ಡೆಲಿವರಿ ಬಾಯ್​​ ಕೊಟ್ಟ ಪಂಚ್​​​ಗೆ ಗ್ರಾಹಕನ ಮೂಗಿನ ಮೂಳೆ ಮುರಿತ: ಆಗಿದ್ದೇನು?

ಬೆಂಗಳೂರಿನ ಕೋರಮಂಗಲದಲ್ಲಿ ಡೆಲಿವರಿ ಬಾಯ್ ಗ್ರಾಹಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಮಾರ್ಚ್​​ 7ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ಗ್ರಾಹಕನ ಮೂಗಿನ ಮೂಳೆ ಮುರಿದಿದೆ. ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಡೆಲಿವರಿ ಬಾಯ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಡೆಲಿವರಿ ಬಾಯ್​​ ಕೊಟ್ಟ ಪಂಚ್​​​ಗೆ ಗ್ರಾಹಕನ ಮೂಗಿನ ಮೂಳೆ ಮುರಿತ: ಆಗಿದ್ದೇನು?
ಹಲ್ಲೆಗೊಳಗಾದ ಗ್ರಾಹಕ
Image Credit source: tv9 kannada
Edited By:

Updated on: Mar 11, 2026 | 10:51 PM

ಬೆಂಗಳೂರು, ಮಾರ್ಚ್​ 11: ಇವಾಗೇನಿದ್ರೂ ಆನ್ ಲೈನ್ ಜಮಾನಾ. ಎಲ್ಲವೂ ಆನ್​ಲೈನ್​ನಲ್ಲೇ ಸಿಕ್ಕಿಬಿಡುತ್ತೆ. ಊಟ ತಿಂಡಿ, ದವಸ-ಧಾನ್ಯದಿಂದ ಹಿಡಿದು ಗೃಹಪಯೋಗಿ ವಸ್ತುಗಳು ಕೂಡ ದೊರಕಿಬಿಡುತ್ತೆ. ಇದೇ ರೀತಿ ಓರ್ವ ವ್ಯಕ್ತಿ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ತಿನ್ನುವುದಕ್ಕೆ ಅಂತಾ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ತಗೊಂಡು ಬಂದ ಡೆಲಿವರಿ ಬಾಯ್ (Delivery Boy) ಗ್ರಾಹಕನ ಮೂಗಿನ ಮೂಳೆಯನ್ನೇ ಮುರಿದ ಘಟನೆ ಕೋರಮಂಗಲ 8ನೇ ಬಾಕ್ಲ್​ನಲ್ಲಿ ನಡೆದಿದೆ.

ನಡೆದಿದ್ದೇನು?

ಮಾರ್ಚ್ 7ರ ಬೆಳಗಿನ ಜಾವ 2ಗಂಟೆಯ ಸಮಯ. ಕೋರಮಂಗಲ 8ನೇ ಬ್ಲಾಕ್​ ನಿವಾಸಿ ಪೌಲ್ ಎಂಬಾತ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ಸ್ನ್ಯಾಕ್ಸ್ ಬುಕ್ ಮಾಡಿದ್ದ. 2 ಗಂಟೆ 8 ನಿಮಿಷಕ್ಕೆ ಬಂದ ಡೆಲಿವರಿ ಬಾಯ್ ನೇರವಾಗಿ ನಾಲ್ಕನೇ ಫ್ಲೋರ್​​ಗೆ ಹೋಗಿದ್ದಾನೆ. ಅಲ್ಲಿಂದ ಕರೆ ಮಾಡ್ತಿದ್ದಂತೆ ಗ್ರಾಹಕ ಎರಡನೇ ಫ್ಲೋರ್​ಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲಿ ಬಂದ ಡೆಲಿವರಿ ಬಾಯ್ ಗ್ರಾಹಕನ ಜೊತೆಗೆ ಗಲಾಟೆ ಮಾಡಿದ್ದಾನೆ‌.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಡೆಲಿವರಿ ಬಾಯ್ ಮತ್ತು ಗ್ರಾಹಕನ ನಡುವೆ ಹೊಡೆದಾಟವೇ ನಡೆದು ಹೋಗಿದ್ದು, ಡೆಲಿವರಿ ಬಾಯ್ ಕೊಟ್ಟ ಪಂಚ್​ಗೆ ಗ್ರಾಹಕ ಪೌಲ್​​ನ ಮೂಗು ಹಾಗೂ ತುಟಿಗೆ ಗಂಭೀರ ಗಾಯವಾಗಿದೆ. ಎಕ್ಸ್ ರೇ ತೆಗೆಸಿ ನೋಡಿದಾಗ ಮೂಗಿನ ಮೂಳೆಯೇ ಮುರಿದಿರುವುದು ಗೊತ್ತಾಗಿದೆ. ಚಿಕಿತ್ಸೆಗೆ ಅಂತ ಪೌಲ್ ಹುಟ್ಟೂರು ಕೇರಳಗೆ ತೆರಳಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಏಜೆಂಟ್​ನನ್ನು ಅಪಹರಿಸಿ ಹತ್ಯೆ ಕೇಸ್​: ಅಪ್ರಾಪ್ತ ಸೇರಿ 8 ಆರೋಪಿಗಳ ಬಂಧನ

ಗಲಾಟೆ ಆಗಿದ್ದು ನಿಜ, ಆದರೆ ಗಲಾಟೆಗೆ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಡೆಲಿವರಿ ಬಾಯ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us