
ಬೆಂಗಳೂರು, ಅಕ್ಟೋಬರ್ 27: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಗಾಳಿಯ ಗುಣಮಟ್ಟವು ಸಾಧಾರಣದಿಂದ ‘ಮಧ್ಯಮ’ ಹಾಗೂ ಕೆಲವು ಕಡೆ ‘ಕಳಪೆ’ ಮಟ್ಟದಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ ಸರಾಸರಿ ಎಕ್ಯೂಐ 100 ರಿಂದ 120 ರ ಆಸುಪಾಸಿನಲ್ಲಿದ್ದು, ವಾಹನ ಸಂಚಾರ ಮತ್ತು ಧೂಳಿನ ಪ್ರಮಾಣ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಗಾಳಿಯ ಶುದ್ಧತೆ ಉತ್ತಮವಾಗಿದ್ದರೆ, ಪ್ರಮುಖ ಕೈಗಾರಿಕಾ ಹಾಗೂ ನಗರೀಕೃತ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
ಮೈಸೂರು ಮತ್ತು ಮಂಗಳೂರು: ಸಾಂಸ್ಕೃತಿಕ ನಗರಿ ಮೈಸೂರು (AQI 65-80) ಹಾಗೂ ಕರಾವಳಿ ನಗರಿ ಮಂಗಳೂರಿನಲ್ಲಿ (AQI 70-85) ಗಾಳಿಯ ಗುಣಮಟ್ಟ ‘ಉತ್ತಮ’ ಹಾಗೂ ‘ಸಾಧಾರಣ’ ಮಟ್ಟದಲ್ಲಿದೆ.
ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ: ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ AQI 90 ರಿಂದ 110ರವರೆಗೆ ದಾಖಲಾಗಿದೆ.
ಅಸ್ತಮಾ, ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಬೆಳಗಿನ ಜಾವ ಹಾಗೂ ಸಂಜೆ ವೇಳೆ ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡುವುದು ಒಳಿತು. ಕಳಪೆ ವಾಯು ಗುಣಮಟ್ಟವಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ