ಮಗನ ಕೊಂದು ಮನೆ ಲಾಕ್ ಮಾಡಿ ಮಲತಂದೆ ಪರಾರಿ: ಶವದ ಮುಂದೆ 3 ದಿನ ನರಳಾಡಿದ ತಾಯಿ!

ಅಪಾರ್ಟ್‌ಮೆಂಟ್​ವೊಂದರಲ್ಲಿ ಮಲತಂದೆಯೊಬ್ಬ ಮಗನನ್ನು ಕೊಂದಿರುವ ಘಟನೆ ಮೂರು ದಿನದ ಬಳಿಕ ಬೆಳಕಿಗೆ ಬಂದಿದೆ. ಹೌದು..ಮಗನನ್ನು ಕೊಂದು, ಪತ್ಮಿ ಮೇಲೆ ಹಲ್ಲೆ ಮಾಡಿ ಮನೆ ಲಾಕ್‌ ಮಾಡಿಕೊಂಡು ಪರಾರಿಯಾಗಿದ್ದು, ಹೀಗಾಗಿ ತಾಯಿ ಮಗನ ಶವದ ಮುಂದೆ ಮೂರು ದಿನ ನರಳಾಡಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮೂರು ದಿನದ ನಂತರ ಘಟನೆ ಬೆಳಕಿಗೆ ಬಂದಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಮಗನ ಕೊಂದು ಮನೆ ಲಾಕ್ ಮಾಡಿ ಮಲತಂದೆ ಪರಾರಿ:  ಶವದ ಮುಂದೆ 3 ದಿನ ನರಳಾಡಿದ ತಾಯಿ!
ಸುದೀಪ್ (ಕೊಲೆಗಾರ), ಸೋಹಮ್ ದಾಸ್‌ (ಮೃತ ಮಗ)
Edited By:

Updated on: Nov 20, 2026 | 8:35 PM

ಬೆಂಗಳೂರು, (ನವೆಂಬರ್ 20): ಮಲತಂದೆಯೊಬ್ಬ ಮಗನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ಮಲತಂದೆ ಸುದೀಪ್ ಎಂಬಾತ 18 ವರ್ಷದ ಮಗ ಸೋಹಮ್ ದಾಸ್‌ ನನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಮನೆ ಡೋರ್ ಲಾಕ್ ಮಾಡಿಕೊಂಡು ಪರಾರಿಯಾಗಿದ್ದು. ಘಟನೆ ನಡೆದ ಮೂರು ದಿನದ ಬಳಿಕ ಮನೆ ಮಾಲೀಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಹಂತಕ ಮಲತಂದೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ತಾಯಿ, ಮೂರು ದಿನಗಳಿಂದ ಅನ್ನ, ನೀರಿಲ್ಲದೆ ಕಣ್ಣಮುಂದೆಯೇ ಮಗನ ಶವ ನೋಡುತ್ತಾ ತಾಯಿ ನರಳಾಡಿದ್ದಾಳೆ.

3 ದಿನಗಳಿಂದ ನರಳಾಡಿದ ತಾಯಿ

ಇನ್ನು ಮೂರು ದಿನದ ಬಳಿಕ ಮಾಲೀಕ ಅಪಾರ್ಟ್ಮೆಂಟ್ ಬಳಿ ಬಂದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಬಂದು ಮುಖ್ಯ ಬಾಗಿಲನನ್ನು ಓಪನ್ ಮಾಡಿಸಿ ನೋಡಿದಾಗ ಒಂದು ರೂಮ್ ನಿಂದ ಸುದೀಪ್ ಪತ್ನಿ ಸೀಮಾದಾಸ್ ಕೂಗುತ್ತಿರೋ ಶಬ್ದ ಕೇಳಿಬಂದಿದೆ.  ಮೂರು ದಿನಗಳಿಂದ ಮಗನ ಮೃತದೇಹ ಬಾತ್​ ರೂಮ್​​ನಲ್ಲಿ ಬಿದ್ದಿದ್ದರೆ, ಇನ್ನೊಂದು ರೂಮ್​​ನಲ್ಲಿ ತಾಯಿ, ಅನ್ನ, ನೀರಿಲ್ಲದೇ ನರಳಾಡಿದ್ದಾಳೆ.

Loading...

ಇದನ್ನೂ ಓದಿ: 5 ತಿಂಗಳ ಹಿಂದಷ್ಟೇ ಮದುವೆ; 2 ತಿಂಗಳ ಹಿಂದೆಯೇ ಕೊಲೆ; ಬೆಂಗಳೂರಿನ ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್‌

ಪ್ರಕರಣ ಬೆಳಕಿಗೆ ಬಂದಿದ್ಹೇಗೆ?

ದಂಪತಿ ನಡುವೆ ಆಗಾಗ ಜಗಳವಾಗುತ್ತಿದ್ದನ್ನು ಅಕ್ಕ ಪಕ್ಕದ ಮನೆಯವರು ಅಪಾರ್ಟ್ಮೆಂಟ್ ಮಾಲೀಕನಿಗೆ ದೂರು ನೀಡಿದ್ದರು. ಅದರಂತೆ ಮಾಲೀಕ ಸಹ ಬಂದು ಶಾಂತಿಯುತವಾಗಿರಿ ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ವಾರ್ನ್ ಮಾಡಿದ್ದ. ಆದರೂ ನವೆಂಬರ್ 16ರ ರಾತ್ರಿ ಮನೆಯಲ್ಲಿ ಮತ್ತೆ ಜೋರಾಗಿ ಜಗಳ ಶುರುವಾಗಿದೆ. ಸ್ವಲ್ಪ ಹೊತ್ತಿನ ನಂತರ ಗಲಾಟೆ ತಣ್ಣಗಾಗಿದ್ದರಿಂದ, ಮಾಮೂಲಿ ಜಗಳವಿರಬೇಕು ಅಂತ ನೆರೆಹೊರೆಯವರು ಮತ್ತು ಮಾಲೀಕರು ಸುಮ್ಮನಾಗಿದ್ದರು. ಆದರೆ ಆ ರಾತ್ರಿ ಸುದೀಪ್ , ಮಗನನ್ನು ಕೊಂದು ಪತ್ನಿ ಮೇಲೆ ಹಲ್ಲೆ ಮಾಡಿ ಡೋರ್ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ.

ಮೂರು ದಿನಗಳಾದರೂ ಸೀಮಾ ಆಗಲಿ, ಮಗನಾಗಲಿ ಮನೆಯಿಂದ ಹೊರಗೆ ಬಾರದಿದ್ದನ್ನು ಕಂಡು ಅನುಮಾನಗೊಂಡ ಪಕ್ಕದ ಮನೆಯವರು, ಮಾಲೀಕನಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಕರೆಸಿ ಬೀಗ ತೆಗೆಸಿದಾಗ, ರೂಂ ಒಳಗಿನಿಂದ ಸೀಮಾ ದಾಸ್ ಕೂಗುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಹಾಲ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಬಾತ್‌ರೂಂನಲ್ಲಿ ಮಗ ಸೋಹಮ್ ಮೃತದೇಹ ಸಿಕ್ಕಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸುದೀಪ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us