Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಟ್
ಬೆಂಗಳೂರಿನ ನಗರದ ಹಲವು ಬಡಾವಣೆಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಸಂಜೆವರೆಗೂ ವಿದ್ಯುತ್ ವ್ಯತ್ಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ್ಯಾವ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 30: ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ (KPTCL) ಇಂದು (ಆ.28) ತುರ್ತು ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ್ಯಾವ ಬಡವಾಣೆಗಳಲ್ಲಿ, ಎಷ್ಟರಿಂದ ಎಷ್ಟು ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಇಲ್ಲಿದೆ ಮಾಹಿತಿ.
HSR ಲೇಔಟ್ ಮತ್ತು ಕೋರಮಂಗಲ ವಿಭಾಗದ ಬೆಳ್ಳಂದೂರು, ರಾಝ್, ದೇವರಬೀಸನಹಳ್ಳಿ, ಕರಿಯಮ್ಮನಪಾಳ್ಯ, ಅಕ್ಮೆ ಪ್ರಾಜೆಕ್ಟ್ಸ್, ಅನುಪಮಾ, ಟೋಟಲ್ ಮಾಲ್, ಶೋಭಾ ಐರಿಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೋರಮಂಗಲದ ಗುಂಜೂರು ಪಾಳ್ಯದಲ್ಲಿ ಮಾತ್ರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ವಿದ್ಯುತ್ ಟವರ್ನಿಂದ ಬಿದ್ದು ಪ್ರಾಣಬಿಟ್ಟ ಸ್ನೇಹಿತನನ್ನು ಗುಟ್ಟಾಗಿ ಸುಟ್ಟು ಹಾಕಿದ್ದ ಇಬ್ಬರ ಬಂಧನ
ಉಳಿದಂತೆ ಬೆಸ್ಕಾಂ ವ್ಯಪ್ತಿಯ ರಾಮನಗರ, ದಾವಣಗೆರೆ ಜಿಲ್ಲೆಯ ಕೆಲವು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/pMf8qrljOB ಸಂಪರ್ಕಿಸಿ. pic.twitter.com/JaLK9HCfJh
— Namma BESCOM | ನಮ್ಮ ಬೆಸ್ಕಾಂ (@NammaBESCOM) August 29, 2024
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 am, Fri, 30 August 24