AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರೇ ಹುಷಾರ್​​!: ನಗರದಲ್ಲಿ ಶುರುವಾಗಿದೆ ವಾಂತಿ ಗ್ಯಾಂಗ್​​, ಮುಸುಕುಧಾರಿ ಕಳ್ಳರ ಹಾವಳಿ

ಬೆಂಗಳೂರಿನಲ್ಲಿ ಬಸ್ ಪ್ರಯಾಣಿಕರನ್ನು ಯಾಮಾರಿಸಿ ಕಳ್ಳತನ ಮಾಡುವ 'ವಾಂತಿ ಗ್ಯಾಂಗ್' ಹಾಗೂ ಲೇಔಟ್‌ಗಳಲ್ಲಿ ಬೆಡ್‌ಶೀಟ್ ಹೊದ್ದು ದರೋಡೆಗೆ ಸಂಚು ರೂಪಿಸುವ ಮುಸುಕುಧಾರಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಏನಿದು ವಾಂತಿ ಗ್ಯಾಂಗ್​​? ಮುಸುಕುಧಾರಿಗಳ ಕಳ್ಳತನದ ಸಂಚು ಹೇಗಿರುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರಿಗರೇ ಹುಷಾರ್​​!: ನಗರದಲ್ಲಿ ಶುರುವಾಗಿದೆ ವಾಂತಿ ಗ್ಯಾಂಗ್​​, ಮುಸುಕುಧಾರಿ ಕಳ್ಳರ ಹಾವಳಿ
ಬಂಧಿತ ಆರೋಪಿಗಳುImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Jul 24, 2026 | 4:04 PM

Share

ಮುಖ್ಯಾಂಶಗಳು

  • ಬೆಂಗಳೂರಿನ ನಿವಾಸಿಗಳೇ ಹುಷಾರ್​​... ಹುಷಾರ್​​!
  • ನಗರದಲ್ಲಿ ಶುರುವಾಗಿದೆ ವಾಂತಿ ಗ್ಯಾಂಗ್​​ನ ಹಾವಳಿ
  • ಮನೆಗಳನ್ನೇ ಟಾರ್ಗೆಟ್​​ ಮಾಡ್ತಿರುವ ಮುಸುಕುಧಾರಿಗಳು

ಬೆಂಗಳೂರು, ಜುಲೈ 24: ಸಿಲಿಕಾನ್​​​ ಸಿಟಿ ಬೆಂಗಳೂರಲ್ಲಿ (Bengaluru) ಜನರನ್ನು ಯಾಮಾರಿಸಿ ಕಳ್ಳತನ ಮಾಡೋಕೆ ಖದೀಮರು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದು, ಬಸ್​​ ಪ್ರಯಾಣಿಕರನ್ನು ಗುರಿಯಾಗಿಸಿ ಕೈಚಳಕ ತೋರುವ ಕೇಸ್​​ಗಳು ಹೆಚ್ಚಿವೆ. ಅದರ ಜೊತೆ ಜೊತೆಗೆ ಮನೆ ಕಳ್ಳತನ ಪ್ರಕರಣಗಳೂ ವರದಿಯಾಗುತ್ತಿವೆ. ವಾಂತಿ ಗ್ಯಾಂಗ್​​, ಮುಸುಕುಧಾರಿ ಕಳ್ಳರ ಹಾವಳಿಗೆ ಸಾರ್ವಜನಿಕರು ಹೈರಾಣಾಗಿದ್ದು, ಈ ಬಗ್ಗೆ ಅದಾಗಲೇ ಅಲರ್ಟ್​​ ಆಗಿರುವ ಪೊಲೀಸರು ಕೆಲ ಆರೋಪಿಗಳನ್ನೂ ಬಂಧಿಸಿದ್ದಾರೆ.

ಏನಿದು ವಾಂತಿ ಗ್ಯಾಂಗ್​​?

ಬಿಎಂಟಿಸಿ ಬಸ್​​ ಪ್ರಯಾಣಿಕರನ್ನೇ ಟಾರ್ಗೆಟ್​​ ಮಾಡಿ ಕಳ್ಳತನ ನಡೆಸುವ ಗ್ಯಾಂಗ್​​ ಇದಾಗಿದೆ. ವಿಂಡೋ ಸೀಟ್ ಪ್ರಯಾಣಿಕರನ್ನ ಟಾರ್ಗೆಟ್ ಮಾಡುವ ಆರೋಪಿಗಳು, ವಾಂತಿ ಬರುತ್ತಿದ್ದೆ ಸೀಟ್ ಬಿಡಿ ಎಂದು ಮನವಿ ಮಾಡುತ್ತಾರೆ. ಸೀಟ್​​ ಬಿಟ್ಟುಕೊಡುವ ವೇಳೆ ತಂಡದ ಸದಸ್ಯರು ರಶ್​​ ಇರುವಂತೆ ವರ್ತಿಸಿ ಮೈ ಮೇಲೆ ಬೀಳುತ್ತಾರೆ. ಈ ವೇಳೆ ಪ್ರಯಾಣಿಕರ ಜೇಬಿನಲ್ಲಿರುವ ಪರ್ಸ್​​, ಮೊಬೈಲ್​​ ಫೋನ್​​ಗಳನ್ನು ಎಗರಿಸಲಾಗುತ್ತೆ. ಬಳಿಕ ಅನುಮಾನವೇ ಬಾರದಂತೆ ಆರೋಪಿಗಳು ಅಲ್ಲಿ ಎಸ್ಕೇಪ್​​ ಆಗುತ್ತಾರೆ.

ಇದನ್ನೂ ಓದಿ: ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ರೂಲ್ಸ್​​, ಶುಲ್ಕವೂ ನಿಗದಿ

ಇನ್ನು ಈ ವಾಂತಿ ಗ್ಯಾಂಗ್ ಕೈಚಳಕದ ಬಗ್ಗೆ ನಗರದ ಕೇಂದ್ರ ವಿಭಾಗ ಸೇರಿ ಎರಡು ವಿಭಾಗದಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣಗಳ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಪಾಶಾ ಮತ್ತು ಅನ್ವರ್ ಪಾಶಾ ಬಂಧಿತರಾಗಿದ್ದಾರೆ. ಆರೋಪಿಗಳ ವಿರುದ್ಧ ನಗರದ ಹಲವು ಕಡೆ ಇಂತಹ ದೂರುಗಳು ದಾಖಲಾಗಿರೋದು ಗೊತ್ತಾಗಿದ್ದು, ಸದ್ಯ ಎಲ್ಲ ಪ್ರಕರಣಗಳನ್ನ ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಎಸ್ಕೇಪ್​​ ಆಗಿರುವ ಉಳಿದ ಮೂವರು ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಮುಸುಕುಧಾರಿ ಕಳ್ಳರ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮತ್ತೊಂದೆಡೆ ಮೈ ಮೇಲೆ ಬೆಡ್‌ಶೀಟ್ ಮತ್ತು ಟವೆಲ್ ಹೊದ್ದು ಬಂದ ಖದೀಮರು ಬೇಗೂರು ಕೊಪ್ಪ, ಮೈಲಸಂದ್ರದಲ್ಲಿ ಮಧ್ಯರಾತ್ರಿ ಕೈಚಳಕ ತೋರಿರುವ ಘಟನೆ ನಡೆದಿದೆ. ‘ಗ್ರೀನ್ ವ್ಯಾಲಿ ಲೇಔಟ್’ ಮನೆಗಳನ್ನ ಟಾರ್ಗೆಟ್ ಮಾಡಿದ್ದ ತಂಡದ ಒಟ್ಟು 8 ಮಂದಿಯ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:32 pm, Fri, 24 July 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ
ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ
ಲಂಚ ಪಡೆದು ಲಾಕ್ ಆದ ತಹಶೀಲ್ದಾರ್: ಮತ್ತಷ್ಟು ಅಕ್ರಮಗಳು ಬಯಲಿಗೆ
ಲಂಚ ಪಡೆದು ಲಾಕ್ ಆದ ತಹಶೀಲ್ದಾರ್: ಮತ್ತಷ್ಟು ಅಕ್ರಮಗಳು ಬಯಲಿಗೆ