ಸ್ಪಾಗೆ ನುಗ್ಗಿ ಲೇಡಿ ಗ್ಯಾಂಗ್ ಅಟ್ಟಹಾಸ: ಬಂಧಿತ ಕಾವ್ಯಳಿಗಿದೆ ರೌಡಿಸಂ ಲಿಂಕ್, ಇವಳು ಅಂತಿಂತವಳಲ್ಲ
ತಮ್ಮ ಕೈಯೊಳಗೆ ಕೆಲಸ ಮಾಡ್ತಿದ್ದವನು ಅವನೇ ಸ್ವಂತ ದುಡಿಮೆಗಿಳಿದನಲ್ಲ ಅನ್ನೋ ಮತ್ಸರಕ್ಕೆ ಲೇಡಿ ಡಾನ್‌ವೊಬ್ಬಳು ಗ್ಯಾಂಗ್ ಜತೆ ಸೇರಿ ಹಲ್ಲೆ ನಡೆಸಿ ಜೈಲುಪಾಲಾಗಿದ್ದಾಳೆ. ಬಂಧಿತ ಲೇಡಿ ಡಾನ್ ಸಾಮಾನ್ಯದವಳಲ್ಲ. ಏಕೆಂದರೆ ಅವಳಿಗೆ ರೌಡಿಸಂ ಲಿಂಕ್ ಇದೆ. ರೌಡಿಶೀಟರ್ನ ಹೆಸರನ್ನು ಬಳಸಿಕೊಂಡು ನಗರದಲ್ಲಿ ಫುಲ್ ಹವಾ ಮೈಂಟೇನ್ ಮಾಡಿದ್ದಳು.
ಬೆಂಗಳೂರು, ಮೇ 31: ನಗರದಲ್ಲಿ ಅಮೃತಹಳ್ಳಿಯ ರಾಯಲ್ ಸಲೂನ್ ಮತ್ತು ಸ್ಪಾಗೆ ಎಂಟ್ರಿ ಕೊಟ್ಟಿದ್ದ ಲೇಡಿ ಡಾನ್ ಗ್ಯಾಂಗ್ (Lady Don Gang) ಮಾಲೀಕ ಸಂಜು ಮೇಲೆ ದಾಳಿ (attack) ಮಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಮೂವರಲ್ಲಿ ಕಾವ್ಯಗೆ ರೌಡಿಸಂ ಲಿಂಕ್ ಇದೆ. ಹೇಗೆ ಅಂದರೆ ಬೆಂಗಳೂರಿನ ರೌಡಿಶೀಟರ್ ಮುನಿಕೃಷ್ಣ ಅಲಿಯಾಸ್ ಅಮೃತಹಳ್ಳಿ ಕಪ್ಪೆ ಪ್ರಿಯತಮೆ ಈ ಕಾವ್ಯ. ತನ್ನ ರೌಡಿ ಲವರ್ ಕಪ್ಪೆ ಹೆಸರನ್ನ ಬಳಸಿಕೊಂಡು ಏರಿಯಾದಲ್ಲಿ ಕಾವ್ಯ ಫುಲ್ ಹವಾ ಮೈಂಟೇನ್ ಮಾಡಿದ್ದಳು.
ಸದ್ಯ ಕಪ್ಪೆ ಗೂಂಡಾ ಕಾಯ್ದೆಯಡಿ ಬಂಧನವಾಗಿ ಕಲಬುರಗಿ ಜೈಲಲ್ಲಿದ್ದಾನೆ. ಈ ಹಿಂದೆ ಕಪ್ಪೆ ಬೆಂಗಳೂರಿನಿಂದ ಗಡಿಪಾರು ಆಗಿದ್ದ. ಅತ್ತ ಲವರ್ ಜೈಲಿನಲ್ಲಿದ್ದರೆ ಇತ್ತ ಕಾವ್ಯ ಸ್ನೇಹಿತೆ ಸ್ಮಿತಾ ಜೊತೆ ಸ್ಪಾ ನಲ್ಲಿ ಕೆಲಸ ಮಾಡಿತ್ತಿದ್ದಳು.
ಇದನ್ನೂ ಓದಿ: ಸಲೂನ್ಗೆ ನುಗ್ಗಿ ಲೇಡಿ ಗ್ಯಾಂಗ್ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ನಿನ್ನೆ ಅಮೃತಹಳ್ಳಿ ರಾಯಲ್ ಲೈಫ್ ಸ್ಪಾಗೆ ಎಂಟ್ರಿ ಕೊಟ್ಟಿದ್ದ ಕಾವ್ಯ ಆ್ಯಂಡ್ ಗ್ಯಾಂಗ್ ಸಿಗರೇಟ್ ಸೇದುತ್ತಾ ಹಲ್ಲೆ ಮಾಡಿ ಅವಾಜ್ ಬಿಟ್ಟಿದ್ದಳು. ಹಲ್ಲೆ ಮಾಡಿದ್ದಲ್ಲದೇ ಕಾರಲ್ಲಿ ಸಂಜುನನ್ನು ಕಿಡ್ನಾಪ್ ಮಾಡಿ ಅಮೃತಹಳ್ಳಿ ಪೂರ್ತಿ ಸುತ್ತಾಡಿಸಿ ಹಲ್ಲೆ ಮಾಡಿದ್ದಳು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ ಕೂಡ ಜೈಲುಪಾಲಾಗಿದ್ದಾಳೆ.
ಸಲೂನ್ & ಸ್ಪಾಗೆ ನುಗ್ಗಿ ಲೇಡಿ ಗ್ಯಾಂಗ್ ಅಟ್ಟಹಾಸ
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಮೃತಹಳ್ಳಿಯ ರಾಯಲ್ ಸಲೂನ್ ಮತ್ತು ಸ್ಪಾಗೆ ಲೇಡಿ ಡಾನ್ ಕಾವ್ಯ ಅಂಡ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಸ್ಮಿತಾ, ಮೊಹಮ್ಮದ್ ಜತೆ ಮತ್ತಿಬ್ಬರು, ಸ್ಪಾ ಮಾಲೀಕ ಸಂಜು ಮೇಲೆ ದಾಳಿ ಮಾಡಿದ್ದರು. ಬಳಿಕ ಬ್ಲ್ಯೂ ಕಾರ್‌ನಲ್ಲಿ ಕಿಡ್ನ್ಯಾಪ್ ಮಾಡಿದ್ದರು. ದಾಸರಹಳ್ಳಿ ಕಡೆ ಸುತ್ತಾಡಿಸಿ ಬಿಯರ್ ಬಾಟಲ್, ಡ್ಯಾಗರ್‌ನಿಂದ ಮತ್ತೆ ಸಂಜು ಮೇಲೆ ಎಗರಿ ಎಗರಿ ಹಲ್ಲೆ ಮಾಡಿದ್ದರು. ನಂತರ ಅರ್ಧ ದಾರಿಯಲ್ಲಿ ಬಿಟ್ಟು ಹೋಗಿದ್ದರು.
ಇದನ್ನೂ ಓದಿ: ಬೆಂಗಳೂರು: ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಗ್ಯಾಂಗ್ ಸಿಕ್ಕಿಬಿತ್ತು, ಮಾಡಿದ್ದೇನು ಗೊತ್ತಾ?
ಕಾರಣ ಇಷ್ಟೇ.. ಸ್ಮಿತಾ ಮತ್ತು ಕಾವ್ಯ ನಡೆಸುತ್ತಿದ್ದ ಸ್ಪಾವೊಂದರಲ್ಲಿ ಸಂಜು ಮ್ಯಾನೇಜರ್ ಆಗಿದ್ದ. ಆದರೆ, ಇತ್ತೀಚೆಗೆ ಕೆಲಸ ಬಿಟ್ಟು, ಅಮೃತಹಳ್ಳಿ ಬಳಿ ಹೊಸ ಸ್ಪಾ ತೆರೆದಿದ್ದ. ಇದರಿಂದ ರೊಚ್ಚಿಗೆದ್ದು ಈತನ ಮೇಲೆ ಪ್ರತಾಪ ತೋರಿದ್ದಾರೆ. ಗಾಯಾಳು ಸಂಜು ಪತ್ನಿ, ಸಿಸಿಟಿವಿ ದೃಶ್ಯ ಸಮೇತ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡ ಅಮೃತಳ್ಳಿ ಪೊಲೀಸರು, ಬೆಳಗಾಗುವಷ್ಟರಲ್ಲೇ ಕಾವ್ಯಾ, ಮೊಹಮ್ಮದ್ ಮತ್ತು ಸ್ಮಿತಾ ಮೂವರನ್ನು ಬಂಧಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




