ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಗುಂಡೇಟು
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ರಾಗಿಹಳ್ಳಿ ಬಳಿ ನಟೋರಿಯಸ್ ರೌಡಿಶೀಟರ್ ವೆಂಕಟರಾಜು ಅಲಿಯಾಸ್ ತುಕಡಿ ಮೇಲೆ ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿ, ಬಂಧಿಸಿದ್ದಾರೆ. ಬಂಧಿಸಲು ಹೋದ ವೇಳೆ ಬಾಲ ಬಿಚ್ಚಿದ್ದ ಹಿನ್ನಲೆ ಆತನ ಕಾಲಿಗೆ ಫೈರಿಂಗ್ ಮಾಡಲಾಗಿದೆ.
ಬೆಂಗಳೂರು, ಆ.03: ಆನೇಕಲ್(Anekal)ನಲ್ಲಿ ಪೊಲೀಸರ ಗನ್ ಮತ್ತೆ ಸದ್ದು ಮಾಡಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ರಾಗಿಹಳ್ಳಿ ಬಳಿ ನಟೋರಿಯಸ್ ರೌಡಿಶೀಟರ್ ವೆಂಕಟರಾಜು ಅಲಿಯಾಸ್ ತುಕಡಿ ಮೇಲೆ ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿ, ಬಂಧಿಸಿದ್ದಾರೆ. ಆತನನ್ನು ಅರೆಸ್ಟ್ ಮಾಡಲು ಹೋದಾಗ ಕ್ರೈಂ ಸಿಬ್ಬಂದಿ ವಿನಯ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.
ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಪೊಲೀಸರು
ಮೊದಲು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುಂತೆ ವಾರ್ನಿಂಗ್ ಮಾಡಿದ್ದಾರೆ. ಅದಕ್ಕೆ ಕೇಳದೆ ಇದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ರೌಡಿ ಶೀಟರ್ ವೆಂಕಟರಾಜು, ಶೆಟ್ಟಿಹಳ್ಳಿ ಬಳಿ ಕೊಲೆ ಯತ್ನ ನಡೆಸಿದ್ದ. ಈ ಹಿನ್ನಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ:ಫೈರಿಂಗ್ ವೇಳೆ ಗಾಯಗೊಂಡಿದ್ದ ರೌಡಿಶೀಟರ್; ಚಿಕಿತ್ಸೆಗೆ ಕರೆದೊಯ್ಯುವಾಗ ಸಿಪಿಐ ಮೇಲೆ ಚಾಕು ಇರಿದು ಪರಾರಿಗೆ ಯತ್ನ
ಅಂದಿನಿಂದ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಕೊಲೆ, ಕೊಲೆ ಯತ್ನ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ವೆಂಕಟರಾಜು, ಹತ್ತಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದವನನ್ನು ಬಂಧಿಸಲು ಹೋದ ವೇಳೆ ಬಾಲ ಬಿಚ್ಚಿದ್ದಾನೆ. ಈ ಹಿನ್ನಲೆ ರೌಡಿ ಶೀಟರ್ ಕಾಲಿಗೆ ಫೈರಿಂಗ್ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ