ಪ್ರಾಣಕ್ಕೆ ಕುತ್ತು ತಂದ ರೀಲ್ಸ್ : ವಿಡಿಯೋ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ತೆ
ರೀಲ್ಸ್ ಹುಚ್ಚಿಗೆ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಂತೆ ಮಾರತಹಳ್ಳಿಯ ಪಣತ್ತೂರು ಕೆರೆ (Panathur Lake) ಯಲ್ಲಿ ಇಂದು (ಭಾನುವಾರ) ಸಂಜೆ 4.20 ರ ಸುಮಾರಿಗೆ ರೀಲ್ಸ್ ಮಾಡಲು ಕೆರೆಗೆ ಈಜಲು ಹಾರಿದ ಯುವಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದೌಡಾಯಿಸಿದ್ದಾರೆ.
ಬೆಂಗಳೂರು, ಸೆ.22: ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ತೆಯಾದ ಘಟನೆ ನಗರದ ಮಾರತಹಳ್ಳಿಯ ಪಣತ್ತೂರು ಕೆರೆ(Panathur Lake)ಯಲ್ಲಿಇಂದು(ಭಾನುವಾರ) ಸಂಜೆ 4.20 ರ ಸುಮಾರಿಗೆ ನಡೆದಿದೆ. ರೀಲ್ಸ್ ಮಾಡುವ ಸಲುವಾಗಿ ಮೂರು ಜನ ಸ್ನೇಹಿತರು ಕೆರೆಯ ಬಳಿ ಬಂದಿದ್ದು, ಒಬ್ಬನಿಗೆ ವಿಡಿಯೋ ಮಾಡಲು ಹೇಳಿ ಇಬ್ಬರು ಕೆರೆಗೆ ಹಾರಿದ್ದಾರೆ. ಈ ವೇಳೆ ಈಜಲು ಹೋದ ಇಬ್ಬರಲ್ಲಿ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದೌಡಾಯಿಸಿದ್ದಾರೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ಹಸು ಮೇಯಿಸಲು ಹೋಗಿದ್ದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿಖಿಲ್(25) ಮೃತ ವ್ಯಕ್ತಿ. ಕೆಲ ದಿನಗಳಿಂದ ಕಾರ್ಖಾನೆಯಲ್ಲಿ ಕೆಲಸ ಬಿಟ್ಟು ಮನೆಯಲ್ಲಿ ಹಸು ಮೇಯಿಸುತ್ತಿದ್ದ ನಿಖಿಲ್, ಸಾಲ ಮಾಡಿ ಬೈಕ್ ಖರೀದಿಸಿದ್ದ. ಕೆಲಸ ಬಿಟ್ಟಿದ್ದಕ್ಕೆ ಪೋಷಕರು ಬುದ್ಧಿವಾದ ಹೇಳಿದ್ದರು. ಇದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಎಂಥಾ ಅವಸ್ಥೆ ಮಾರ್ರೆ; ತೆರೆದ ಬಾವಿಯ ಅಂಚಲ್ಲಿ ಕುಳಿತು ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್ ಮಾಡಿದ ಮಹಿಳೆ
ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಇಬ್ಬರು ದುರ್ಮರಣ
ಚಿಕ್ಕಬಳ್ಳಾಪುರ: ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ನಡೆದಿದೆ. ಇನ್ನು ಐವರಿಗೆ ಗಂಭೀರ ಗಾಯವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಜೀಯಾ ಶಾಹಿನ್(50), ಮೆಹಮುದಿಲ್ (43) ಮೃತರು. ಮೂಲತಃ ಬಿಹಾರದವರಾದ ಇವರು ಕೋಲಾರದ ಮಸೀದಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Sun, 22 September 24