Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಕ್​​ ಫ್ರಾಮ್​ ಹೋಮ್​ದಿಂದ ಮರಳಿ ಆಫಿಸ್​ಗೆ: ವಿಚಿತ್ರವಾಗಿ ವರ್ತಿಸುತ್ತಿವೆ ಉದ್ಯೋಗಿಗಳ ಸಾಕುಪ್ರಾಣಿಗಳು

ಕೊರೊನಾ ನಂತರ ಐಟಿ-ಬಿಟಿ ಮತ್ತು ಕಾರ್ಪೊರೇಟ್​​​​ ಉದ್ಯೋಗಿಗಳು ಆಫೀಸ್​​ಗಳಿಗೆ ತೆರಳಲು ಆರಂಭಸಿದ್ದು, ಇದರಿಂದ ಅವರು ಸಾಕಿದ ಶ್ವಾನಗಳು ವಿಚಿತ್ರವಾಗಿ ವರ್ತಿಸುತ್ತಿವೆ.

ವರ್ಕ್​​ ಫ್ರಾಮ್​ ಹೋಮ್​ದಿಂದ ಮರಳಿ ಆಫಿಸ್​ಗೆ: ವಿಚಿತ್ರವಾಗಿ ವರ್ತಿಸುತ್ತಿವೆ ಉದ್ಯೋಗಿಗಳ ಸಾಕುಪ್ರಾಣಿಗಳು
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Jun 29, 2023 | 4:12 PM

ಬೆಂಗಳೂರು: ಕೊರೊನಾ ನಂತರ ಐಟಿ-ಬಿಟಿ ಮತ್ತು ಕಾರ್ಪೊರೇಟ್ ​​ಉದ್ಯೋಗಿಗಳು (Employees) ಆಫೀಸ್​​ಗಳಿಗೆ ತೆರಳಲು ಆರಂಭಸಿದ್ದು, ಇದರಿಂದ ಅವರು ಸಾಕಿದ ಶ್ವಾನಗಳು (Dogs) ವಿಚಿತ್ರವಾಗಿ ವರ್ತಿಸುತ್ತಿವೆ. ಹೌದು ವರ್ಕ್​​ ಫ್ರಾಮ್​ ಹೋಮ್ (Work From Home) ಸಮಯದಲ್ಲಿ ಕೆಲ ಉದ್ಯೋಗಿಗಳು ಶ್ವಾನ ಸಾಕಲು ಪ್ರಾರಂಭಿಸಿದರು. ಇದೀಗ ಒಂದು ಅಥವಾ ಒಂದುವರೆ ವರ್ಷ ವರ್ಕ್​​ ಫ್ರಾಮ್​​ ಹೋಮ್​​ ಉದ್ಯೋಗಿಗಳು ಆಫೀಸ್​​ಗಳಿಗೆ ಹೋಗುತ್ತಿದ್ದಾರೆ ಇದರಿಂದ ಶ್ವಾನ ಮಾಲಿಕರಿಗೆ ಚಿಂತೆ ಶುರುವಾಗಿದೆ. ಇನ್ನು ಸಾಕು ನಾಯಿಗಳು ವಿಚಿತ್ರವಾಗಿ ವರ್ತಿಸಲು ಆರಂಭಿಸಿವೆ ಎಂದು ಕೆಲ ಉದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂಜಾನಾ ವಿಜಯಶಂಕರ್​​ ಎಂಬುವರು ಮಾತನಾಡಿ “ನಾನು ಮತ್ತು ನನ್ನ ಪತಿ ನಗರದ ವೈಟ್​ಫಿಲ್ಡ್​​ ನಿವಾಸಿಗಳಾಗಿದ್ದೇವೆ. ನಾವು ವರ್ಕ್​​​ ಫ್ರಾಮ್​​ ಹೋಮ್​ ಸಮಯದಲ್ಲಿ ನಾಯಿ ಸಾಕಿದ್ದು, ಅದಕ್ಕೆ ಲೀಫೋ ಎಂದು ನಾಮಕರಣ ಮಾಡಿದ್ದೇವು. 2020 ಅಗಸ್ಟ್​ ಸಮಯದಲ್ಲಿ ನಾವು ನಾಯಿ ಸಾಕಲು ಆರಂಭಿಸಿದೇವು. ಲಿಫೋವನ್ನು ಬಹಳ ಹಚ್ಚುಕೊಂಡಿದ್ದೇವು. ಸದಾ ಅದು ನಮ್ಮ ಸುತ್ತ ಇರುತ್ತಿತ್ತು. ಬಹಳಷ್ಟು ಮುದ್ದಾಗಿ ಸಾಕಿದ್ದೇವೆ”.

ಆದರೆ 11 ತಿಂಗಳ ಹಿಂದೆ ನಮಗೆ ಆಫಿಸ್​ಗೆ ಬರಲು ಸೂಚಿಸಿದರು. ಅಂದಿನಿಂದ ನಾವು ಆಫೀಸ್​ ತೆರಳು ಕೆಲಸ ಮಾಡಲು ಆರಂಭಿಸಿದೆವು. ಇದರಿಂದ ನಾವು ದಿನದ 10 ಗಂಟೆ ಲಿಫೋವನ್ನು ಬಿಟ್ಟು ಇರಬೇಕಾಯಿತು. ಇದರಿಂದ ನನಗೆ ಆತಂಕ ಶುರುವಾಗಿದೆ. ಏಕೆಂದರೆ ನಾವು ಇಲ್ಲದ ಸಮಯದಲ್ಲಿ ಅವಳು ಬೊಗಳುತ್ತಾಳೆ ಮತ್ತು ಕೊರಗುತ್ತಾಳೆ. ದುಃಖ ಮತ್ತು ನಿರಾಶೆಯಿಂದ, ಅವಳು ಬಾಗಿಲಿನ ಬಳಿ ಕುಳಿತು ಕೊರಗುತ್ತಾಳೆ ಮತ್ತು ನನ್ನ ತಾಯಿ ಊಟ ಹಾಕಿದರು ತಿನ್ನುತ್ತಿಲ್ಲ ಅಂತ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುವ ಸಂಜನಾ ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ ಆಫ್​ ಇಂಡಿಯಾ ವರದಿ ಮಾಡಿದೆ.​​

ಇದನ್ನೂ ಓದಿ: Viral Video: ‘ಬೆಂಗಳೂರು ಹುಡುಗಿ’ ರಾಜಧಾನಿಯ ಬಾರ್​ಗಳಿಗೆ ಕನ್ನಡದ ಅಂಗಿ ತೊಡಿಸಿದಾಗ

ಮಲ್ಲೇಶ್ವರಂ ನಿವಾಸಿ ಆರ್ಕಿಟೆಕ್ಟ್ ಮತ್ತು ಇಂಟೀರಿಯರ್ ಡಿಸೈನರ್ ಪ್ರತಿಭಾ ರಾಜೇಶ್ ಎಂಬುವರು ಮಾತನಾಡಿ ನಮ್ಮ ಮನೆಯಲ್ಲಿ ಮೂವರು ವಾಸಿಸುತ್ತಿದ್ದು, ಅಕ್ಟೋಬರ್ 2021ರಲ್ಲಿ ಎರಡು ವರ್ಷದ ಶ್ವಾನವನ್ನು ಖರೀದಿಸಿದೇವು. ಅದಕ್ಕೆ ಬೀಗಲ್ ರೋಕು ಎಂಬ ಹೆಸರನ್ನು ಇಟ್ಟಿದ್ದೇವೆ. ವರ್ಕ್​​ ಫ್ರಾಮ್​​ ಹೋಮ್​ ಅಲ್ಲಿ ಇದ್ದಾಗ ನನ್ನ ಮಕ್ಕಳೊಂದಿಗೆ ಬಹಳ ಹಚ್ಚುಕೊಂಡಿತ್ತು.

ಇದೀಗ ನನ್ನು ಹಿರಿಯ ಮಗನನ್ನು ಹೊರತುಪಡಿಸಿ, ಉಳಿದವರು ಕೆಲಸಕ್ಕೆ ಹೋಗುತ್ತಾರೆ. “ನನ್ನ ಮಗ ಜಿಮ್‌ಗೆ ಹೋದಾಗ ಅಥವಾ ಸ್ನೇಹಿತರೊಂದಿಗೆ ಹೊರಗೆ ಹೋದಾಗ ಬೀಗಲ್ ರೋಕು ಒಂಟಿಯಾಗಿ ಬಿಡುತ್ತಾನೆ. ಇದಿರಿಂದ ಅದು ಬೊಗಳುತ್ತದೆ, ವಿಚಿತ್ರವಾಗಿ ವರ್ತಿಸಲು ಆರಂಭಿಸಿದೆ ಎಂದು ಪ್ರತಿಭಾ ಅವರು ಹೇಳಿದ್ದಾರೆ.

ಬೆಂಗಳೂರಿನ ಸಿಯುಪಿಎಯಲ್ಲಿ ಕೀರ್ತನಾ ಆರ್‌ಪಿ ಎಂಬುವರ ಆಶ್ರಯದಲ್ಲಿ 140 ನಾಯಿಗಳಿವೆ. ಸಾಕುಪ್ರಾಣಿಗಳನ್ನು ಹೇಗೆ ನಿಭಾಯಿಸಬೇಕೆಂದು ಅವರು ಕೆಲವು ಸಲಹೆ ನೀಡಿದ್ದಾರೆ. “ಜನರು ತಮ್ಮ ಸಾಕುಪ್ರಾಣಿಗಳಿಗೆ ಸ್ವಲ್ಪ ಸಮಯದವರೆಗೆ ನಿಮ್ಮನ್ನು ಬಿಟ್ಟು ದೂರವಿರುವ ತರಬೇತಿ ನೀಡಬೇಕು. ಬಳಿಕ ಸಾಕಪ್ರಾಣಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ನೋಡುವುದು ಉತ್ತಮ ಎಂದು ಕೀರ್ತನಾ ಹೇಳುತ್ತಾರೆ. ಇನ್ನು ಕೆಲವು ಕಂಪನಿಗಳಲ್ಲಿ ಹಲವಾರು ಉದ್ಯೋಗಿಗಳು ಸಾಕು ಪ್ರಾಣಿಗಳಿಗಾಗಿ ವರ್ಕ್​​ ಫ್ರಾಮ್​ ಹೋಮ್​​ ತೆಗೆದುಕೊಂಡಿದ್ದು, ಇದು ಅವರು ತಮ್ಮ ಪ್ರಾಣಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಈ ಸಲಹೆಯನ್ನು ಸಂಜನಾ ಅನ್ವಯಿಸಿದ್ದು, ಇದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಇದೀಗ ಸಂಜನಾ ಇಡೀ ದಿನ ದೂರದಲ್ಲಿದ್ದರೂ ಲಿಫೌ ಪ್ರತ್ಯೇಕತೆಯ ಆತಂಕದ ಲಕ್ಷಣಗಳನ್ನು ತೋರಿಸುವುದಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಉದ್ಯೋಗಿಗಳ ಸಾಕುಪ್ರಾಣಿಗಳಿಗೆ ಪಿಇಟಿ ಸಿಟ್ಟರ್‌ಗಳನ್ನು ಒದಗಿಸಬೇಕೆಂದು ಅನೇಕ ಸಂಸ್ಥೆಗಳ ಉದ್ಯೋಗಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಉದ್ಯೋಗಿಯ ಬಗ್ಗೆ ನೀವು ನಿಜವಾಗಿಯೂ ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸಲು ಇದಕ್ಕಿಂತ ಉತ್ತಮವಾದ ಮಾರ್ಗ ಯಾವುದು ಎಂದು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುವ 24 ವರ್ಷದ ಮಿಲನ್ ಪ್ರಶ್ನಿಸಿದ್ದಾರೆ.

“ಹೆಚ್ಚು ಹೆಚ್ಚು ಕುಟುಂಬಗಳು ಈಗ ಸಾಕುಪ್ರಾಣಿಗಳನ್ನು ಹೊಂದಿವೆ ಎಂದು ಪರಿಗಣಿಸಿದರೆ, ಕಂಪನಿಗಳು ಉದ್ಯೋಗಿಗಳ ಸಾಕುಪ್ರಾಣಿಗಳಿಗೆ ಹ್ಯಾಂಗ್ ಔಟ್ ಮಾಡಲು ಸ್ಥಳವನ್ನು ಒದಗಿಸಬಹುದು. ಅನೇಕ ಕಾರ್ಪೊರೇಟ್‌ಗಳು ಹೊಂದಿರುವ ಶಿಶುಪಾಲನಾ ಸೌಲಭ್ಯದಂತೆಯೇ” ಇದು ಕೂಡ ಎಂದು ಸಂಜನಾ ಸೂಚಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ