Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ವೇಳೆ ಕಾಂಗ್ರೆಸ್​​​ ಕಾರ್ಯಕರ್ತರ ಕಿಡ್ನಾಪ್​ ಆರೋಪ: ರೌಡಿ ಶೀಟರ್ಸ್ ಆ್ಯಂಡ್​ ಟೀಂ ವಿರುದ್ಧ FIR ದಾಖಲು

2023 ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಕಿಡ್ನಾಪ್​ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್, ಉದಯ್ ಎಂಬುವರ ದೂರು ಆಧರಿಸಿ ನಗರದ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಚುನಾವಣೆ ವೇಳೆ ಕಾಂಗ್ರೆಸ್​​​ ಕಾರ್ಯಕರ್ತರ ಕಿಡ್ನಾಪ್​ ಆರೋಪ: ರೌಡಿ ಶೀಟರ್ಸ್ ಆ್ಯಂಡ್​ ಟೀಂ ವಿರುದ್ಧ FIR ದಾಖಲು
ರೌಡಿ ಶೀಟರ್ಸ್ ಮನೋಜ್
Follow us
ಗಂಗಾಧರ​ ಬ. ಸಾಬೋಜಿ
|

Updated on:Jun 22, 2023 | 4:57 PM

ಬೆಂಗಳೂರು: 2023 ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ (Congress) ಕಾರ್ಯಕರ್ತರ ಕಿಡ್ನಾಪ್​ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್, ಉದಯ್ ಎಂಬುವರ ದೂರು ಆಧರಿಸಿ ನಗರದ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕಾಂಗ್ರೆಸ್​ ಪರ ಕೆಲಸ ಮಾಡದಂತೆ ರೌಡಿಶೀಟರ್ಸ್ ಮನೋಜ್, ಕೆಂಚನ ಗ್ಯಾಂಗ್​​ನಿಂದ ಕಿಡ್ನಾಪ್​​ ಮಾಡಿ ಲಾಡ್ಜ್​​ನಲ್ಲಿ ಕೂಡಿ ಹಾಕಿದ್ದ ಆರೋಪ ಮಾಡಲಾಗಿತ್ತು.

ಮೇ 9ರಂದು ಯಶವಂತಪುರ ವೃತ್ತ ಬಳಿ ಕಿಡ್ನಾಪ್ ಮಾಡಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡದಂತೆ ಒತ್ತಡ ಹಾಕಿದ್ದರು. ಒಂದು ವೇಳೆ ಕಾಂಗ್ರೆಸ್​​​ ಪರ ಕೆಲಸ ಮಾಡದಿದ್ದರೆ ಹಣ ಕೊಡುವುದಾಗಿ ಆಮಿಷ ಒಡಿದ್ದರು. ಒಪ್ಪದಿದ್ದಕ್ಕೆ ನಮ್ಮ ಫೋನ್​ ಕಿತ್ತುಕೊಂಡು ಮತ್ತಿಕೆರೆ ಲಾಡ್ಜ್​​ನಲ್ಲಿ ಕೂಡಿ ಹಾಕಿದ್ದರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಕಿಡ್ನಾಪ್ ಆರೋಪ ಪಟ್ಟ; ಪೊಲೀಸರಿಗೆ ದೂರು ನೀಡಿದ ಬಿಜೆಪಿ ಅಭ್ಯರ್ಥಿ

ಎಲೆಕ್ಷನ್ ದಿನ ನಮ್ಮನ್ನು ಹೊರಗಡೆ ಹೋಗದಂತೆ ಲಾಡ್ಜ್‌ನಲ್ಲಿಯೇ ಕೂಡಿ ಹಾಕಿದ್ದರು, ನಮ್ಮನ್ನು ಬೈಕ್​ನಲ್ಲಿ ಕರೆದುಕೊಂಡು ಬಂದ ಹುಡುಗರ ಪೈಕಿ ಇಬ್ಬರು ಹುಡುಗರು ನಮ್ಮೊಂದಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ಅಕ್ರಮವಾಗಿ ಲಾಡ್ಜ್‌ನಲ್ಲಿ ಇರಿಸಿಕೊಂಡಿದ್ದರು. ನಾವು ಬರುವಾಗ ನಮ್ಮ ಮೊಬೈಲ್‌ಗಳನ್ನು ನಮಗೆ ವಾಪಸ್ಸು ಕೊಟ್ಟು ಕಳುಹಿಸಿಕೊಟ್ಟರು. ಇವರು ಯಾರು ಸಹ ನಮಗೆ ಹೊಡೆಯುವುದು, ಕೆಟ್ಟದಾಗಿ ಬೈಯ್ಯುವುದು ಮಾಡಲಿಲ್ಲ.

ಇದನ್ನೂ ಓದಿ: ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ದ ವಂಚನೆ ಆರೋಪ: ಆಡಿಯೋ ವೈರಲ್

ನಂತರ ತುಮಕೂರು ಸಿಟಿ ಶ್ರೀರಾಂನಗರದಲ್ಲಿರುವ ನನ್ನ ಅಕ್ಕನ ಮನೆಯಲ್ಲಿ ಹಬ್ಬ ಇದ್ದ ಕಾರಣ ಠಾಣೆಗೆ ಬಂದು ದೂರು ಕೊಡಲು ಸಾಧ್ಯವಾಗಿರಲಿಲ್ಲ. ಈ ದಿನ ಸ್ನೇಹಿತರು ಧೈರ್ಯ ಹೇಳಿದ್ದರಿಂದ ಠಾಣೆಗೆ ಒಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ನನ್ನನ್ನು ಮತ್ತು ಉದಯ್ ಚುನಾವಣೆ ದಿನ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಬಾರದೆಂದು ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಮನೋಜ್, ಕೆಂಚ ಮತ್ತು ಇತರೆ 3-4 ಜನ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್​ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:56 pm, Thu, 22 June 23