AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ; RDX ಮೂಲಕ ಸ್ಫೋಟಿಸುವುದಾಗಿ ಇಮೇಲ್

ಕರ್ನಾಟಕದಲ್ಲಿ ಇ-ಮೇಲ್ ಬಾಂಬ್ ಬೆದರಿಕೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ರಾಜ್ಯದ 5 ಕೋರ್ಟ್‌ ಸ್ಫೋಟಿಸೋದಾಗಿ ಕಿಡಿಗೇಡಿಗಳು ಬೆದರಿಕೆ ಇಮೇಲ್​​​ ರವಾನಿಸಿದ್ದರು. ಇದೀಗ ಬೆಂಗಳೂರಿನ ಹೆಬ್ಬಾಳ ಕೇಂದ್ರೀಯ ವಿದ್ಯಾಲಯಕ್ಕೆ 3 RDX ಇಟ್ಟಿದ್ದಾಗಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಸದ್ಯ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ; RDX ಮೂಲಕ ಸ್ಫೋಟಿಸುವುದಾಗಿ ಇಮೇಲ್
ಕೇಂದ್ರೀಯ ವಿದ್ಯಾಲಯ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jan 09, 2026 | 4:02 PM

Share

ಬೆಂಗಳೂರು, ಜನವರಿ 09: ಇತ್ತೀಚೆಗಷ್ಟೇ ಕೋಲಾರ ಸೇರಿದಂತೆ ಮೈಸೂರು, ಬಾಗಲಕೋಟೆ, ಧಾರವಾಡ ಮತ್ತು ಗದಗ ಕೋರ್ಟ್​ಗಳನ್ನ ಸ್ಫೋಟಿಸೋದಾಗಿ ಹುಸಿ ಬಾಂಬ್ ಬೆದರಿಕೆ (Email Bomb Threats) ಬಂದಿತ್ತು. ಅಷ್ಟೇ ಅಲ್ಲದೆ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿ ಸ್ಫೋಟಿಸೋದಾಗಿ ಕೂಡ ಬೆದರಿಕೆ ಹಾಕಲಾಗಿತ್ತು. ಇದೀಗ ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದೆ. 3 ಆರ್​​ಡಿಎಕ್ಸ್​ (RDX) ಇಟ್ಟಿದ್ದಾಗಿ ವಿದ್ಯಾಲಯದ ಇ-ಮೇಲ್​ ಐಡಿಗೆ ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ.

ಪ್ರಾಂಶುಪಾಲರಿಂದ ಸದಾಶಿವನಗರ ಠಾಣೆಗೆ ದೂರು 

ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್​​ ಬರುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಪ್ರಕಾಶ್ ಅವರು ಬೆಂಗಳೂರಿನ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ  ವೇಳೆ ಯಾವುದೇ ಆರ್​ಡಿಎಕ್ಸ್ ಬಾಂಬ್​ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್​ ಬೆದರಿಕೆ ಅನ್ನೋದು ಮೇಲ್ನೋಟಕ್ಕೆ ಪತ್ತೆ ಆಗಿದೆ. ಸದ್ಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ 5 ಕೋರ್ಟ್‌ ಸ್ಫೋಟಿಸೋದಾಗಿ ಬೆದರಿಕೆ ಇಮೇಲ್‌

ಇತ್ತೀಚೆಗೆ ರಾಜ್ಯದ 5 ಕೋರ್ಟ್‌ಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಸಂದೇಶ ಬಂದಿತ್ತು. ಮೈಸೂರಿನ ಹಳೇ ಕೋರ್ಟ್‌ನ ಮಧ್ಯಾಹ್ನ 1.55ಕ್ಕೆ ಸ್ಫೋಟಿಸೋದಾಗಿ ಇ-ಮೇಲ್ ಬಂದಿತ್ತು. ತಕ್ಷಣವೇ ಎಚ್ಚೆತ್ತ ನ್ಯಾಯಾಧೀಶರು, ವಕೀಲರು ಕೋರ್ಟ್ ಆವರಣದಿಂದ ಹೊರ ಬಂದಿದ್ದರು.

ಇದನ್ನೂ ಓದಿ: ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್

ಇಷ್ಟೇ ಅಲ್ಲ ಧಾರವಾಡ ಹೈಕೋರ್ಟ್‌, ಬಾಗಲಕೋಟ, ಗದಗ ಹಾಗೂ ಹಾಸನ ಜಿಲ್ಲಾ ನ್ಯಾಯಾಲಯ ಕೂಡ ಸ್ಫೋಟಿಸುವ ಬಗ್ಗೆ ಬೆದರಿಕೆ ಇಮೇಲ್‌ ಬಂದಿದ್ದವು. ಪೊಲೀಸರು ತಪಾಸಣೆ ಮಾಡಿದರೂ ಒಂದೇ ಒಂದು ಸ್ಫೋಟದ ವಸ್ತುಗಳು ಸಿಕ್ಕಿಲ್ಲ.

ಇದನ್ನೂ ಓದಿ: ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಇನ್ನು ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿ ಸ್ಫೋಟಿಸೋದಾಗಿ ಕೂಡ ಇತ್ತೀಚೆಗೆ  ಇಮೇಲ್‌ನಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ತಂಡಗಳ ಜತೆ ಕಚೇರಿಯಲ್ಲಾ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಶಂಕಾಸ್ಪದ ಹಾಗೂ ಸ್ಪೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಹಾಗಾಗಿ, ಇವು ಹುಸಿ ಬೆದರಿಕೆ ಇಮೇಲ್ ಅಂತಾ ಪೊಲೀಸರು ತೀರ್ಮಾನಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.