AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯ ಪ್ರಿಯರಿಗೆ ಶಾಕ್: ಬೆಂಗಳೂರಿನಲ್ಲೀಗ ಬಿಯರ್ ಕೊರತೆ, ವಾರಾಂತ್ಯದ ಆಫರ್​​ಗಳಿಗೆ ಬೀಳಲಿದೆ ಬ್ರೇಕ್

Beer Shortage in Bengaluru; ಬಿರು ಬೇಸಗೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಿಯರ್ ಮಾರಾಟ ವಿಪರೀತ ಹೆಚ್ಚಾಗಿರುವ ಬಗ್ಗೆ ಇತ್ತೀಚಿಗೆ ವರದಿಯಾಗಿತ್ತು. ಇದೀಗ, ಬೇಡಿಕೆ ಹೆಚ್ಚಳ ಮತ್ತು ಪೂರೈಕೆ ಕೊರತೆಯಿಂದ ಬೆಂಗಳೂರಿನಲ್ಲಿ ಬಿಯರ್ ಬಿಕ್ಕಟ್ಟು ಸೃಷ್ಟಿಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ

ಮದ್ಯ ಪ್ರಿಯರಿಗೆ ಶಾಕ್: ಬೆಂಗಳೂರಿನಲ್ಲೀಗ ಬಿಯರ್ ಕೊರತೆ, ವಾರಾಂತ್ಯದ ಆಫರ್​​ಗಳಿಗೆ ಬೀಳಲಿದೆ ಬ್ರೇಕ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: May 06, 2024 | 9:13 AM

ಬೆಂಗಳೂರು, ಮೇ 6: ನೀರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬೆಂಗಳೂರು ನಗರದಲ್ಲಿ ಶೀಘ್ರದ್ಲಲೇ ಬಿಯರ್​ (Beer) ಬಿಕ್ಕಟ್ಟು ಕೂಡ ಸೃಷ್ಟಿಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿದೆ. ಹೆಚ್ಚುತ್ತಿರುವ ಬೇಡಿಕೆ, ಕುಸಿದ ಪೂರೈಕೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ನಗರದ ಪಬ್‌ಗಳು ಮತ್ತು ಬ್ರೂವರೀಸ್​ಗಳಲ್ಲಿ (Pubs and Breweries) ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ, ಅದಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ದಾಸ್ತಾನು ಮರುಸ್ಥಾಪಿಸುವಲ್ಲಿ ಕೂಡ ವಿಳಂಬವಾಗುತ್ತಿದೆ.

ಪೂರೈಕೆ ಸಮಸ್ಯೆಯ ಕಾರಣ ಅನೇಕ ಪಬ್‌ಗಳು ಮತ್ತು ಬ್ರೂವರೀಸ್‌ಗಳು ವಾರಾಂತ್ಯದ ಕೊಡುಗೆಗಳನ್ನು ನಿಲ್ಲಿಸಲು ಮುಂದಾಗಿವೆ. ಶೀಘ್ರದಲ್ಲೇ ಇದು ಜಾರಿಯಾಗಬಹುದು. 2 ಖರೀದಿಸಿದರೆ ಒಂದು ಉಚಿತ ಅಥವಾ ಒಂದು ಖರೀದಿಸಿದರೆ ಮತ್ತೊಂದು ಉಚಿತ ಇತ್ಯಾದಿ ಆಫರ್​​ಗಳನ್ನು ನಿಲ್ಲಿಸಲು ಪಬ್​ಗಳು ಮುಂದಾಗಿವೆ ಎಂದು ‘ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಕೇವಲ ಬೇಸಿಗೆಯ ಕಾರಣದಿಂದಾಗಿ ಬೇಡಿಕೆಯ ಹೆಚ್ಚಳವಾಗಿರುವುದಲ್ಲ. ದೀರ್ಘ ವಾರಾಂತ್ಯಗಳು, ಸಾಲು ರಜೆಗಳೂ ಸಹ ಕಾರಣವಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಬಿಯರ್​ಗೆ ಹೆಚ್ಚಿದ ಬೇಡಿಕೆ, ತಗ್ಗಿದ ಪೂರೈಕೆ

ಈ ವರ್ಷ ಬಳಕೆ, ಬೇಡಿಕೆ ನಿರೀಕ್ಷೆಯನ್ನು ಮೀರಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಉದ್ಯಮ ಸಿದ್ಧವಾಗಿಲ್ಲ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ನಾವು ಹಣ್ಣಿನ ಫ್ಲೇವರ್​ಗಳ ಬಿಯರ್ ಅನ್ನು ಪರಿಚಯಿಸುತ್ತೇವೆ. ಮಾವಿನಹಣ್ಣು ಮತ್ತು ಅನಾನಸ್‌ಗಳಂತಹ ಹಣ್ಣುಗಳ ಲಭ್ಯತೆಯ ಮೇಲೆ ಮಾರಾಟ ಹೆಚ್ಚು ಅವಲಂಬಿತವಾಗಿದೆ. ಈ ವರ್ಷ, ಮಾವಿನಹಣ್ಣಿನ ಸಮಸ್ಯೆಯಿಂದಾಗಿ ಹಣ್ಣಿನ ಬಿಯರ್‌ನ ಮಾರಾಟವು ಕಡಿಮೆಯಾಗಿದೆ. ಪರಿಣಾಮವಾಗಿ ಜನರು ಸಾಮಾನ್ಯ ಬಿಯರ್ ಅನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಮಾರತ್ತಹಳ್ಳಿಯ ಪ್ರಮುಖ ಮದ್ಯದ ಅಂಗಡಿಯ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಬೇಡಿಕೆ ಹೆಚ್ಚಳಕ್ಕೆ ಕಾರಣವೇನು?

ಬಿಸಿಲು, ಐಪಿಎಲ್ ಸೀಸನ್ ಮತ್ತು ದೀರ್ಘ ವಾರಾಂತ್ಯದಲ್ಲಿ ಜನರು ಹೆಚ್ಚೆಚ್ಚು ಬರುವುದರಿಂದ ಮಾರಾಟವೂ ಹೆಚ್ಚುತ್ತಲೇ ಇತ್ತು. ಈ ವರ್ಷ ಸರಿಸುಮಾರು 30,000 ಲೀಟರ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ ಸುಮಾರು 9,000 ಲೀಟರ್‌ ಮಾರಾಟವಾಗಿತ್ತಷ್ಟೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೇಸಿಗೆ ಬೇಗೆ: ರಾಜ್ಯದಲ್ಲಿ 11 ದಿನಗಳಲ್ಲಿ 17 ಲಕ್ಷ ಲೀ ಕೋಲ್ಡ್​ ಬಿಯರ್ ಮಾರಾಟ!

ಗ್ರಾಹಕರು ಇತರ ಪಾನೀಯಗಳಿಗಿಂತ ಬಿಯರ್​ ಅನ್ನೇ ಹೆಚ್ಚಾಗಿ ಆರ್ಡರ್‌ ಮಾಡುತ್ತಿದ್ದಾರೆ. ಹೀಗಾಗಿ ಮಾರಾಟವು ಶೇ 40 ರಷ್ಟು ಹೆಚ್ಚಾಗಿದೆ. ಪೂರೈಕೆ ವಿಳಂಬದಿಂದಾಗಿ ಮಾರಾಟ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಗಿಲ್ಲಿಸ್ ರೆಸ್ಟೊಬಾರ್‌ನ ಕಾರ್ಯಾಚರಣಾ ಮುಖ್ಯಸ್ಥರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!