AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಯಶವಂತಪುರ, ಕತ್ರಿಗುಪ್ಪೆ ಸೇರಿ ಹಲವೆಡೆ ಇಂದು ಪವರ್ ಕಟ್

Power Cut in Bangalore Today: ಬೆಂಗಳೂರಿನ ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮೀಪುರಂ, ಪದ್ಮನಾಭನಗರ, ಶಾಂತಿನಗರ, ಕತ್ರಿಗುಪ್ಪೆ ಮುಂತಾದ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ. 

Bengaluru Power Cut: ಬೆಂಗಳೂರಿನ ಯಶವಂತಪುರ, ಕತ್ರಿಗುಪ್ಪೆ ಸೇರಿ ಹಲವೆಡೆ ಇಂದು ಪವರ್ ಕಟ್
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಿಸ ಬೇಕಾ, ಬೇಡವಾ? ಇಂದಿನಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ KERC
TV9 Web
| Updated By: ಸುಷ್ಮಾ ಚಕ್ರೆ|

Updated on: Jan 05, 2022 | 6:03 AM

Share

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣೆ ಮತ್ತು ಇತರೆ ಕೆಲಸಗಳು ನಡೆಯುತ್ತಿರುವುದರಿಂದ ಇಂದು (ಜ. 5) ಸಿಲಿಕಾನ್ ಸಿಟಿಯ ಕೆಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬೆಂಗಳೂರಿನ ಎಲ್ಲಾ ನಾಲ್ಕು ವಲಯಗಳಲ್ಲಿ ಅಂದರೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ. ಬೆಂಗಳೂರಿನ ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮೀಪುರಂ, ಪದ್ಮನಾಭನಗರ, ಶಾಂತಿನಗರ, ಕತ್ರಿಗುಪ್ಪೆ ಮುಂತಾದ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ. 

ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತವಾದರೆ, ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾದರೆ, ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಂಗಳೂರಿನ ಉತ್ತರ ವಲಯದಲ್ಲಿ ರಾಜಾಜಿನಗರ, ಶ್ರೀರಾಮಪುರಂ, ನಾಗಪ್ಪ ಬ್ಲಾಕ್, ಯಶವಂತಪುರ, ಗುರುಮೂರ್ತಿ ರೆಡ್ಡಿ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಡಿಜೆ ಹಳ್ಳಿ, ಮೋದಿ ರಸ್ತೆ, ಹೆಗ್ಡೆ ನಗರ, ವಿನಾಯಕ ನಗರ, ದ್ವಾರಕಾ ನಗರ, ಯಲಹಂಕ ಹಳೆಯ ಪಟ್ಟಣ, ಜಕ್ಕೂರು, ರವೀಂದ್ರನಗರ, ಸಂತೋಷನಗರ , ಕಲ್ಯಾಣ್ ನಗರ, ಪ್ರಶಾಂತ್ ನಗರ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಬೋವಿಪಾಳ್ಯ, ಮಹಾಲಕ್ಷ್ಮಿ ಪುರಂ, ಶ್ರೀ ರಾಮನಗರ ಮತ್ತು ಜೆ.ಸಿ. ನಗರದಲ್ಲಿ ಇಂದು ವಿದ್ಯುತ್ ಸಂಪರ್ಕ ಇರುವುದಿಲ್ಲ.

ದಕ್ಷಿಣ ವಲಯದಲ್ಲಿ ಲಕ್ಷ್ಮಿ ರಸ್ತೆ, ಶಾಂತಿನಗರ, ವಿನಾಯಕ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಶ್ರೀನಿವಾಸ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಶಾಸ್ತ್ರಿ ನಗರ ಮುಖ್ಯ ರಸ್ತೆ, ಕೆಆರ್ ರಸ್ತೆ, ಕಿಡ್ನಿ ಫೌಂಡೇಶನ್, ಪದ್ಮನಾಭನಗರ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ, ಜೆಪಿ ನಗರ 5 ನೇ ಹಂತ ಲೇಔಟ್, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ, ಭುವನೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಈಜಿಪುರ, ವಿವೇಕನಗರ, ಜಗದೀಶ್‌ನಗರ, ಶಿವಾನಂದನಗರ, ಕುವೆಂಪು ರಸ್ತೆ, ವೀರಭದ್ರನಗರ, ಮರಾಠಿ ಕಾಲೋನಿ, ಕುವೆಂಪು ರಸ್ತೆ, ವೀರಭದ್ರನಗರ, ಮರಾಠಿ ಕಾಲೋನಿ ಗೇಟ್ ಮತ್ತು ಗೊಟ್ಟಿಗೆರೆಯಲ್ಲಿ ಕರೆಂಟ್ ಇರುವುದಿಲ್ಲ.

ಪೂರ್ವ ವಲಯದಲ್ಲಿ ಮುನಿರೆಡ್ಡಿ, ಕೆಆರ್ ಪುರಂ, ಕಸ್ತೂರಿ ನಗರ, ಕೆಜಿ ಪುರ ಮುಖ್ಯರಸ್ತೆ, ಬಾಣಸವಾಡಿ, ಬೈರತಿ, ಬೈರತಿ ಗ್ರಾಮ, ಥಣಿಸಂದ್ರ ಮುಖ್ಯರಸ್ತೆ, ಸಾರಾಯಿಪಾಳ್ಯ, ಎಂಎಸ್ ರಾಮಯ್ಯ ಉತ್ತರ ನಗರ ಮತ್ತು ಗೋವಿಂದಪುರ ಮುಖ್ಯರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ಪಶ್ಚಿಮ ವಲಯದಲ್ಲಿ ಬಾಪೂಜಿ ನಗರ, ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್‌ಎಫ್‌ಐಸಿ ರಸ್ತೆ, ಬಲಶಾಪಲ್ಲಿಯ ರಸ್ತೆ, ಉತ್ತರಹಳ್ಳಿ ರಸ್ತೆ, ಕೊಂಚಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆ, ಬಿಎಚ್‌ಇಎಲ್ ಲೇಔಟ್, ಡಿ ಗ್ರೂಪ್ 4ನೇ ಬ್ಲಾಕ್, ಬಸಪ್ಪನಪಾಳ್ಯ, ತಿಮ್ಮೇಗೌಡನಪಾಳ್ಯ , ಬಿಡಿ ಕಾಲೋನಿ, ಅಪೂರ್ವ ಲೇಔಟ್, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್, ಆರ್‌ಆರ್ ಲೇಔಟ್, ಕುವೆಂಪು ಮುಖ್ಯ ರಸ್ತೆ, ಜಿಕೆ ಗಲ್ಲಿ ರಸ್ತೆ ಮತ್ತು ಗಂಗಾನಗರದಲ್ಲಿ ಇಂದು (ಬುಧವಾರ) ಕರೆಂಟ್ ಇರುವುದಿಲ್ಲ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಸಂಜೆ 5ರವರೆಗೆ ಪವರ್ ಕಟ್

Bengaluru Power Cut: ಬೆಂಗಳೂರಿಗರಿಗೆ ವರ್ಷಾಂತ್ಯಕ್ಕೆ ಪವರ್ ಕಟ್ ಶಾಕ್; ಕೆಂಗೇರಿ, ಮತ್ತಿಕೆರೆ ಸೇರಿ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!