AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ: ದೋಚಿದ್ದು 9.7 ಲಕ್ಷ ಮೌಲ್ಯದ ಆಭರಣ

ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಯೊಬ್ಬರ 9.7 ಲಕ್ಷ ಮೌಲ್ಯದ ಚಿನ್ನದ ಆಭರಣ ಕಳ್ಳತನವಾಗಿದೆ. ಶಸ್ತ್ರಚಿಕಿತ್ಸೆಗೂ ಮುನ್ನ ವಾರ್ಡ್‌ನ ಕಪಾಟಿನಲ್ಲಿಟ್ಟಿದ್ದ ಚಿನ್ನ ಕಾಣೆಯಾಗಿದ್ದು, ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ: ದೋಚಿದ್ದು 9.7 ಲಕ್ಷ ಮೌಲ್ಯದ ಆಭರಣ
ಸಾಂದರ್ಭಿಕ ಚಿತ್ರImage Credit source: AI Image
ಪ್ರಸನ್ನ ಹೆಗಡೆ
|

Updated on: May 07, 2026 | 2:47 PM

Share

ಬೆಂಗಳೂರು, ಮೇ 07: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸೇರಿದ ಬಂಗಾರವನ್ನು ಅಲ್ಲಿನ ಸಿಬ್ಬಂದಿಯೇ ಕದ್ದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ವಾರ್ಡ್​​ನ ಕಪಾಟಿನಿಂದ ಎಗರಿಸಿದ್ದ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

  • ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬಂಗಾರ ಕದ್ದ ಮಹಿಳಾ ಸಿಬ್ಬಂದಿ
  • ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಆಸ್ಪತ್ರೆಯೊಂದರಲ್ಲಿ ಘಟನೆ
  • ಒಟ್ಟು 9.7 ಲಕ್ಷ ರೂಪಾಯಿ ಮೌಲ್ಯದ ವಿವಿಧ ಆಭರಣಗಳು ಕಳ್ಳತನ

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ; ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!

ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಪ್ರಕಾರ, ಮೇ 1ರಂದು ಶಸ್ತ್ರಚಿಕಿತ್ಸೆಗಾಗಿ ಪತ್ನಿಯನ್ನು ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಮೇ 2ರ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮೊದಲು ನರ್ಸಿಂಗ್ ಸಿಬ್ಬಂದಿ ಎಲ್ಲಾ ಆಭರಣಗಳನ್ನು ತೆಗೆಯುವಂತೆ ಸೂಚಿಸಿದ್ದರು. ಅದಾದ ಬಳಿಕ ಮಹಿಳೆ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ತೂಕದ ಕಿವಿಯೋಲೆಗಳು ಹಾಗೂ 10 ಗ್ರಾಂ ತೂಕದ ಬೆಳ್ಳಿ ಕಾಲುಗಜ್ಜೆಗಳನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟು ವಾರ್ಡ್‌ನ ಕಪಾಟಿನೊಳಗೆ ಇರಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಮಧ್ಯಾಹ್ನ ಸುಮಾರು 2.45ಕ್ಕೆ ಕಪಾಟು ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಗೊತ್ತಾಗಿ ದಂಪತಿ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಕಪಾಟಿನ ಬಾಗಿಲು ಒಡೆದ ಗುರುತುಗಳಿಲ್ಲದ ಹಿನ್ನೆಲೆ ವಾರ್ಡ್‌ಗೆ ಪ್ರವೇಶವಿದ್ದವರ ಮೇಲೆ ಅನುಮಾನ ವ್ಯಕ್ತವಾಗಿದೆ. ತಕ್ಷಣವೇ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ನೀಡಿದ ಬಳಿಕ, ಘಟನೆ ಬಗ್ಗರ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ವೇಳೆ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಕಳ್ಳತನ ನಡೆಸಿರೋ ವಿಷಯ ಬಹಿರಂಗವಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!