ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲವ್ ಜಿಹಾದ್ ಆರೋಪ; ಮದುವೆ ಹೆಸರಲ್ಲಿ ಮತಾಂತರ ಮಾಡಲು ಪ್ರಯತ್ನ, ದೂರು ದಾಖಲು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲವ್ ಜಿಹಾದ್ ಸದ್ದು ಮತ್ತೇ ಕೇಳಿ ಬಂದಿದೆ. ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಆಗುವ ಹೆಸರಿನಲ್ಲಿ ಮತಾಂತರ ಮಾಡಲು ಪ್ರಯತ್ನ ಪಟ್ಟಿರುವ ಆರೋಪದಡಿ ದೂರು ದಾಖಲಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ. ಯುವಕನ ಅಶ್ವಾಸನೆ ಮತ್ತು ಆಮಿಷದ ಬಗ್ಗೆ ಯುವತಿ ಹೇಳ್ತಿರೋದೇನೂ ಎನ್ನುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಆನೇಕಲ್, ಸೆ.21: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಲವ್ ಜಿಹಾದ್(Love Jihad)ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರು(Bengaluru) ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಲವ್ ಜಿಹಾದ್ಗಾಗಿ ತನ್ನನ್ನು ದೈಹಿಕ ಸಂಪರ್ಕಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಿಕಾರಿಪಾಳ್ಯದಲ್ಲಿ ವಾಸವಿದ್ದ ಕಾಶ್ಮೀರಿ ಮೊಜೀಫ್ ಅಶ್ರಫ್ ಬೇಗ್ಗೆ ಯುವತಿ ಪರಿಚಯವಾಗಿದ್ದು, ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿ ಪ್ರೇಮಾಂಕುರವಾಗಿದೆ. ಅನಂತರ ಮದುವೆ ವಿಚಾರ ಕೂಡ ಇಬ್ಬರಲ್ಲೂ ಪ್ರಸ್ತಾಪವಾಗಿದೆ. ಆಗ ಮದುವೆಯಾಗುವುದಾಗಿ ಯುವತಿಯನ್ನ ಆರೋಪಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ವಂಚನೆ ಎಸಗಿದ್ದಾನೆ
ಇನ್ನು ಯುವತಿಯನ್ನು ಪ್ರೀತಿಸಿದ್ದ ಅಸಾಮಿ ಯಾವುದೇ ಧಾರ್ಮಿಕ ಕಟ್ಟುಪಾಡುಗಳು ಇಲ್ಲದೆ ಕೋರ್ಟ್ನಲ್ಲಿ ಮದುವೆಯಾಗೋಣ ಎಂದು ಭರವಸೆಯನ್ನು ಕೂಡ ನೀಡಿದ್ದ. ಮದುವೆ ಹೆಸರಲ್ಲಿ ಯುವತಿಯ ಜೊತೆ ಎರಡು ಬಾರಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಕೂಡ ಬೆಳಸಿದ್ದನಂತೆ. ಅನಂತರ ಮದುವೆ ಹೆಸರಲ್ಲಿ ಬೇರೆ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನ ಕೂಡ ಮಾಡಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಯಾವಾಗ ಮತಾಂತರದ ವಿಚಾರ ಪ್ರಸ್ತಾಪ ಆಯಿತೋ, ತಕ್ಷಣ ಯುವತಿ ಇದಕ್ಕೆ ನಿರಾಕರಿಸಿದ್ದಾಳೆ. ಅಗ ಮೊಜೀಫ್ ಅಶ್ರಫ್ ಬೇಗ್ ಸಹೋದರ ಮೋರಿಫ್ ಅಶ್ರಫ್ ಯುವತಿಗೆ ಕರೆ ಮಾಡಿ ತನ್ನ ಸಹೋದರನನ್ನು ಬಿಡುವಂತೆ ಜೀವ ಬೆದರಿಕೆ ಹಾಕಿದ್ದಾನಂತೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಲವ್ ಜಿಹಾದ್, ಅತ್ಯಾಚಾರ; ಪರಿಶೀಲಿಸುತ್ತಿರುವ ಬೆಳ್ಳಂದೂರು ಪೊಲೀಸರು
ಈ ಬಗ್ಗೆ ಮೊದಲು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಹೆಬ್ಬಗೋಡಿ ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ. ಯುವತಿ ಹೇಳಿಕೆ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಐಪಿಸಿ ಸೆಕ್ಷನ್ 506, 34, 376,377, 420, 417 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ರಕ್ಷಣಾ ಕಾಯ್ದೆ 2022ರ ಅಡಿ ಎಫ್ಐಆರ್ ದಾಖಲು ಮಾಡಿದ್ದಾರೆ. ಆರೋಪಿ ಟೆಕ್ಕಿ ಪತ್ತೆಗೆ ಬಲೆ ಬೀಸಿದ ಪೊಲೀಸರು ಕಾಶ್ಮೀರಕ್ಕೆ ತೆರಳಿ ಹುಡುಕಾಟವನ್ನ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Thu, 21 September 23