ಫೈರಿಂಗ್ ವೇಳೆ ಗಾಯಗೊಂಡಿದ್ದ ರೌಡಿಶೀಟರ್; ಚಿಕಿತ್ಸೆಗೆ ಕರೆದೊಯ್ಯುವಾಗ ಸಿಪಿಐ ಮೇಲೆ ಚಾಕು ಇರಿದು ಪರಾರಿಗೆ ಯತ್ನ
ಬೀದರ್ ನಗರದಲ್ಲಿ ರೌಡಿಶೀಟರ್ ರಸೂಲ್ ಮೇಲೆ ಫೈರಿಂಗ್ ಮಾಡಲಾಗಿತ್ತು. ಹೀಗಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಬೀದರ್ ನ್ಯೂಟೌನ್ ಠಾಣೆ ಸಿಪಿಐ ಸಂತೋಷ್ ಮೇಲೆ ರಸೂಲ್ ದಾಳಿ ಮಾಡಿದ್ದು ಕೈಗೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಬೀದರ್, ಮೇ.30: ಬೀದರ್ ನಗರದಲ್ಲಿ ರಾತ್ರಿ ಪೊಲೀಸರ ಬಂದೂಕು ಗುಂಡಿನ ಸದ್ದು ಮಾಡಿದೆ. ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯ (Bidar New Town Police Station) ಸಿಪಿಐ ಸಂತೋಷ್ ಅವರು ಆತ್ಮರಕ್ಷಣೆಗಾಗಿ ರೌಡಿಶೀಟರ್ ರಸೂಲ್ ಮೇಲೆ ಗುಂಡು (Firing) ಹಾರಿಸಿದ್ದರು. ಆದರೆ ರೌಡಿಶೀಟರ್ನನ್ನು ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಸಿಪಿಐ ಸಂತೋಷ್ ಮೇಲೆ ರೌಡಿಶೀಟರ್ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿ ಸಿಪಿಐ ಕೈಗೆ ಚಾಕುವಿನಿಂದ ಇರಿದಿದ್ದಾನೆ.
ರೌಡಿಶೀಟರ್ ರಸೂಲ್ಗೆ ಚಿಕಿತ್ಸೆಗೆಂದು ನ್ಯೂಟೌನ್ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಕರೆದೊಯ್ಯುವಾಗ ಕಿರಿಕ್ ಆಗಿದ್ದು ತಪ್ಪಿಸಿಕೊಳ್ಳಲು ಯತ್ನಿಸಿ ಸಿಪಿಐ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಗಾಯಗೊಂಡ ಸಿಪಿಐ ಸಂತೋಷ್ ಅವರಿಗೆ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು ರೌಡಿಶೀಟರ್ಗೂ ಚಿಕಿತ್ಸೆ ಮುಂದುವರೆದಿದೆ. ರೌಡಿಶೀಟರ್ ರಸೂಲ್ ಮಾರಕ ಖಾಯಿಲೆಗೆ ತುತ್ತಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಬೀದರ್‌ನ ಹೃದಯ ಭಾಗದಲ್ಲಿರುವ ಸಾಯಿ ಸ್ಕೂಲ್ ಆವರಣದ ಬಳಿ ರಾತ್ರಿ ಫೈಯರಿಂಗ್ ನಡೆದಿತ್ತು. ರಸೂಲ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಿಪಿಐ ಸಂತೋಷ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಈ ವೇಳೆ ರಸೂಲ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರಸೂಲ್ ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿ ಚಾಕು ಇರಿದಿದ್ದಾನೆ. ಚಾಕು ಇರಿತದ ಬಳಿಕ ಆತ್ಮರಕ್ಷಣೆಗಾಗಿ ರಸೂಲ್ ಬಲಗಾಲಿಗೆ ಸಿಪಿಐ ಸಂತೋಷ ಫೈರ್ ಮಾಡಿದ್ದಾರೆ. ಸದ್ಯ ಗಾಯಗೊಂಡ ಸಿಪಿಐ ಸಂತೋಷಗೆ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆದಿದ್ದು ಮಾರಕ ಖಾಯಿಲೆಗೆ (ಹೆಚ್‌ಐವಿ) ತುತ್ತಾಗಿರೋ ರೌಡಿಶೀಟರ್ ರಸೂಲ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್ ನಲ್ಲಿ ಕಲಬುರಗಿಗೆ ರವಾನಿಸಲಾಗಿದೆ.
ಇದನ್ನೂ ಓದಿ: ಮನುಷ್ಯ ತನ್ನ ಜೀವನಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ, ಹೇಗೆ? ಇಲ್ಲಿದೆ ವಿವರಣೆ
ಮನೆಯಿಂದ ಹೊರಹೋದವನು ವರುಣ ನಾಲೆ ಬಳಿ ಶವವಾಗಿ ಪತ್ತೆ
ಮೈಸೂರಿನಲ್ಲಿ ಯುವಕನ ಕೊಲೆ ಆರೋಪ ಕೇಳಿ ಬಂದಿದೆ. ವರುಣ ನಾಲೆ ಬಳಿ ಯುವಕನ ಶವ ಪತ್ತೆಯಾಗಿದೆ. ಕೊಲೆ ಮಾಡಿ ಬಿಸಾಕಿದ್ದಾರೆ ಎನ್ನಲಾಗುತ್ತಿದೆ. ಮೈಸೂರು ತಾಲ್ಲೂಕು ಮಾವಿನಹಳ್ಳಿ ಗ್ರಾಮದ ರಾಘವೇಂದ್ರ (35) ಮನೆಯಿಂದ ಹೊರಹೋದವನು ಶವವಾಗಿ ಪತ್ತೆಯಾಗಿದ್ದಾನೆ. ಮಾವಿನಹಳ್ಳಿ ಗ್ರಾಮದ ಗೋವಿಂದ ಕರಿಯ ಎಂಬುವವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದೆ ರಾಘವೇಂದ್ರ ಜೊತೆ ಆರೋಪಿಗಳು ಗಲಾಟೆ ಮಾಡಿಕೊಂಡಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಘವೇಂದ್ರ ನಿನ್ನೆ ರಾತ್ರಿ ಮನೆಯಿಂದ ಹೋದವರು ಮತ್ತೆ ವಾಪಸ್ಸು ಬಂದಿರಲಿಲ್ಲ. ಇದೀಗ ವರುಣ ನಾಲೆ ಬಳಿ ರಾಘವೇಂದ್ರ ಶವ ಪತ್ತೆಯಾಗಿದೆ. ಕತ್ತು ಮುಖದ ಮೇಲೆ ಗಾಯದ ಗುರುತುಗಳಿವೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ