AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಚಿಕನ್-ಮಟನ್​ಗೆ ಫುಲ್ ಡಿಮ್ಯಾಂಡ್; ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆ

ಒಂದು ತಿಂಗಳ ಶ್ರಾವಣ ಮಾಸ ಮುಗಿಸಿ‌ ಅದ್ದೂರಿಯಿಂದ ಗಣೇಶ ಚತುರ್ಥಿಯನ್ನ ಆಚಾರಿಸಿ, ಸಿಲಿಕಾನ್ ಮಂದಿ ವರ್ಷದ ತೊಡಕನ್ನ ಅದ್ದೂರಿಯಿಂದ ಬರಮಾಡಿಕೊಂಡಿದ್ದಾರೆ.‌ ಹೀಗಾಗಿ ಚಿಕನ್ ಹಾಗೂ ಮಟನ್ ಬೆಲೆ‌ ದಿಡೀರನೆ ಏರಿಕೆಯಾಗಿದೆ. ಕಳೆದ ವಾರ ಚಿಕನ್ ಬೆಲೆ 100 ರಿಂದ 150 ರ ಗಡಿಯಲ್ಲಿತ್ತು. ಈ ವಾರ 250 ರಿಂದ 260 ರುಪಾಯಿಗೆ ಚಿಕನ್ ಬೆಲೆ ಏರಿಕೆಯಾಗಿದ್ದು, ಮಟನ್‌ ಬೆಲೆಯು 800 ರಿಂದ 900 ರೂಗೆ ಏರಿಕೆಯಾಗಿದೆ.

ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಚಿಕನ್-ಮಟನ್​ಗೆ ಫುಲ್ ಡಿಮ್ಯಾಂಡ್; ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
Poornima Agali Nagaraj
| Updated By: ಆಯೇಷಾ ಬಾನು|

Updated on: Sep 17, 2024 | 7:04 AM

Share

ಬೆಂಗಳೂರು, ಸೆ.17: ಶ್ರಾವಣ ಮಾಸದ (Shravana Masam 2024) ಕಾರಣದಿಂದಾಗಿ ಒಂದೂವರೆ ತಿಂಗಳಿನಿಂದ ಚಿಕನ್ (Chicken) ಹಾಗೂ ಮಟನ್​ಗೆ (Mutton) ಬೇಡಿಕೆ ಫುಲ್ ಕಡಿಮೆಯಾಗಿ ಹೋಗಿತ್ತು. ಇದೇ ಕಾರಣದಿಂದಾಗಿ ಚಿಕನ್ ಬೆಲೆ‌ ಕೂಡ ಕಡಿಮೆಯಾಗಿತ್ತು. ಇದೀಗಾ ಗಣೇಶ ಚತುರ್ಥಿ (Ganesh Chaturthi) ಮುಗಿದಿದ್ದು, ಮಾಂಸಹಾರಕ್ಕೆ ಬೇಡಿಕೆ ಹೆಚ್ಚಾಗಿದೆ.‌ ಹೀಗಾಗಿ ಚಿಕನ್ ಹಾಗೂ ಮಟನ್ ಬೆಲೆ ಒಂದೇ ವಾರದಲ್ಲಿ ಏರಿಕೆಯಾಗಿದೆ.

ಶ್ರಾವಣಮಾಸ ಮುಗಿಯುತ್ತಿದ್ದಂತೆ ಮಾಂಸಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ.‌ ಹೀಗಾಗಿ ಮಾಂಸದ ದರ‌ ಏರಿಕೆಯಾಗಿದೆ. ಕಳೆದ ವಾರ ಚಿಕನ್ ಬೆಲೆ 100 ರಿಂದ 150 ರ ಗಡಿಯಲ್ಲಿತ್ತು. ಈ ವಾರ 250 ರಿಂದ 260 ರುಪಾಯಿಗೆ ಚಿಕನ್ ಬೆಲೆ ಏರಿಕೆಯಾಗಿದೆ. ಮಟನ್‌ ಬೆಲೆಯು 800 ರಿಂದ 900 ರೂಗೆ ಏರಿಕೆಯಾಗಿದ್ದು, ಮುಂದಿನ ತಿಂಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.‌ ಇನ್ನು, ಮುಂದಿನ ತಿಂಗಳು ಆಯುಧಪೂಜೆ ಇರುವ ಕಾರಣ‌ ಚಿಕನ್ ಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳ್ತಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ

ಇನ್ನು ಚಿಕನ್ ಬೆಲೆ ಎಷ್ಟೇ ದುಬಾರಿಯಾದ್ರು ಚಿಕನ್, ಮಟನ್ ತಿನ್ನಲೇ ಬೇಕು. ಹಬ್ಬ ಕಳೆದ ಮೇಲೆ ವರ್ಷದ ತೊಡಕು ಮಾಡ್ಲಿಲ್ಲ ಅಂದ್ರೆ ಆಗೋದೇ ಇಲ್ಲ.‌ ಶ್ರಾವಣ ಮಾಸದ ಕಾರಣ ಒಂದು ತಿಂಗಳು ಚಿಕನ್‌ ತಿಂದೆ ಇರ್ಲಿಲ್ಲ.‌ ಇದೀಗಾ ಹಬ್ಬ ಮುಗಿಸಿ ವರ್ಷತೊಡಕು ಮಾಡ್ತಿದ್ದೀವಿ ಅಂತ ಗ್ರಾಹಕರು ಹೇಳಿದರು.

ಒಟ್ನಲ್ಲಿ, ಶ್ರಾವಣ ಮಾಸದ ಹಬ್ಬದ ಕಾರಣ ನಾನ್ ವೆಜ್ ಡಿಮ್ಯಾಂಡ್ ಕಡಿಮೆಯಾಗಿತ್ತು.‌ ಇದೀಗಾ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಸಿಲಿಕಾನ್ ಮಂದಿ‌ ಅದ್ದೂರಿಯಿಂದ ವರ್ಷತೊಡಕು ಆಚಾರಿಸುತ್ತಿದ್ದಾರೆ. ಮಾಂಸ ಪ್ರಿಯರಿಗೆ ಮಾಂಸ ಬೆಲೆ ಏರಿಕೆ ಶಾಕ್ ತಂದಿದೆ. ಮಾಂಸ ಎಷ್ಟೇ ದುಬಾರಿಯಾದರೂ ನಾವು ವರ್ಷ ತೊಡಗು ಮಾಡಲೇ ಬೇಕೆಂದು ಮಾಂಸಪ್ರಿಯರು ಮಾಂಸದಂಗಡಿಗಳಿಗೆ ಲಗ್ಗೆ ಇಟ್ಟಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ