Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Verdict: ಹಿಜಾಬ್ ಧರಿಸಿ ಪರೀಕ್ಷೆಗೆ ಅಥವಾ ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ: ಬಿಸಿ ನಾಗೇಶ್ ಸ್ಪಷ್ಟನೆ

ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಹಿಜಾಬ್ ದರಿಸಲು ಅವಕಾಶ ನೀಡಿ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಪರೀಕ್ಷೆಯಲ್ಲಿ ಆದರೂ ಹಿಜಾಬ್ ಧರಿಸಿ ಎಕ್ಸಾಂ ಬರೆಯಲು ಅವಕಾಶ ನೀಡಿ ಎಂದು ಕೇಳಿದ್ದರು. ಆದರೆ, ಅದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

Hijab Verdict: ಹಿಜಾಬ್ ಧರಿಸಿ ಪರೀಕ್ಷೆಗೆ ಅಥವಾ ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ: ಬಿಸಿ ನಾಗೇಶ್ ಸ್ಪಷ್ಟನೆ
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು
Follow us
TV9 Web
| Updated By: ganapathi bhat

Updated on:Mar 18, 2022 | 8:11 AM

ಬೆಂಗಳೂರು: ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಇಲಾಖೆ ಮತ್ತೆ ಸ್ಪಷ್ಟನೆ ನೀಡಿದ್ದು ಅದರಂತೆ ಸದ್ಯ ಹೈಕೋರ್ಟ್ ತೀರ್ಪಿನ ಅನುಸಾರ ಹಿಜಾಬ್ ಧರಿಸಿ ಶಾಲೆಗೆ ಹಾಕರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆಯೇ ಸುಪ್ರೀಂ ಕೋರ್ಟ್ ಮೊರೆ ಹೋದರೆ, ಅಲ್ಲಿಯ ತೀರ್ಪು ಬರುವವರೆಗೂ ಹಿಜಾಬ್ ದರಿಸಲು ಅವಕಾಶ ನೀಡಿ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಪರೀಕ್ಷೆಯಲ್ಲಿ ಆದರೂ ಹಿಜಾಬ್ ಧರಿಸಿ ಎಕ್ಸಾಂ ಬರೆಯಲು ಅವಕಾಶ ನೀಡಿ ಎಂದು ಕೇಳಿದ್ದರು. ಆದರೆ, ಅದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ತರಗತಿಯಲ್ಲಿ ಇನ್ನು ಹಿಜಾಬ್ ಧರಿಸಲು ಅವಕಾಶ ಇಲ್ಲ. ಹೈಕೋರ್ಟ್ ತೀರ್ಪು ನೀಡಿದೆ ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ್ತೆ ಅವಕಾಶ ಸಡಿಲಿಕೆ ಇರುವುದಿಲ್ಲ. ಇನ್ನು ಮುಂದೆ ಪರೀಕ್ಷೆಯ ವಿಚಾರದಲ್ಲಿ ವಿಶೇಷ ಅವಕಾಶವನ್ನು ನೀಡಲ್ಲ. ಇಷ್ಟು ದಿನ ಕೋರ್ಟ್ ತೀರ್ಪು ಬಂದಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಕೊಂಚ ಸಡಿಲಿಕೆ ನೀಡಿತ್ತು. ಇನ್ನುಮುಂದೆ ಮತ್ತೆ ಯಾವುದೇ ಕಾರಣಕ್ಕೂ ಹಿಜಾಬ್ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿರುವ ವಿದ್ಯಾರ್ಥಿಗಳಿಗೆ, ಸುಪ್ರೀಂ ಕೋರ್ಟ್ ಮೊರೆ ಹೋಗಿ, ಸುಪ್ರೀಂ ಕೋರ್ಟ್​ನಲ್ಲಿ ತೀರ್ಪು ಬರಲಿದೆ. ಅಲ್ಲಿಯವರೆಗೂ ಎಸ್ಎಸ್ಎಲ್​ಸಿ ಹಾಗೂ ಪಿಯುಸಿ ಎಕ್ಸಾಂಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದರೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠ ಮಾರ್ಚ್ 15 ರಂದು ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳಿತ್ತು. ರಾಜ್ಯವು ಶಾಲಾ ಸಮವಸ್ತ್ರ ಆರ್ಟಿಕಲ್ 25 ರ ಅಡಿಯಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗೆ ಸಮಂಜಸವಾದ ನಿರ್ಬಂಧವಾಗಿದೆ. ಆದ್ದರಿಂದ ಫೆಬ್ರವರಿ 5 ರಂದು ಕರ್ನಾಟಕ ಸರ್ಕಾರ ಹೊರಡಿಸಿದ ಸರ್ಕಾರಿ ಆದೇಶವು ಅವರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯವು ಹೇಳಿತ್ತು. ರಾಜ್ಯವು ಶಾಲಾ ಸಮವಸ್ತ್ರದ ಪ್ರಿಸ್ಕ್ರಿಪ್ಷನ್ ಆರ್ಟಿಕಲ್ 25 ರ ಅಡಿಯಲ್ಲಿ ವಿದ್ಯಾರ್ಥಿಗಳ ಹಕ್ಕುಗಳ ಸಮಂಜಸವಾದ ನಿರ್ಬಂಧವಾಗಿದೆ ಎಂದು ನ್ಯಾಯಾಲಯವು ಹೇಳಿತ್ತು.

ಹಿಜಾಬ್ (Hijab) ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ-ಕಾಲೇಜುಗಳಲ್ಲಿ ಹಿಜಾಬ್  ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಶೇಷ ರಜಾಕಾಲದ ಅರ್ಜಿಯನ್ನು(Special Leave Petition) ಸಲ್ಲಿಸಲಾಗಿದೆ. ನಿಬಾ ನಾಜ್ ಎಂಬ ಮುಸ್ಲಿಂ ವಿದ್ಯಾರ್ಥಿನಿ ಅಡ್ವೊಕೇಟ್ ಆನ್ ರೆಕಾರ್ಡ್ ಅನಸ್ ತನ್ವೀರ್ ಮೂಲಕ ವಿಶೇಷ ರಜಾಕಾಲದ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್​ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ಇದನ್ನೂ ಓದಿ: Hijab Verdict: ಹೈಕೋರ್ಟ್ ತೀರ್ಪು ನೀಡಿದ ಬಳಿಕ ವಿದ್ಯಾರ್ಥಿನಿಯರ ಹೇಳಿಕೆಗೆ ಧರ್ಮಗುರುಗಳಿಂದಲೇ ಆಕ್ಷೇಪ

Published On - 8:06 am, Fri, 18 March 22

ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಸರ್ಕಾರದ ಗ್ರೇಟರ್ ಬೆಂಗಳೂರು ತಯಾರಿ ಗೇಲಿ ಮಾಡಿದ ಮುನಿರತ್ನ
ಸರ್ಕಾರದ ಗ್ರೇಟರ್ ಬೆಂಗಳೂರು ತಯಾರಿ ಗೇಲಿ ಮಾಡಿದ ಮುನಿರತ್ನ