
ಬೆಂಗಳೂರು, ಆಗಸ್ಟ್ 2: ಆರ್.ವಿ.ರೋಡ್ನಿಂದ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಯಾವಾಗ ರೈಲು ಸಂಚಾರ ಆರಂಭವಾಗುತ್ತದೆ ಎಂದು ಕಾದಿದ್ದ ಪ್ರಯಾಣಿಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಹಳದಿ ಮಾರ್ಗದಲ್ಲೂ ಮೆಟ್ರೋ ರೈಲು ಸಂಚಾರ ಮಾಡಲಿದೆ. ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಸಿಕ್ಕಿದೆ. ಜುಲೈ 22 ರಿಂದ 25 ರವರೆಗೆ ಹಳದಿ ಮಾರ್ಗವನ್ನು ಪರಿಶೀಲನೆ ಮಾಡಿದ್ದ ಸೌತ್ ಜೋನ್ ರೈಲ್ವೆ ಸುರಕ್ಷತಾ ಆಯುಕ್ತ ಎಎಂ ಚೌಧರಿ ನೇತೃತ್ವದ ತಂಡ 19.15 ಕಿಮೀ ವಿಸ್ತೀರ್ಣವಿರುವ ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಮಾರ್ಗದಲ್ಲಿ ಚೀನಾ ನಿರ್ಮಿತ ಚಾಲಕ ರೈಲುಗಳು ಸಂಚಾರ ಮಾಡಲಿವೆ. 16 ಮೆಟ್ರೋ ಸ್ಟೇಷನ್ಗಳನ್ನು ಹೊಂದಿರುವ ಮಾರ್ಗವಿದಾಗಿದ್ದು, 25 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಸದ್ಯ ಯೆಲ್ಲೋ ಲೈನ್ನಲ್ಲಿ ಸಂಚಾರ ಮಾಡಲು ಬಿಎಂಆರ್ಸಿಎಲ್ ಬಳಿ ಮೂರು ರೈಲುಗಳು ಮಾತ್ರವಿದೆ.
ಈ ಮೆಟ್ರೋ ಮಾರ್ಗದಲ್ಲಿ 16 ಎತ್ತರಿಸಿದ ಮೆಟ್ರೋ ಸ್ಟೇಷನ್ಗಳಿದ್ದು, ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೂ ಚಾಲಕರಹಿತ ರೈಲುಗಳು ಸಂಚಾರ ಮಾಡಲಿವೆ. ಆದರೆ 25 ನಿಮಿಷಗಳಿಗೊಮ್ಮೆ ಒಂದು ಮೆಟ್ರೋ ರೈಲು ಸಂಚಾರ ಮಾಡಲಿದೆ. ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ 5 ರಿಂದ 7 ನಿಮಿಷಕ್ಕೊಂದರಂತೆ ರೈಲು ಸಂಚಾರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹಳದಿ ಮಾರ್ಗಕ್ಕೆ ಹೆಚ್ಚಿನ ರೈಲುಗಳು ಬಂದ ನಂತರ ಈ ಮಾರ್ಗದಲ್ಲೂ 5 ರಿಂದ 7 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.
ಇದನ್ನೂ ಓದಿ: Metro Yellow Line: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ
ಒಟ್ಟಿನಲ್ಲಿ, ಈ ಬಾರಿಯಾದರೂ ಅಂದುಕೊಂಡಿರುವಂತೆಯೇ ಬಿಎಂಆರ್ಸಿಎಲ್ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಿದರೆ ಸಾಕು ಎನ್ನುವಂತಾಗಿದೆ. ಈ ಬಾರಿಯಾದರೂ ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾರಂಭ ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.