AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರಾಯಣಪುರ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಬೀದಿಗಿಳಿದ ರೈತರು: ಅನ್ನದಾತರ ಹೋರಾಟಕ್ಕೆ JDS ಶಾಸಕಿ ಕರೆಮ್ಮಾ ಸಾಥ್​

ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲೆಯ ಸಿರವಾರ ಕ್ರಾಸ್ ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು, ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಹೋರಾಟಕ್ಕೆ ಸಾಥ್ ನೀಡಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದಾರೆ. ನಮ್ಮ ರೈತರಿಗೆ ನೀರಿಲ್ಲದಿರುವಾಗ ತೆಲಂಗಾಣಕ್ಕೆ ನೀರು ಹರಿಸಲಾಗಿದೆ ಎಂದು ರೈತರು ಕೂಡ ಕೆರಳಿದ್ದು, ಸಚಿವರು ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ನಾರಾಯಣಪುರ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಬೀದಿಗಿಳಿದ ರೈತರು: ಅನ್ನದಾತರ ಹೋರಾಟಕ್ಕೆ JDS ಶಾಸಕಿ ಕರೆಮ್ಮಾ ಸಾಥ್​
ನೀರಿಗಾಗಿ ಹೋರಾಟ
ಭೀಮೇಶ್​​ ಪೂಜಾರ್
| Edited By: |

Updated on: Nov 17, 2026 | 7:55 PM

Share

ರಾಯಚೂರು, ನವೆಂಬರ್​​ 17: ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಗಡಿ ಜಿಲ್ಲೆ ರಾಯಚೂರಿನಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಈಗಾಗಲೇ ಒಂದು ಬೆಳೆ ಕಳೆದುಕೊಂಡಿರುವ ಅನ್ನದಾತರು, ಮತ್ತೊಂದು ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ನಾರಾಯಣಪುರ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುಲಾಗುತ್ತೆ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ ಕಾಲುವೆಯಲ್ಲಿ ನೀರು ಹರಿಯದ ಕಾರಣ ಬೆಳೆ ಒಣಗುತ್ತಿದೆ. ಹೀಗಾಗಿ ರೈತರ ಆಕ್ರೋಶದ ಕಟ್ಟೆಯೊಡೆದಿದೆ.

ಶಾಸಕರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ರೈತರ ಈ ಹೋರಾಟಕ್ಕೆ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಅವರು ಕೂಡ ಸಾಥ್​​ ಕೊಟ್ಟಿರುವ ಕಾರಣ ಅನ್ನದಾತರ ಪ್ರತಿಭಟನೆಗೆ ಮತ್ತಷ್ಟು ಬಲ ಬಂದಿದೆ. ಸಿರವಾರ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಶಾಸಕರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ರೈತರು ಭಾಗಿಯಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಕೂಡಲೇ ನೀರು ಹರಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ಸರ್ಕಾರಕ್ಕೆ ಶಾಸಕರಿಂದಲೂ ರವಾನೆಯಾಗಿದೆ.

ಇದನ್ನೂ ಓದಿ: ಊಟ ಇದೆ, ಕುಡಿಯೋಕೆ ನೀರಿಲ್ಲ! ಪಂಚಾಯಿತಿಯಲ್ಲೇ ಊಟ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು

ಒತ್ತಡಕ್ಕೆ ಅಧಿಕಾರಿಗಳು ಮಣಿದಿರುವ ಆರೋಪ

ಕಾಲುವೆಗಗಳಿಗೆ ತಕ್ಷಣ ನೀರು ಹರಿಯದಿದ್ದಲ್ಲಿ ಮೆಣಸಿನಕಾಯಿ ಹಾಗೂ ಭತ್ತದ ಬೆಳೆ ಸಂಪೂರ್ಣ ಒಣಗಿ ರೈತರು ಬೀದಿಗೆ ಬೀಳುವ ಆತಂಕ ಎದುರಾಗಿದೆ. ಮಾನವೀಯತೆ ದೃಷ್ಟಿಯಿಂದ ಹೊರರಾಜ್ಯಕ್ಕೆ ನೀರು ನೀಡುತ್ತಿದ್ದೇವೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಹಾಗಾದರೆ ನಮ್ಮ ರಾಜ್ಯದ ರೈತರ ಮೇಲಿನ ಮಾನವೀಯತೆ ಎಲ್ಲಿ ಹೋಯ್ತು ಎಂದು ಶಾಸಕಿ ಕರೆಮ್ಮಾ ನಾಯಕ್ ಪ್ರಶ್ನಿಸಿದ್ದು, ಮೊದಲು ನಮ್ಮ ರೈತರ ಬೆಳೆ ಉಳಿಸಿ ಎಂದು ಆಗ್ರಹಿಸಿದ್ದಾರೆ. ನಮ್ಮ ರೈತರಿಗೆ ನೀರಿಲ್ಲದಿರುವಾಗ ತೆಲಂಗಾಣಕ್ಕೆ ನೀರು ಹರಿಸಲಾಗಿದೆ ಎಂದು ರೈತರು ಕೂಡ ಕೆರಳಿದ್ದು, ಸಚಿವರು ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?