್ದಂತೆ ಕೆಳಗೆ ಬಿಳಿಸಿ, ಕೈಕಾಲು ಕಟ್ಟಿ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇನ್ನು ದೂರಿನ್ವಯ ತನಿಖೆ ಶುರು ಮಾಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಇದೀಗ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಸ್ವರೂಪ್, ಅತ್ಮಾನಂದ, ಶಾಲಿಂ ಬಂಧಿತ ಅರೋಪಿಗಳು. ಪಿಜಿ ಒಂದನ್ನು ನಡೆಸುತಿದ್ದ ಸ್ವರೂಪ್, ಅದೇ ಪಿಜಿಯಲ್ಲಿ ವಾಸ ಮಾಡುತ್ತಿದ್ದ ಶಾಲಿಂ ಮತ್ತು ಅತ್ಮಾನಂದ್ನನ್ನು ಜೊತೆಗೆ ಸೇರಿಸಿಕೊಂಡು ಕೃತ್ಯ ಎಸಗಿದ್ದರು. ವಿಚಾರಣೆ ವೇಳೆ ಇನ್ನು ಹಲವಾರು ಕಡೆ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅರೋಪಿಗಳ ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಇನ್ನಷ್ಟು ಸತ್ಯಾಸತ್ಯತೆ ಗೊತ್ತಾಗಲಿದೆ.
ಇದನ್ನೂ ಓದಿ:ಬೆಂಗಳೂರು: ವೀಲಿಂಗ್ ಮಾಡಲು ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಕಳ್ಳತನ: ಡಿಯೋ ಬೈಕ್ ಟಾರ್ಗೆಟ್
9 ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ ಮಗಳು ಅರೆಸ್ಟ್
ರಾಮನಗರ: ಈಕೆಯನ್ನ ಒಮ್ಮೆ ನೋಡಿ, ಈಕೇಗೆ ಯಾವುದೇ ಪಶ್ಚಾತಾಪವಿಲ್ಲ. ತಾನು ತಪ್ಪು ಮಾಡಿದ್ದೇನೆ ಎಂಬ ನೋವು ಕೂಡ ಇಲ್ಲ. ಇಕೆ ಮಾಡಿರುವ ಅಂತಿಂತಾ ತಪ್ಪಲ್ಲ. ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಅಂದಹಾಗೆ ಈಕೆಯ ಹೆಸರು ಶಶಿಕಲಾ(20), ತನ್ನ ತಾಯಿ ಶಾಂತಮ್ಮ ಅವರ 50 ಗ್ರಾಂ ಮಾಂಗಲ್ಯ ಸರವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಳು. ಇದೀಗ ಮಾಡಿದ ತಪ್ಪಿಗೆ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಅಂದಹಾಗೆ ಶಶಿಕಲಾಗೆ ಈಗಾಗಲೇ 20 ವರ್ಷದ ಕೆಳಗೆ ಮದುವೆಯಾಗಿದೆ. ಎದೆ ಉದ್ದ ಮಕ್ಕಳು ಕೂಡ ಇದ್ದಾರೆ. ಏಳು ವರ್ಷದ ಕೆಳಗೆ ಗಂಡ ತೀರಿ ಹೋಗಿದ್ದಾನೆ. ಕಳೆದ ಹಲವು ವರ್ಷಗಳಿಂದ ಕುಟುಂಬಸ್ಥರಿಂದ ದೂರ ಆಗಿ ಬೆಂಗಳೂರಿನಲ್ಲಿ ವಾಸವಿದ್ದಳು. ಇತ್ತೀಚಿಗೆ ಮತ್ತೆ ವಾಪಾಸ್ ರಾಮನಗರಕ್ಕೆ ಬಂದಿದ್ದಳು.
ಬರಿಗೈಯಲ್ಲಿ ಬಂದ ಶಶಿಕಲಾ, ರಾಮನಗರದಲ್ಲಿ ಬಾಡಿಗೆ ಮನೆ ಮಾಡಲು ಹಣವಿಲ್ಲವೆಂದು ಅಂದು ಮಧ್ಯಾಹ್ನ ಏಕಾಏಕಿ ತನ್ನ ತಾಯಿ ಮನೆ ರಾಮನಗರದ ಕೆಂಪೇಗೌಡನದೊಡ್ಡಿ ಗ್ರಾಮಕ್ಕೆ ಹೋಗಿದ್ದಾಳೆ. ಅಲ್ಲಿ ಅಕ್ಕಪಕ್ಕದ ಮನೆಯವರನ್ನ ಮಾತನಾಡಿಸಿ, ನಂತರ ತನ್ನ ತಾಯಿ ಮನೆಯಲ್ಲಿ ಯಾರು ಇಲ್ಲದಿರುವ ಬಗ್ಗೆ ತಿಳಿದುಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಯೊಳಗೆ ಹೋಗಿ, ಮನೆಯಲ್ಲಿ ಮಲಗಿದ್ದ ತಾಯಿ ಶಾಂತಮ್ಮ ಅವರ 50 ಗ್ರಾಂ ಮಾಂಗಲ್ಯ ಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಳು. ಬಳಿಕ ಪೊಲೀಸರು ಬಂಧಿಸಿದ್ದರು.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ