AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಟ್ಟಿಹಾಕಲು ವೀಕೆಂಡ್ ಕರ್ಫ್ಯೂ: ಸರ್ಕಾರದ ಒಂದು ಕ್ರಮಕ್ಕೆ ನಗರದ ಜನತೆ ಆಕ್ಷೇಪ, ಏನದು?

ನಗರ ಪ್ರದೇಶಗಳಲ್ಲಿನ ಜನತೆ ಸರ್ಕಾರದ ಒಂದು ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಬ್ಬು, ಬಾರು, ಬೀರಿಗೆ ಕಡಿವಾಣ ಹಾಕುವುದು ಸಮಂಜಸ. ಮಾಲ್​, ಮಾರ್ಕೆಟ್​, ಸಿನಿಮಾ ಅಂತಹಜನಜಂಗುಳಿ ಪ್ರದೇಶಗಳಿಗೆ ಬೇಲಿ ಹಾಕುವುದು ಸೂಕ್ತ. ಅದರೆ ಕೊರೊನಾ ಕಾಲದಲ್ಲಿ ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಪಾರ್ಕ್​ಗಳಿಗೆ ಬೀಗ ಹಾಕುವುದು ಸರ್ವತಾ ಸಾಧುವಲ್ಲ ಎಂದು ಕಿಡಿಕಾರಿದ್ದಾರೆ.

ಕೊರೊನಾ ಕಟ್ಟಿಹಾಕಲು ವೀಕೆಂಡ್ ಕರ್ಫ್ಯೂ: ಸರ್ಕಾರದ ಒಂದು ಕ್ರಮಕ್ಕೆ ನಗರದ ಜನತೆ ಆಕ್ಷೇಪ, ಏನದು?
ಕೊರೊನಾ ಕಟ್ಟಿಹಾಕಲು ವೀಕೆಂಡ್ ಕರ್ಫ್ಯೂ: ಸರ್ಕಾರದ ಒಂದು ಕ್ರಮಕ್ಕೆ ನಗರದ ಜನತೆ ಆಕ್ಷೇಪ, ಏನದು?
TV9 Web
| Updated By: ಸಾಧು ಶ್ರೀನಾಥ್​|

Updated on:Jan 05, 2022 | 9:32 AM

Share

ಬೆಂಗಳೂರು: ದಿನೇದಿನೆ ಮಹಾಮಾರಿ ಕೊರೊನಾ ಮತ್ತೊಂದು ರೌಂಡು ತನ್ನ ಆಟ ಶುರುವಿಟ್ಟುಕೊಂಡಿದೆ. ಈ ಮಧ್ಯೆ ಆಯಾ ಸರ್ಕಾರಗಳೂ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಸೋಂಕನ್ನು ಕಟ್ಟಿಹಾಕಲು ಸಜ್ಜಾಗಿ ನಿಂತಿವೆ. ಈ ಮಧ್ಯೆ ನಗರ ಪ್ರದೇಶಗಳಲ್ಲಿನ ಜನತೆ ಸರ್ಕಾರದ ಒಂದು ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಬ್ಬು, ಬಾರು, ಬೀರಿಗೆ ಕಡಿವಾಣ ಹಾಕುವುದು ಸಮಂಜಸ. ಮಾಲ್​, ಮಾರ್ಕೆಟ್​, ಸಿನಿಮಾ ಅಂತಹ ಜನಜಂಗುಳಿ ಪ್ರದೇಶಗಳಿಗೆ ಬೇಲಿ ಹಾಕುವುದು ಸೂಕ್ತ. ಅದರೆ ಕೊರೊನಾ ಕಾಲದಲ್ಲಿ ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಪಾರ್ಕ್​ಗಳಿಗೆ ಬೀಗ ಹಾಕುವುದು ಸರ್ವತಾ ಸಾಧುವಲ್ಲ ಎಂದು ಧನುರ್ಮಾಸದ ನಡುಗುವ ಚಳಿಯಲ್ಲೂ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಹೌದು, ವೀಕೆಂಡ್ ಕರ್ಫ್ಯೂಗೆ ವಾಕರ್ಸ್ ವಿರೋಧ ವ್ಯ್ತಪಡಿಸಿದ್ದು, ಪಾರ್ಕ್ ಗಳನ್ನೂ ಕ್ಲೋಸ್ ಮಾಡಿದ್ರೆ ಹೇಗೆ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರ, ಪಟ್ಟಣ ಪ್ರದೇಶಗಳಲ್ಲಿ ಬಿಪಿ, ಶುಗರ್ ಅಂತಹ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿರುತ್ತವೆ. ದಿನಾವೂ ವಾಕಿಂಗ್, ಜಾಗಿಂಗ್ ಮಾಡಿ ಜನ ತಮ್ಮಾರೋಗ್ಯವನ್ನು ಸುಸ್ಥಿತಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಅಂತಹುದರಲ್ಲಿ ವಾರಕ್ಕೆ ಎರಡು ದಿನ ಕಂಪ್ಲೀಟ್ ಬಂದ್ ಮಾಡಿದ್ರೆ ಕಷ್ಟ ಕಷ್ಟವಾಗುತ್ತದೆ. ಇದರಿಂದ ಇತರೆ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತವೆ. ಮನೆ ಸುತ್ತಮುತ್ತ ಪಾರ್ಕ್ ಗಳು ಇರೋಲ್ಲ, ದೂರದ ಕಬ್ಬನ್ ಪಾರ್ಕ್,​ ಲಾಲ್ ಬಾಗ್ ಅಂತಹ ವಿಶಾಲ ಪಾರ್ಕುಗಳೂ ಕೂಡ ಕ್ಲೋಸ್ ಮಾಡಿಬಿಟ್ಟರೆ ಹೇಗೆ ಎಂದು ಜನ ಪ್ರಶ್ನಿಸಿತೊಡಗಿದ್ದಾರೆ.

ವಾಕರ್ಸ್ ಗಳಿಗಂತಾನೇ ಒಂದು ಸಮಯಾವಕಾಶ ಕೊಡಿ. ಬೆಳಗ್ಗೆ 6 ರಿಂದ 9 ಗಂಟೆ ಹಾಗೂ ಸಂಜೆ ವಾಕಿಂಗ್ ಗೆ ಅವಕಾಶ ಕೊಡ್ಬೇಕು. ಇದರಿಂದ ಆರೋಗ್ಯ ಸಮಸ್ಯೆ ಇರೋರಿಗೆ ವಾಕಿಂಗ್​, ಜಾಗಿಂಗ್ ಮಾಡಲು ತುಂಬಾ ಅನುಕೂಲ ಆಗುತ್ತೆ. ಈಗ ಯಾರೂ ಮೊದಲಿನ ರೀತಿ ಒಟ್ಟಿಗೆ ಸೇರೊಲ್ಲ. ಜನರಿಗೆ ಗುಂಪು ಸೇರಬಾರದು ಅನ್ನೊ ಅರಿವಿದೆ. ಹಾಗಾಗಿ ಪಾರ್ಕ್​ಗಳನ್ನು ವಾಕಿಂಗ್​ಗಾಗಿ ಮುಕ್ತವಾಗಿರಿಸಿ ಎಂದು ವಾಕರ್ಸ್ ಮೊರೆಯಿಟ್ಟಿದ್ದಾರೆ.

ಇದನ್ನು ಓದಿ: ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ ಇದನ್ನು ಓದಿ: Karnataka Weekend Curfew: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; ಬೆಂಗಳೂರಿನಲ್ಲಿ 10, 12ನೇ ತರಗತಿಗೆ ಮಾತ್ರ ಆಫ್​ಲೈನ್ ಕ್ಲಾಸ್

Published On - 9:27 am, Wed, 5 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ