ಅಂದು ಚಿನ್ನ, ಮುದ್ದು ಎಂದಿದ್ದ ಗಂಡ ನಿನ್ನೆ ಕೊಲ್ಲೋಕೆ ಹೋದ: ಮಂಜನ ಮತ್ತೊಂದು ಡ್ರಾಮಾ!
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದ ನಿವಾಸಿ ಗಂಡ ಮಂಜುನಾಥ್ ಮತ್ತು ಇಬ್ಬರು ಮಕ್ಕಳನ್ನ ಬಿಟ್ಟು ಲವರ್ ಸಂತು ಜೊತೆ ಹೋಗಿದ್ದ ಲೀಲಾ ಪ್ರಕರಣ ಬಾರಿ ಸದ್ದು ಮಾಡಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಸಂತು ಮತ್ತು ಲೀಲಾ ಮೇಲೆ ಹಲ್ಲೆ ಮಾಡಿ ಮಂಜು ಮತ್ತೊಂದು ಡ್ರಾಮಾ ಮಾಡಿದ್ದಾನೆ. ಅದು ಏನು ಅಂತ ಮುಂದೆ ಓದಿ.

ಆನೇಕಲ್, ಸೆಪ್ಟೆಂಬರ್ 26: ಅಂದು ನೀನೇ ನನ್ನ ಚಿನ್ನ, ಮುದ್ದು ಎಂದಿದ್ದ ಗಂಡ ಮಂಜ (husband) ಇದೀಗ ಉಲ್ಟಾ ಹೊಡೆದಿದ್ದಾನೆ. ನಿನ್ನ ಕತೆ ಮುಗಿಸುತ್ತೇನೆ ಅಂತ ಸಂತು ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜ, ಪತ್ನಿ ಲೀಲಾ ಮತ್ತು ಆಕೆಯ ಪ್ರಿಯಕರ ಸಂತು ಕಣ್ಣಿಗೆ ಕಾರದ ಪುಡಿ ಹಾಕಿ ಡೆಡ್ಲಿ ಅಟ್ಯಾಕ್ (Deadly Attack) ಮಾಡಿದ್ದಾನೆ. ಮಂಜನಿಂದ ಹಲ್ಲೆಗೊಳಾದ ಸಂತುಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ. ಅತ್ತ ಲೀಲಾ ಜಸ್ಟ್ ಮಿಸ್ ಆಗಿದ್ದಾರೆ.
ಸಂತು-ಲೀಲಾ ಮೇಲೆ ಡವ್ ಮಂಜ ಡೆಡ್ಲಿ ಅಟ್ಯಾಕ್
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದ ನಿವಾಸಿ ಗಂಡ ಮಂಜುನಾಥ್ ಮತ್ತು ಇಬ್ಬರು ಮಕ್ಕಳನ್ನ ಬಿಟ್ಟು ಲವರ್ ಸಂತು ಜೊತೆ ಹೋಗಿದ್ದ ಲೀಲಾ ಪ್ರಕರಣ ಬಾರಿ ಸದ್ದು ಮಾಡಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನೀನೇ ನನ್ನ ಚಿನ್ನ, ಮುದ್ದು ಬಂದುಬಿಡು ಅಂತ ಕಣ್ಣೀರಿಟ್ಟು ಮಂಜು ಗೋಳಾಡಿದ್ದರು. ಇದನ್ನ ನೋಡಿದ ಜನರು ಕೂಡ ಲೀಲಾ ಮಂಜುಗೆ ಈ ರೀತಿ ಮೋಸ ಮಾಡಬಾರದಿತ್ತು ಅಂತ ಮಾತನಾಡಿಕೊಂಡಿದ್ದರು.
ಇದನ್ನೂ ಓದಿ: ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋಗಿದ್ದ ಮೂರು ಮಕ್ಕಳ ತಾಯಿ ಪ್ರತ್ಯಕ್ಷ: ಗಂಡನ ಬಗ್ಗೆ ಹೇಳಿದ್ದಿಷ್ಟು
ಆದರೆ ಇದೀಗ ಮಂಜನಾ ಇನ್ನೊಂದು ಮುಖ ಅನಾವರಣವಾಗಿದೆ. ಕಳೆದ ರಾತ್ರಿ 8.15 ಸುಮಾರಿಗೆ ಕಂಠ ಪೂರ್ತಿ ಕುಡಿದು ಕಾರದ ಪುಡಿ, ಬಿಯರ್ ಬಾಟಲ್ ನೊಂದಿಗೆ ಸಂತು ಮನೆಯ ಕಡೆ ಕಾರಿನಲ್ಲಿ ಹೊರಟಿದ್ದ. ರಸ್ತೆಯಲ್ಲಿ ಮಂಜ ಹೋಗುತ್ತಿರುವುದನ್ನು ನೋಡಿದ ಸಂತು ಸೇಹಿತ ಫೋನ್ ಮಾಡಿ ವಿಷಯ ತಿಳಿಸಿದ್ದ. ಕೂಡಲೇ ಲೀಲಾಳಿಗೆ ಫೋನ್ ಮಾಡಿದ ಸಂತು ಬಾಗಿಲು ತೆಗೆಯದಂತೆ ಹೇಳಿದ್ದ.
ಡೆಡ್ಲಿ ಅಟ್ಯಾಕ್ ನಡೆಸಿ ಮಂಜು ಪರಾರಿ
ಮನೆಯ ಬಾಗಿಲಿನಲ್ಲಿ ಹೊಂಚು ಹಾಕಿ ಕುಳಿತಿದ್ದ ಮಂಜು, ಮನೆಯ ಬಾಗಿಲು ತೆರದು ಹೊರಬಂದ ಲೀಲಾ ಮೇಲೆ ಏಕಾಏಕಿ ಕಾರದ ಪುಡಿ ಹಾಕಿ, ಬಿಯರ್ ಬಾಟಲಿಯಿಂದ ಚುಚ್ಚಲು ಮುಂದಾಗಿದ್ದ. ಈ ವೇಳೆ ತಡೆಯಲು ಬಂದ ಸಂತು ಮೇಲೆ ಕೂಡ ಕಾರದ ಪುಡಿ ಹಾಕಿ ಅಟ್ಯಾಕ್ ನಡೆಸಿದ್ದಾನೆ. ಈ ವೇಳೆ ಲೀಲಾ ಅಪಾಯದಿಂದ ಜಸ್ಟ್ ಮಿಸ್ ಆದರೆ, ಸಂತು ಕೈಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡೆಡ್ಲಿ ಅಟ್ಯಾಕ್ ನಡೆಸಿದ್ದ ಮಂಜು ಅಲ್ಲಿಂದ ಎಸ್ಕೇಪ್ ಆಗಿದ್ದ. ಮಂಜುವಿನಿಂದ ಜೀವ ಭಯ ಇದ್ದು, ಕಾನೂನಿ ರೀತಿಯ ಕ್ರಮ ಜರುಗಿಸಬೇಕೆಂದು ಸಂತು-ಲೀಲಾ ಒತ್ತಾಯಿಸಿದ್ದಾರೆ.
ಈ ನಡುವೆ ಆರೋಪಿ ಮಂಜು ಹೊಸ ವರಸೆ ಶುರು ಮಾಡಿದ್ದಾನೆ. ಸಂತು ಲೀಲಾ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಮಂಜು ಹೊಸ ಕಥೆ ಹೇಳಿದ್ದಾನೆ. ರಾತ್ರಿ ಮಕ್ಕಳನ್ನ ನೋಡುವುದಕ್ಕೆ ಸಂತು ಮನೆ ಹತ್ತಿರ ಹೋಗಿದ್ದೆ. ಮನೆಯ ಬಾಗಿಲನ್ನ ತೆಗೆಯಲಿಲ್ಲ. ಮೂರು ದಿನದಿಂದ ಮಕ್ಕಳನ್ನ ನೋಡಿರಲಿಲ್ಲ ಎಂದಿದ್ದಾರೆ.
ನಾನು ಬಚಾವ್ ಆಗಿ ಬಂದಿರುವುದೇ ಹೆಚ್ಚು ಎಂದ ಮಂಜು
ಈ ವೇಳೆ ಐದಾರು ಜನರಿಂದ ನನ್ನ ಮೇಲೆ ಅಟ್ಯಾಕ್ ಆಯ್ತು. ನನಗೂ ಕೈ, ಹಣೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಸಂಜಯ್ ಗಾಂಧಿ ಆಸ್ಪತ್ರೆ ಬಳಿ ಇದ್ದೇನೆ. ನನ್ನ ಹೆಂಡತಿ ತಳ್ಳಿದಾಗ ತಲೆಗೆ ಗಾಯ ಆಗಿದೆ. ಅಲ್ಲಿಂದ ನಾನು ಬಚಾವ್ ಆಗಿ ಬಂದಿರುವುದೇ ಹೆಚ್ಚು. ನಿನ್ನೆ ರಾತ್ರಿ ನನ್ನನ್ನು ಸಾಯಿಸುವುದಕ್ಕೆ ಪ್ರಯತ್ನಿಸಿದರು. ನನ್ನ ಸಂಸಾರವನ್ನೇ ಸಂತು ಹಾಳು ಮಾಡಿಬಿಟ್ಟ. ನನ್ನ ಹೆಂಡತಿಗಾಗಿ ನಾನು ಹೋಗಿಲ್ಲ, ನನ್ನ ಮಕ್ಕಳಿಗಾಗಿ ಹೋಗಿದ್ದು, ಅವರು ಹೇಳ್ಳುತ್ತಿರುವುದು ಸುಳ್ಳು. ನನ್ನನ್ನ ಸಾಯಿಸುವುದಕ್ಕೆ ಹೆಂಡತಿ ಮತ್ತು ಸಂತು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಪ್ರತಿವಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಕೋಚ್ನ ಮತ್ತಷ್ಟು ಕಾಮ ಪುರಾಣ ಬಟಾಬಯಲು, ಸ್ಫೋಟಕ ಅಂಶ ಬಿಚ್ಚಿಟ್ಟ ಸಂತ್ರಸ್ತೆ
ಲೀಲಾ ಮತ್ತು ಸಂತು ಮೇಲೆ ಹಲ್ಲೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿದ್ದ ಆರೋಪಿ ಮಂಜು ನನ್ನು ಅರೆಸ್ಟ್ ಮಾಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



