AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸದಾಕೆ ಜತೆ ಚಕ್ಕಂದ ಆಡ್ತಾನೆಂದು ಪತಿಗೆ ಚಟ್ಟ ಕಟ್ಟಿದ ಪತ್ನಿ: ಶವಕ್ಕೆ ಸ್ನಾನ ಮಾಡಿ ಮಲಗಿಸಿ ನಾಟಕ!

ಗಂಡ ಮದ್ಯಪಾನ ಮಾಡಿ ಬಂದು ಬಾತ್​ರೂಮ್​ನಲ್ಲಿ ಬಿದ್ದು ಗಾಯಗೊಂಡಿದ್ದ, ಸ್ನಾನ ಮಾಡಿ ಮಲಗಿಸಿದ್ದೆ, ಅಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಮಹಿಳೆಯ ಮಾತು ಕೇಳಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆಪಾಳ್ಯ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವರದಿ ನೋಡಿದಾಗ ಆಘಾತ ಎದುರಾಗಿತ್ತು. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಹಿರಂಗವಾಗಿದೆ. ಮನೆ ಕೆಲಸದಾಕೆ ಜತೆ ಸಲುಗೆಯಿಂದ ಇದ್ದುದಕ್ಕೆ ಪತ್ನಿಯೇ ಪತಿಯ ಕೊಲೆ ಮಾಡಿದ್ದು ಗೊತ್ತಾಗಿದೆ.

ಕೆಲಸದಾಕೆ ಜತೆ ಚಕ್ಕಂದ ಆಡ್ತಾನೆಂದು ಪತಿಗೆ ಚಟ್ಟ ಕಟ್ಟಿದ ಪತ್ನಿ: ಶವಕ್ಕೆ ಸ್ನಾನ ಮಾಡಿ ಮಲಗಿಸಿ ನಾಟಕ!
ಆರೋಪಿ ಶ್ರುತಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 04, 2025 | 2:30 PM

Share

ಬೆಂಗಳೂರು, ಜುಲೈ 4: ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿಯನ್ನು ಆತನ ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಸುದ್ದಗುಂಟೆಪಾಳ್ಯದಲ್ಲಿ (Suddaguntepalya) ನಡೆದಿದೆ. ಪತಿಯ ಮುಖಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ ನಂತರ ಶವಕ್ಕೆ ಸ್ನಾನ ಮಾಡಿಸಿ ಮಲಗಿಸಿದ್ದಲ್ಲದೆ, ಬಾತ್​ರೂಮ್​ನಲ್ಲಿ ಜಾರಿ ಬಿದ್ದು ಏಟಾಗಿ ಮೃತಪಟ್ಟಿದ್ದಾರೆಂದು ಕಥೆ ಕಟ್ಟಿದ್ದ ಶ್ರುತಿ ಎಂಬಾಕೆಯನ್ನು ಇದೀಗ ಪೊಲೀಸರು (Bengaluru Police) ಬಾಯ್ಬಿಡಿಸಿದ್ದಾರೆ. ಅಲ್ಲದೆ, ಕೊಲೆ ರಹಸ್ಯವನ್ನೂ ಬಯಲಿಗೆಳೆದಿದ್ದಾರೆ. ಮೃತ ವ್ಯಕ್ತಿಯನ್ನು ಭಾಸ್ಕರ್ (41) ಎಂದು ಗುರುತಿಸಲಾಗಿದೆ.

ಭಾಸ್ಕರ್ ಮನೆ ಕೆಲಸದಾಕೆ ಜತೆ ಸದಾ ಸಲುಗೆಯಿಂದ ಇರುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸಾಕಷ್ಟು ಬಾರಿ ಗಂಡ ಹೆಂಡತಿ ನಡುವೆ ಜಗಳವೂ ನಡೆದಿತ್ತು. ಎರಡು ದಿನಗಳ ಹಿಂದೆ ರಾತ್ರಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿತ್ತು. ಗಲಾಟೆ ವೇಳೆ ಶ್ರುತಿ ಗಂಡನ ಮುಖಕ್ಕೆ ಬಲವಾಗಿ ಹೊಡೆದಿದ್ದರು. ಪರಿಣಾಮವಾಗಿ ಭಾಸ್ಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಪೊಲೀಸರ ಬಳಿ ಕಥೆ ಕಟ್ಟಿದ್ದ ಶ್ರುತಿ

ಪತಿಯನ್ನು ಕೊಲೆ ಮಾಡಿದ ನಂತರ ಪೊಲೀಸರ ಮುಂದೆ ಶ್ರುತಿ ಕಥೆ ಕಟ್ಟಿದ್ದರು. ಗಂಡ ಕುಡಿದು ಬಂದು ಬಾತ್ ರೂಮ್​​ನಲ್ಲಿ ಬಿದ್ದು ಗಾಯಗೊಂಡಿದ್ದರು. ಹೀಗಾಗಿ ಅವರಿಗೆ ಸ್ನಾನ ಮಾಡಿಸಿ ಮಲಗಿಸಿದ್ದೆ. ಅವರು ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಹಿಗಾಗಿ ಸುದ್ದಗುಂಟೆ ಪಾಳ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ
Image
ಮುಚ್ಚುವ ಆತಂಕದಲ್ಲಿ ಜೀನ್ಸ್ ಉದ್ಯಮ: ಬೀದಿಗೆ ಬೀಳಲಿದೆ 2 ಲಕ್ಷ ಜನರ ಬದುಕು
Image
ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಟ್ವಿಸ್ಟ್
Image
ಮತ್ತೊಂದು ಭ್ರಷ್ಟಾಚಾರ ಆರೋಪ: ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ!
Image
ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್‌ ಕೇಸ್​: ಸ್ಪೋಟಕ ಮಾಹಿತಿ ಬಹಿರಂಗ

ಅಸಲಿ ಕಾರಣ ಬಿಚ್ಚಟ್ಟ ಮರಣೋತ್ತರ ಪರೀಕ್ಷೆ

ಅಸಹಜ ಸಾವು ಪ್ರಕರಣದ ಕಾರಣ ಭಾಸ್ಕರ್ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮುಖ ಮತ್ತು ದೇಹಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಶ್ರುತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅಸಲಿ ಸತ್ಯ ಬಹಿರಂಗವಾಗಿದೆ.

ಇದನ್ನೂ ಓದಿ: ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಪತಿಯನ್ನು ಕೊಲೆ ಮಾಡಿದ ಬಳಿಕ ಕಥೆ ಕಟ್ಟುವುದಕ್ಕೆಂದೇ ಮೃತದೇಹವನ್ನು ಸ್ನಾನ ಮಾಡಿಸಿ ಮಲಗಿಸಿದ್ದ ವಿಚಾರವೂ ಬಹಿರಂಗವಾಗಿದೆ. ಇದೀಗ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ