ಮಚ್ಚು ಹಿಡಿದು ಅಡುಗೆ ಭಟ್ಟನನ್ನ ಅಟ್ಟಾಡಿಸಿದ ಹೊಟೇಲ್ ಮ್ಯಾನೇಜರ್: ಆಗಿದ್ದೇನು?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2025 | 8:00 PM

ಆರ್‌ಟಿ ನಗರದ ಹೋಟೆಲ್‌ನಲ್ಲಿ ಅಡುಗೆ ಭಟ್ಟನ ಮೇಲೆ ಮ್ಯಾನೇಜರ್ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಮಚ್ಚು ಬಳಸಿ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಗಾಯಗೊಂಡ ಅಡುಗೆ ಭಟ್ಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಹಲ್ಲೆ ನಡೆಸಿದ ಮ್ಯಾನೇಜರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಚ್ಚು ಹಿಡಿದು ಅಡುಗೆ ಭಟ್ಟನನ್ನ ಅಟ್ಟಾಡಿಸಿದ ಹೊಟೇಲ್ ಮ್ಯಾನೇಜರ್: ಆಗಿದ್ದೇನು?
ಮಚ್ಚು ಹಿಡಿದು ಅಡುಗೆ ಭಟ್ಟನನ್ನ ಅಟ್ಟಾಡಿಸಿದ ಹೊಟೇಲ್ ಮ್ಯಾನೇಜರ್: ಆಗಿದ್ದೇನು?
Follow us on

ಬೆಂಗಳೂರು, ಮಾರ್ಚ್​ 06: ಹೋಟೆಲ್​​ನಲ್ಲಿ ಮಚ್ಚು ಹಿಡಿದು ಅಡಿಗೆ ಭಟ್ಟನನ್ನ ಮ್ಯಾನೇಜರ್ (manager)​ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ (Attack) ಮಾಡಿರುವಂತಹ ಘಟನೆ ಆರ್​​ಟಿ ನಗರದ 80 ಅಡಿ ರಸ್ತೆಯಲ್ಲಿನ ಹೋಟೆಲ್ ಒಂದರಲ್ಲಿ ನಡೆದಿದೆ. ಮಟನ್ ಕಡಿಯುವ ಮಚ್ಚಿನಿಂದ ಸಿಬ್ಬಂದಿ ಅಡುಗೆ ಭಟ್ಟನ ಗುರುಮೂರ್ತಿ ಮೇಲೆ ಮ್ಯಾನೇಜರ್ ಶಜಾದ್ ಅಲಿ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಸದ್ಯ ಘಟನೆ ಬಗ್ಗೆ ಪೊಲೀಸರು (police) ಮಾಹಿತಿ ಪಡೆದುಕೊಂಡಿದ್ದಾರೆ. ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರ್​​ಟಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಆರ್​ಟಿ ನಗರ ಪೊಲೀಸರು ಭೇಟಿ ನೀಡಿದ್ದಾರೆ. ಹೋಟೆಲ್ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದ್ದಾರೆ. ಮಧ್ಯಾಹ್ನ 1.30 ರ ನಡುವೆ ಘಟನೆ ನಡೆದ್ದು, ಈ ವೇಳೆ ಮಾಂಸ ಕತ್ತರಿಸುವ ಮಚ್ಚು ತಂದು ಹಲ್ಲೆ ಮಾಡಲಾಗಿದೆ. ಗಾಯಾಳು ಗುರುಮೂರ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ತಲೆಕೂದಲು ಜೋಪಾನ: ಬೆಂಗಳೂರಲ್ಲಿ ಅದನ್ನೂ ಬಿಡದೆ ಕದ್ದೊಯ್ದ ಕಳ್ಳರು

ಇದನ್ನೂ ಓದಿ
ತಲೆಕೂದಲು ಜೋಪಾನ: ಬೆಂಗಳೂರಲ್ಲಿ ಅದನ್ನೂ ಬಿಡದೆ ಕದ್ದೊಯ್ದ ಕಳ್ಳರು
ಯುವತಿ ಜತೆ ಲಿವ್ ಇನ್​ನಲ್ಲಿದ್ದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಚಿಕ್ಕಬಳ್ಳಾಪುರ, ಅಮಾನವೀಯ ಘಟನೆ: ತಾಯಿ ಅಂತ್ಯಕ್ರಿಯೆಗೆ ಹಣಕ್ಕೆ ಬೇಡಿಕೆ
ವೈಟ್​​ ಆ್ಯಂಡ್​ ಬ್ಲಾಕ್​ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: 3 ಬಂಧನ

ಸದ್ಯ ಹಲ್ಲೆ ಮಾಡಿದ ಶಜಾದ್ ಅಲಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಹೋಟೆಲ್​​ನಲ್ಲಿಯೂ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡು ಶಜಾದ್ ಗಲಾಟೆ ಕೆಲಸ ಕಳೆದುಕೊಂಡಿದ್ದ. ಸದ್ಯ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹೊಟೇಲ್ ಮಾಲೀಕ ಪುನೀತ್ ಹೇಳಿದ್ದಿಷ್ಟು 

ಎಂಸಿಬಿ ದೊನ್ನೆ ಬಿರಿಯಾನಿ ಹೊಟೇಲ್ ಮಾಲೀಕ ಪುನೀತ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಅಡುಗೆ ಭಟ್ಟರು ಹಾಗೂ ಮ್ಯಾ‌ನೇಜರ್ ನಡುವೆ ಗಲಾಟೆ ಆಗಿದೆ. ಪರ್ಸನಲ್ ವಿಚಾರಕ್ಕೆ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಕಿಚನ್‌ನಲ್ಲಿ ಇದ್ದ ಮಚ್ಚು ಚಾಕು ಹಿಡಿದುಕೊಂಡು ಇಬ್ಬರು ಹೊಡೆದಡಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರಿಗೆ ದೂರು‌ ನೀಡಿದ್ದಾರೆ, ನಾವು ಹೋಟೆಲ್ ಸಿಸಿಟಿವಿ ಕೊಟ್ಟಿದ್ದೇವೆ. ಈ ಹಿಂದೆಯೇ ಇಬ್ಬರ ನಡುವೆ ಗಲಾಟೆ ಆಗಿತ್ತು,‌ ಸಂಧಾನ ಮಾಡಿದ್ದೇವು. ಇಬ್ಬರ ಗಲಾಟೆಯಲ್ಲಿ ಮ್ಯಾನೇಜರ್​ಗೂ ಕೂಡ ಗಾಯವಾಗಿದೆ ಎಂದಿದ್ದಾರೆ.

ಸಿದ್ಧಾರ್ಥ ಕಾಲೇಜಿನ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ತುಮಕೂರಿನ ಸಿದ್ಧಾರ್ಥ ಕಾಲೇಜಿನ ಹಾಸ್ಟೆಲ್​ನಲ್ಲಿ ನಡೆದಿದೆ. ವೇಲ್​ನಿಂದ ನೇಣುಹಾಕಿಕೊಂಡು ದೀಪಿಕಾ(19) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಹೈಕೋರ್ಟ್ ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂ. ವಂಚನೆ: ಗರ್ಲ್ ಫ್ರೆಂಡ್​ಗೂ ಪಂಗನಾಮ ಹಾಕಿದ್ದ ಆರೋಪಿ ಅಂದರ್

ಮೃತ ದೀಪಿಕಾ ಶಿರಾ ತಾಲೂಕಿನ ಕುಂಟೆಗೌಡನಪಾಳ್ಯ ನಿವಾಸಿ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

ವರದಿ: ಪ್ರಜ್ವಲ್​​ ಕ್ರೈಂ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:00 pm, Thu, 6 March 25