ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿ: 6500 ಮರ ಕಡಿಯಲು ಮುಂದಾದ ಬಿಎಂಆರ್​​ಸಿಎಲ್​

ಬೆಂಗಳೂರಿನ ನಮ್ಮ ಮೆಟ್ರೋದ ಮೂರನೇ ಹಂತದ ಕಿತ್ತಳೆ ಮಾರ್ಗದ ಯೋಜನೆ ನಿರ್ಮಾಣಕ್ಕಾಗಿ 6500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮೊದಲು 11,000 ಮರಗಳನ್ನು ಕಡಿಯುವ ಯೋಜನೆಯಿತ್ತು, ಆದರೆ ಪರಿಸರ ಹೋರಾಟಗಾರರ ಆಕ್ಷೇಪಣೆಯಿಂದಾಗಿ ಈ ಸಂಖ್ಯೆ ಕಡಿಮೆಯಾಗಿದೆ. ಈ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಆತಂಕ ವ್ಯಕ್ತವಾಗಿದೆ.

ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿ: 6500 ಮರ ಕಡಿಯಲು ಮುಂದಾದ ಬಿಎಂಆರ್​​ಸಿಎಲ್​
ನಮ್ಮ ಮೆಟ್ರೋ
Edited By:

Updated on: Jul 29, 2025 | 1:44 PM

ಬೆಂಗಳೂರು, ಜುಲೈ 29: ನಮ್ಮ ಮೆಟ್ರೋದ (namma Metro) ಮೂರನೇ ಹಂತದ ಯೋಜನೆ ಕಿತ್ತಳೆ ಮಾರ್ಗಕ್ಕಾಗಿ 6500 ಮರಗಳನ್ನು ಕಟ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮುಂದಾಗಿದೆ. ಈ ಹಿಂದೆ ಇದೇ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಟ್ ಮಾಡಲು ಬಿಎಂಆರ್‌ಸಿಎಲ್​​ ಸಿದ್ಧತೆ ನಡೆಸಿತ್ತು. ಪರಿಸರ ಹೋರಾಟಗಾರರ ಆಕ್ರೋಶ ವ್ಯಕ್ತವಾಗಿತ್ತು.

15,611 ಸಾವಿರ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ 

ಸದ್ಯ ಪರಿಸರ ಹೋರಾಟಗಾರರ ಆಕ್ರೋಶದ ನಡುವೆಯೂ 6500 ಮರಗಳನ್ನು ಕಟ್ ಮಾಡಲು ನಮ್ಮ ಮೆಟ್ರೋ ಮುಂದಾಗಿದೆ. ಎರಡು ಮಾರ್ಗವನ್ನು ಹೊಂದಿರುವ ಮೂರನೇ ಹಂತವು ಜೆಪಿ ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಎರಡು ಎತ್ತರದ ಕಾರಿಡಾರ್‌ಗಳನ್ನು ಒಳಗೊಂಡಿದೆ. 15,611 ಸಾವಿರ ಕೋಟಿ ರೂ ವೆಚ್ಚದಲ್ಲಿ ಕಿತ್ತಳೆ ಮಾರ್ಗದ ಕಾಮಗಾರಿ ನಡೆಯಲಿದೆ.

ಇದನ್ನೂ ಓದಿ: Metro Yellow Line: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ

ಇದನ್ನೂ ಓದಿ
ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್
ಇನ್ಮುಂದೆ ರ‍್ಯಾಪಿಡೋ ಸೇರಿ ಸಂಚಾರಿ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್​ ಲಭ್ಯ
ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: BMRCL​ಗೆ ತೇಜಸ್ವಿಸೂರ್ಯ ಪ್ರಶ್ನೆ
ಪಿಂಕ್ ಲೈನ್ ಮೆಟ್ರೋ: ಮಹತ್ವದ ಅಪ್​​ಡೇಟ್ ಕೊಟ್ಟ ಬಿಎಂಆರ್​ಸಿಎಲ್

ಒಟ್ಟು ಈ ಕಿತ್ತಳೆ ಮಾರ್ಗವು ಒಟ್ಟಾರೆ 44.65 ಕಿಮೀ ಉದ್ದವಿದೆ. ನಗರದಾದ್ಯಂತ ಸುಮಾರು 11 ಸಾವಿರ ಮರಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ. ಈ ಹಿಂದೆ ಮೆಟ್ರೋ ರೈಲು ನಿಗಮ 11,137 ಮರಗಳನ್ನು ಕಡಿಯಬೇಕು, ಇಲ್ಲವೇ ಸ್ಥಳಾಂತರಕ್ಕೆ ನಿರ್ಧರಿಸಿತ್ತು.

ಇದನ್ನೂ ಓದಿ: ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: ಬಿಎಂಆರ್​ಸಿಎಲ್​ಗೆ ಸಾಲು ಸಾಲು ಪ್ರಶ್ನೆ ಕೇಳಿದ ತೇಜಸ್ವಿಸೂರ್ಯ

ಬಿಎಂಆರ್‌ಸಿಎಲ್ ಈ ಬಗ್ಗೆ ಜನರೊಂದಿಗೆ ಸಭೆ ಮಾಡಲಿದೆ. ಮೂರು ದಿನಗಳ ಕಾಲ ನಡೆಯುವ ಸಭೆಯಲ್ಲಿ ಸಾರ್ವಜನಿಕರು ತಮ್ಮ ಆಲೋಚನೆಗಳು ಮತ್ತು ಚಿಂತೆಗಳನ್ನು ಹಂಚಿಕೊಳ್ಳಬಹುದಾಗಿದೆ. ನಮ್ಮ ಮೆಟ್ರೋ ಅಧಿಕಾರಿಗಳು ಈ ಸಭೆಯ ನೇತೃತ್ವ ವಹಿಸಲಿದ್ದಾರೆ.

ಪ್ರವೇಶ, ನಿರ್ಗಮನ ದ್ವಾರ ಓಪನ್​

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಜುಲೈ 28ರಂದು ದೈನಂದಿನ ಪ್ರಯಾಣಿಕರ ನಿರಂತರ ಬೇಡಿಕೆಗೆ ಅನುಗುಣವಾಗಿ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ರವೇಶ-ಡಿ ಯಲ್ಲಿ, ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ತೆರೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.