Bengaluru News: ಡೇ ಕೇರ್ ಸೆಂಟರ್ ನಂಬಿ ಮಕ್ಕಳನ್ನು ಬಿಡುವ ಪೋಷಕರೇ ಎಚ್ಚರ!
ಡೇ ಕೇರ್ ಸೆಂಟರ್ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ಚಿಕ್ಕಲಸಂದ್ರದಲ್ಲಿ ನಡೆದಿದೆ. ಡೇ ಕೇರ್ನಲ್ಲಿ ಯಾವ ಸಿಬ್ಬಂದಿಯೂ ಇಲ್ಲದೇ ಇರುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ನಗರದಲ್ಲಿ ಬಹುತೇಕ ಪೋಷಕರು ಇಬ್ಬರೂ ಕೆಲಸ ಮಾಡುತ್ತಾರೆ. ಹಾಗಾಗಿ ಮಕ್ಕಳನ್ನು ಡೇ ಕೇರ್ ಸೆಂಟರ್ (day care center) ಗೆ ಸೇರಿಸಿ ಕೆಲಸಕ್ಕೆ ಹೋಗುವುದು ಮಾಮೂಲಿಯಾಗಿದೆ. ಆದರೆ ಈ ಡೇ ಕೇರ್ನಲ್ಲಿನ ಸಿಬ್ಬಂದಿ ಮಕ್ಕಳನ್ನು ಹೇಗೆ ಕೇರ್ ಮಾಡುತ್ತಾರೆ ಅನ್ನುವ ಅನುಮಾನ ಮೂಡುವಂತ ಘಟನೆಯೊಂದು ಸದ್ಯ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ನಾಲ್ಕೈದು ನಿಮಿಷ ಹೊಡೆದರೂ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರುವುದಿಲ್ಲ.
ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ: ಡಿಜಿ-ಐಜಿಪಿ ಅಲೋಕ್ ಮೋಹನ್
ಈ ಹಿನ್ನೆಲೆಯಲ್ಲಿ ಡೇ ಕೇರ್ ಸೆಂಟರ್ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಗೆ ನಗರ ಪೊಲೀಸರು ಸೂಕ್ತ ತನಿಖೆ ಮಡೆಸುವಂತೆ ಸೂಚನೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸ್ ಭೇಟಿ
ಘಟನೆ ಕುರಿತು ಠಾಣೆಗೆ ದೂರು ನೀಡಲು ಬಾಲಕಿ ಪೋಷಕರು ನಿರಾಕರಿಸಿದ್ದಾರೆ. ಹಾಗಾಗಿ ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾಂಟೆಸ್ಸರಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಿದ್ದಾರೆ. ಘಟನೆ ಸಂಬಂಧ ಮುಂದಿನ ಕ್ರಮದ ಕುರಿತು ಪೊಲೀಸರು ಕಾನೂನು ತಜ್ಞರ ಮೊರೆಹೋಗಿದ್ದಾರೆ.
ಇದನ್ನೂ ಓದಿ: Electricity Bill ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಕೆಜೆ ಜಾರ್ಜ್
ಸಿಟಿಜನ್ಸ್ ಮೂವ್ಮೆಂಟ್ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಮುಚ್ಚಿದ ಕೋಣೆಯೊಂದರಲ್ಲಿ ಅಂಬೆಗಾಲಿಡುವ ಮಕ್ಕಳನ್ನು ಗಮನಿಸದೆ ಬಿಡುವ ಪ್ರಿಸ್ಕೂಲ್ನ ಗೊಂದಲಕಾರಿ ವಿಡಿಯೋವನ್ನು ನಾವು ಗಮನಿಸಿದ್ದೇವೆ. ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವುದನ್ನು ಕಾಣಬಹುದಾಗಿದೆ. ದಯವಿಟ್ಟು ಈ ಡೇ ಕೇರ್ಗೆ ನಿಮ್ಮ ಮಕ್ಕಳನ್ನು ಕಳುಹಿಸಬೇಡಿ ಎಂದು ಮನವಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.