AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಚಟುವಟಿಕೆಗಳ ತಾಣವಾದ ಜಾನ್ಸನ್ ಮಾರುಕಟ್ಟೆ: ಕಸ-ತ್ಯಾಜ್ಯಗಳ ಕೊಪ್ಪೆ, ಜನರ ಗೋಳು ಕೇಳೋರೇ ಇಲ್ಲ

ಶಾಂತಿನಗರ ವಿಧಾನಸಭಾ ಕ್ಷೇತ್ರದ ಹೊಸೂರು ಮುಖ್ಯರಸ್ತೆಯಲ್ಲಿ ಇರುವ ಜಾನ್ಸನ್ ಮಾರುಕಟ್ಟೆಯಲ್ಲಿ ಸರಿ ಸುಮಾರು 50 ಮಳಿಗೆಗಳಿಗೆ ಸ್ಥಳಾವಕಾಶ ಇದ್ದರೂ, ಸದ್ಯಕ್ಕೆ ಕಾರ್ಯಾಚರಣೆ ಮಾಡುತ್ತಿರುವುದು 20 ಮಳಿಗೆಗಳು ಮಾತ್ರ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ, ಸೊರಗುವ ಹಾಗೆ ಮಾಡಿರುವುದು ಪಾಲಿಕೆ ಅಧಿಕಾರಿಗಳು. ನಗರದ ಜನರ ಹಿತ ದೃಷ್ಟಿಯಿಂದ  ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿಗೆ ಪಾಲಿಕೆ ಗಮನಹರಿಸಬೇಕು.

ಅನೈತಿಕ ಚಟುವಟಿಕೆಗಳ ತಾಣವಾದ ಜಾನ್ಸನ್ ಮಾರುಕಟ್ಟೆ: ಕಸ-ತ್ಯಾಜ್ಯಗಳ ಕೊಪ್ಪೆ, ಜನರ ಗೋಳು ಕೇಳೋರೇ ಇಲ್ಲ
ಕಸದ ಗುಂಡಿಯಾಗಿರುವ ಜಾನ್ಸನ್ ಮಾರುಕಟ್ಟೆ
ಭಾವನಾ ಹೆಗಡೆ
|

Updated on:Sep 26, 2025 | 11:43 AM

Share

ಬೆಂಗಳೂರು, ಸೆಪ್ಟೆಂಬರ್26:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಪುರಾತನವಾದ ಸಾಕಷ್ಟು ಮಾರುಕಟ್ಟೆಗಳು ಇಂದಿಗೂ ಇವೆ. ಆದರೆ ಜನಸಾಮಾನ್ಯರು ವ್ಯವಹಾರ ಮಾಡಬಹುದಾದ ಸ್ಥಿತಿಯಲ್ಲಿ ಇಲ್ಲ. ಬೆಂಗಳೂರಿನ ಹೃದಯ ಭಾಗದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಸಾಕಷ್ಟು ಮಾರುಕಟ್ಟೆಗಳು ಇವೆ. ಆದರೆ ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ, ಸೊರಗುವ ಹಾಗೆ ಮಾಡಿರುವುದು ಪಾಲಿಕೆ ಅಧಿಕಾರಿಗಳು. ಉತ್ತಮ ವಾಣಿಜ್ಯ ಸಂಕೀರ್ಣ ಆಗುವ ಲಕ್ಷಣವಿದ್ದರೂ, ಪಾಲಿಕೆ ಅಧೀನದ ಮಾರುಕಟ್ಟೆಗಳು ನವೀಕರಣ ಕಾಣದೇ ಹದಗೆಟ್ಟು ಹೋಗುತ್ತಿವೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ಹೊಸೂರು ಮುಖ್ಯರಸ್ತೆಯಲ್ಲಿ ಇರುವ ಜಾನ್ಸನ್ ಮಾರುಕಟ್ಟೆ ಅದಕ್ಕೆ ಮತ್ತೊಂದು ನಿದರ್ಶನ ಎಂಬಂತಿದೆ.

ಕಸದ ಗುಂಡಿಯಂತಾದ ಮಾರುಕಟ್ಟೆ

ಈ ಮಾರುಕಟ್ಟೆಯಲ್ಲಿ ಸರಿ ಸುಮಾರು 50 ಮಳಿಗೆಗಳಿಗೆ ಸ್ಥಳಾವಕಾಶ ಇದ್ದರೂ, ಸದ್ಯಕ್ಕೆ ಕಾರ್ಯಾಚರಣೆ ಮಾಡುತ್ತಿರುವುದು 20 ಮಳಿಗೆಗಳು ಮಾತ್ರ. ಅದು ಮುಖ್ಯ ದ್ವಾರದ ಅಂಗಡಿಗಳಲ್ಲಿ ಮಾತ್ರ ಉತ್ತಮ ವ್ಯಾಪಾರ ವಹಿವಾಟು ಇದೆ. ಅದು ಬಿಟ್ಟರೆ ಮಾರುಕಟ್ಟೆಯ ಒಳಗೆ ಬರಲೂ ಗ್ರಾಹಕರು ಮನಸ್ಸು ಮಾಡುತ್ತಿಲ್ಲ. ಸರ್ಕಾರದ ಅನುದಾನಗಳು ನೀರಲ್ಲಿ ಹೋಮ ಮಾಡಿದಂತಾಗಿವೆ. ಮಾರುಕಟ್ಟೆ ಒಳಗೆ ಶುಚಿತ್ವವೇ ಕಣ್ಮರೆಯಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ನಾರುತ್ತಿದೆ. ಕಂಡ ಕಂಡಲ್ಲಿ ಗುಟ್ಕಾ, ಪಾನ್ ಉಗಿಯಲಾಗಿದೆ. ಮಾರುಕಟ್ಟೆ ಬಹುತೇಕ ಭಾಗ ಧೂಳು ಹಿಡಿದಿದೆ. ಧೂಮಪಾನ ಮಾಡುವವರು ಇಲ್ಲಿ ಅತಿಯಾಗಿದ್ದಾರೆ. ಹೀಗಾಗಿ ಇಲ್ಲಿ ಜನ ಓಡಾಡುವುದು ಕೂಡ ಕಷ್ಟವಾಗಿದೆ.

ಪಾಲಿಕೆಯ ನಿರ್ಲಕ್ಷ್ಯ

ಜನರ ಬಳಿ ನಾನಾ ನೆಪ ಹೇಳಿ ತೆರಿಗೆ ವಸೂಲಿ ಮಾಡುವ ಪಾಲಿಕೆ ತನಗೆ ಇರುವ ಆದಾಯದ ಮೂಲವನ್ನೇ ಸರಿ ಮಾಡಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಇದೇ ಒಳ್ಳೆಯ ಉದಾಹರಣೆ. ರಿಚ್ಮಂಡ್ ಟೌನ್, ಶಾಂತಿನಗರ, ಎಂಜಿ ರಸ್ತೆಗೆ ಸಮೀಪದಲ್ಲೇ ಇರುವ ಈ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿ ಮಾಡುವಲ್ಲಿ BBMP ಮತ್ತು ಸರ್ಕಾರ ಗಮನವಹಿಸಬೇಕಿದೆ. ಗ್ರಾಹಕರು, ವ್ಯಾಪಾರಿಗಳು ಮಾತ್ರವಲ್ಲದೆ ಪಾಲಿಕೆಗೂ ಒಳ್ಳೆಯ ಲಾಭವಾಗಲಿದೆ. ನಗರದ ಜನರ ಹಿತ ದೃಷ್ಟಿಯಿಂದ  ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ಐತಿಹಾಸಿಕ ಹಿನ್ನೆಲೆಯುಳ್ಳ ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿಗೆ ಪಾಲಿಕೆ ಗಮನಹರಿಸಬೇಕು.

ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Fri, 26 September 25

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್