AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ‘ಪೋರ್ಷೆ’ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮಿಶ್ರಣ! ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿದ ಉದ್ಯಮಿಯ ವೀಡಿಯೋ ವೈರಲ್

ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ಕುರಿತು ಉದ್ಯಮಿ ಅಖಿಲ್ ಹೆಮಾದ್ರಿ ತಮ್ಮ ಐಷಾರಾಮಿ ಪೋರ್ಷೆ ಕಾರಿನ ಬಾನೆಟ್ ಬಳಸಿ ಸಿಮೆಂಟ್ ಮಿಶ್ರಣ ಮಾಡಿ ಗುಂಡಿಗಳನ್ನು ಮುಚ್ಚುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ನಾಗರಿಕ ಪಾಲ್ಗೊಳ್ಳುವಿಕೆಯ ಸಂದೇಶ ನೀಡಿದ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಸೃಜನಾತ್ಮಕ ಪ್ರತಿಭಟನೆಯೇ ಅಥವಾ ಪ್ರಚಾರದ ಗಿಮಿಕ್ಕೇ ಎಂಬ ಚರ್ಚೆ ಹುಟ್ಟುಹಾಕಿದೆ.

ಐಷಾರಾಮಿ 'ಪೋರ್ಷೆ' ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮಿಶ್ರಣ! ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿದ ಉದ್ಯಮಿಯ ವೀಡಿಯೋ ವೈರಲ್
ವೈರಲ್​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Apr 20, 2026 | 9:23 AM

Share

ಬೆಂಗಳೂರು, ಏ.20: ಬೆಂಗಳೂರಿನ ಗುಂಡಿಗಳ ಬಗ್ಗೆ ದಿನಕ್ಕೊಂದು ಪೋಸ್​​​​ಟ್​​ಗಳು ವೈರಲ್​ ಆಗುತ್ತ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತದೆ. ಇದೀಗ ಉದ್ಯಮಿಯೊಬ್ಬರು ತುಂಬಾ ವಿಭಿನ್ನವಾಗಿ ಬೆಂಗಳೂರಿನ ಗುಂಡಿಗಳ ಬಗ್ಗೆ ಅಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಅಖಿಲ್ ಹೇಮಾದ್ರಿ ಎಂಬುವವರು ತಮ್ಮ ಕೋಟಿ ಬೆಲೆಯ ಐಷಾರಾಮಿ ಪೋರ್ಷೆ (Porsche) ಕಾರನ್ನೇ ರಸ್ತೆ ದುರಸ್ತಿ ಕಾರ್ಯಕ್ಕೆ ಬಳಸಿ ಸುದ್ದಿಯಾಗಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೂಡ ಅಚ್ಚರಿಗೊಂಡಿದ್ದಾರೆ.

ಇನ್ನು ಈ ಬಗ್ಗೆ ವಿಡಿಯೋವನ್ನು ಇನ್ಸ್ಟಾಗ್ರಾಮ್​​​ನಲ್ಲಿ ಅವರು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವಿಡಿಯೋದಲ್ಲಿ ಅಖಿಲ್ ಅವರು ತಮ್ಮ ಐಷಾರಾಮಿ ಪೋರ್ಷೆ ಕಾರಿನಲ್ಲಿ ರಸ್ತೆ ಗುಂಡಿ ಇರುವ ಜಾಗಕ್ಕೆ ಬರುವುದನ್ನು ಇದರಲ್ಲಿ ಕಾಣಬಹುದು. ನಂತರ ಕಾರಿನಿಂದ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಹೊರತೆಗೆಯುತ್ತಾರೆ. ಇಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿ ವಿಚಾರವೆಂದರೆ, ಅವರು ಆ ಬೆಲೆಬಾಳುವ ಕಾರಿನ ಬಾನೆಟ್ (Bonnet) ಅನ್ನೇ ಸಿಮೆಂಟ್ ಮಿಶ್ರಣ ಮಾಡುವ ವಸ್ತುವಾಗಿ ಉಪಯೋಗಿಸಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಬಾನೆಟ್ ಮೇಲೆ ಸಿಮೆಂಟ್ ಮತ್ತು ನೀರನ್ನು ಬೆರೆಸಿ, ಹಾರೆ ಹಿಡಿದು ತಾವೇ ರಸ್ತೆಯ ಗುಂಡಿಯನ್ನು ಮುಚ್ಚಿದ್ದಾರೆ. ಈ ವೀಡಿಯೋದೊಂದಿಗೆ ಅಖಿಲ್ ಅವರು ಒಂದು ಮಹತ್ವದ ಸಂದೇಶವನ್ನೂ ಹಂಚಿಕೊಂಡಿದ್ದಾರೆ. “ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಕೇವಲ ಸರ್ಕಾರದ ಮೇಲೆ ಅವಲಂಬಿತರಾಗುವುದು ಸರಿಯಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ನಾಗರಿಕರೂ ಪಾಲ್ಗೊಳ್ಳಬೇಕು” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. “ಇದು ಕೇವಲ ರಸ್ತೆ ಗುಂಡಿ ಮುಚ್ಚುವ ಕೆಲಸವಲ್ಲ, ಬದಲಿಗೆ ಸರ್ಕಾರದ ವಿಳಂಬ ನೀತಿಯ ವಿರುದ್ಧದ ಸೃಜನಾತ್ಮಕ ಪ್ರತಿಭಟನೆ” ಎಂದು ಕೆಲವರು ಶ್ಲಾಘಿಸಿದ್ದಾರೆ. “ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲೆಸುವುದು ಕೇವಲ ಪ್ರಚಾರಕ್ಕಾಗಿ (Stunt) ಮಾಡಿದ ಕೆಲಸ” ಎಂದು ಹಲವರು ಟೀಕಿಸಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ