ವಾಹನ ಸವಾರರ ಗಮನಕ್ಕೆ: ಬೆಂಗಳೂರಲ್ಲಿ ನ.27 ರಂದು ನಡೆಯುತ್ತೆ ಸಾಲುಸಾಲು ಪ್ರತಿಭಟನೆ, ಹೋರಾಟಗಳು

ಬೆಂಗಳೂರಿನಲ್ಲಿ ನಾಳೆ(ನ.27) ಸಾಲು ಸಾಲು ಪ್ರತಿಭಟನೆ(Protest) ಹಾಗೂ ಹೋರಾಟಗಳು ಇರುವುದರಿಂದ ವಾಹನ ಸವಾರರು ರಸ್ತೆಗಿಳಿಯುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು. ಸಂಯುಕ್ತ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಗೆ ಮತ್ತು ರಾಜಭವನ ಚಲೋಗೆ ಕರೆ ನೀಡಲಾಗಿದೆ.

ವಾಹನ ಸವಾರರ ಗಮನಕ್ಕೆ: ಬೆಂಗಳೂರಲ್ಲಿ ನ.27 ರಂದು ನಡೆಯುತ್ತೆ ಸಾಲುಸಾಲು ಪ್ರತಿಭಟನೆ, ಹೋರಾಟಗಳು
ಬೆಂಗಳೂರು
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 26, 2023 | 7:29 PM

ಬೆಂಗಳೂರು, ನ.26: ಬೆಂಗಳೂರಿನಲ್ಲಿ ನಾಳೆ(ನ.27) ಸಾಲು ಸಾಲು ಪ್ರತಿಭಟನೆ(Protest) ಹಾಗೂ ಹೋರಾಟಗಳು ಇರುವುದರಿಂದ ವಾಹನ ಸವಾರರು ರಸ್ತೆಗಿಳಿಯುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು. ಸಂಯುಕ್ತ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಗೆ ಮತ್ತು ರಾಜಭವನ ಚಲೋಗೆ ಕರೆ ನೀಡಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಈ ಕೆಳಗಿನಂತಿದೆ.

ಬದಲಿ ಮಾರ್ಗ ಇಲ್ಲಿದೆ

ಎಸ್‌ಬಿಎಂ ಸರ್ಕಲ್‌ನಿಂದ ಫ್ರೀಡಂಪಾರ್ಕ್‌ ಮಾರ್ಗದಲ್ಲಿ ಹೋಗುವವರು, ಮಹಾರಾಣಿ ಕಾಲೇಜು ಅಂಡರ್‌ಪಾಸ್‌ ಮೂಲಕ ಸಂಚರಿಸಬೇಕು. ಫ್ರೀಡಂಪಾರ್ಕ್‌ನಿಂದ ಕನಕದಾಸ ವೃತ್ತದ ಕಡೆ ಹೋಗಲು ಅವಕಾಶವಿಲ್ಲ.

ಇನ್ನು ಕೋಡೆ ಜಂಕ್ಷನ್ ಕಡೆಯಿಂದ ಕೆ.ಆರ್.ಸರ್ಕಲ್‌ಗೆ ಹೋಗುವವರು, ಹಳೇ ಜೆಡಿಎಸ್ ಕಚೇರಿಯ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ.

ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್‌ ಜಂಕ್ಷನ್‌ ಕಡೆ ಹೋಗುವವರಿಗೆ ದ್ವಿಮುಖ ಸಂಚಾರಕ್ಕೆ ಸಂಚಾರಿ ಪೊಲೀಸರು ಅವಕಾಶ ನೀಡಲಾಗಿದೆ. ಇನ್ನು ಕೋಡೆ ಜಂಕ್ಷನ್, ಮಹಾರಾಣಿ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕಾಳಿದಾಸ, ಪ್ಯಾಲೆಸ್ ರಸ್ತೆ, ಕೆ.ಜಿ.ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Sun, 26 November 23